ಶ್ರೀಹರಿಸ್ತುತಿ
ಅಕ್ಕಾ ನೋಡೆ ಚಿಕ್ಕ ಕೃಷ್ಣನೂ
ಪೊಕ್ಕಿಹ ರಿಂದಾವನಕೀಗ ಬಾ ಪ.
ಸಿಕ್ಕನೆ ಪೋಗದಿರೆ ಲಕ್ಕುಮಿಯರಸ
ದಕ್ಕಿಸಿಕೊಳ್ಳೆವೆ ಸಿಕ್ಕದೆ ಬಿಟ್ಟಾರೆ ಅ.ಪ.
ಸದ್ದು ಮಾಡದೆ ಬನ್ನಿ ಇಲ್ಲಿದ್ದವರೆಲ್ಲ
ಮುದ್ದು ಶ್ರೀ ಕೃಷ್ಣನ ಬಳಸುವ ಬಾರೆ
ವಾಹನ ಎದ್ದು ಅಭಯನೀವ
ಶುದ್ಧ ಕೋಲಾಟಕೆ ಸಿದ್ಧನಾಗುವನೆ 1
ನವನೀತ ಚೋರನ
ರವಿಶತಕೋಟಿ ಕಿರೀಟ ಪ್ರಕಾಶ
ಜವದಿ ಪೊಳೆವ ಗೋವಲಯಪಾಲನ
ಅವನೀಧವನೊಲಿಸಲು ಪೋಗುವ ಬಾ 2
ಆರಿಗೂ ಸಿಗನೆ ನಾರದ ವಂದ್ಯನೆ
ತಾರಕೆಗಳ ಮಧ್ಯ ಚಂದ್ರನಂತಿಹನೆ
ನಾರಾಯಣ ಶ್ರೀ ಶ್ರೀನಿವಾಸನ
ಸೇರಿ ಸುಖವ ಸುರಿಸಲು ತವಕದಿ 3