ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೆ ದಯ ಬಾರದೋ ಶ್ರೀಕಾಂತ ನಿನಗೆ ಲೋಕನಾಯಕ ಎಷ್ಟು ಬೇಡಲೋ ಪ ಜೋಕೆಯಿಂ ಸಾಕುವರದಾರೋ ಅ.ಪ ನಿನ್ನ ಮನವಿನ್ನೆಷ್ಟು ಕಠಿಣವೋ ಮುನ್ನ ಮಾರುತಿಯೊಡನೆ ಮಸಗಿದೆ ಎನ್ನೊಳಗೆ ನಿರ್ದಯೆಯೊಳಿರುವುದು ಚೆನ್ನವಲ್ಲವೊ ಇನ್ನು ಚೆನ್ನಿಗ 1 ಕಾಣೆನೇ ಸುಧನ್ವನಂ ಕೊಲೆ ಜಾಣ ತನವನು ತೋರ್ದನಿನ್ನನು ಬಾಣ ತ್ರಾಣವನಣುಗನೆನ್ನೊಳು ಮಾಣು ಶಿವಧನುಭಂಗನಿಪುಣ2 ಮಕ್ಕಳನು ಹಡೆದವರು ಒಮ್ಮನ ದಕ್ಕರೆಯ ಬೀರುತ್ತ ಸಲಹರೆ ಮಕ್ಕಳಾಟಿಕೆ ಮಾಡುವೊಡೆ ನೀ ದಕ್ಕುವರೆ ನಿನ್ನಡಿಯ ದಾಸರು 3 ಸರ್ವಶಕ್ತನು ಆದರೇಂ ಫಲ ಸರ್ವದಾ ಭಕ್ತರಿಗೆ ಕಷ್ಟವೆ ನಿರ್ವಿಕಲ್ಪನೆ ಮರ್ಮವೇತಕೆ ಧರ್ಮವ್ರತ ಪೊರೆ ಜಾಜಿಕೇಶವ 4
--------------
ಶಾಮಶರ್ಮರು