ಪಾಂಡು ರಂಗ ವಿಠಲ | ಪೊರೆಯ ಬೇಕಿವಳ ಪ
ಕುಂಡಲಿಯ ಶಯ್ಯ ಬ್ರ | ಹ್ಮಾಂಡದೊಡಿಯಾ ಅ.ಪ.
ಹಸುಳೆ ತನ ಸ್ವಾಪದಲಿ | ಎಸೆವ ನಂಜುಡೇಶದರ್ಶನಾಕಾಂಕ್ಷಿಸುತ | ನುಸುಳಿ ಗುಡಿ ಪೊಗಲೂಅಸಮ ಗುರು ಸುಧೀಂದ್ರ | ಶಿಷ್ಯರನು ತಾ ತೋರಿಎಸೆವ ಸದ್ಗತಿಗೆ ಗುರು | ದರ್ಶನವೆ ಪಥವೆಂದೇ 1
ಲೀಲೆಯೊಳ್ ತೈಜಸನು | ಮಾಲೆಧರ ದಂಪತಿಯಶೀಲ ರೂಪವ ತಾಳಿ | ಬಾಲಕಿಯ ಬಯ್ದೂ |ಏಳಲನ ಮಾಡದಲೆ | ಶೀಲ ಗುರು ಬಳಿ ಪೋಗಿಬಾಲಕಿಯು ಪರಮಾನ್ನ | ಮೆಲುವಂತೆ ಮಾಡ್ಡಾ 2
ಗುರು ಹಿರಿಯರಾ ಸೇವೆ | ಹರಿಯಲ್ಲಿ ಸದ್ಭಕುತಿವರಜ್ಞಾನ ಪಾಲಿಸುತ | ಮೆರೆಸೊ ಈ ಶಿಶುವವರ ಪ್ರದಯಕನಾಗಿ | ಸರುವ ಸದ್ಧಭಿಲಾಷೆಗರೆನು ಹರ್ಷವನೀಯೋ | ಮರುತಾಂತರಾತ್ಮಾ 3
ಕಲಿಹೆಚ್ಚದಾ ಯುಗವು | ಸತಿಮಂತ್ರ ತಂತ್ರಗಳುಫಲಿಸಲಾರವು ಹರಿಯೆ | ಜಲಜನಾಭಾಚೆಲುವ ತವನಾಮ ಸ್ಮøತಿ | ಘಳಿಗೆ ಬಿಡದಲೆ ಕೊಟ್ಟುಒಲಿಯೊ ಕಾರುಣ್ಯನಿಧಿ | ಬಾಲ ಗೋಪಾಲ4
ಪಾವನದ ಅಂಕಿತವ | ಓದಿ ಸೂಚಿಸಿದಂತೆತಾವಕಳಿಗಿತ್ತಿಹೆನು | ಶ್ರೀ ವರನೆ ಹರಿಯೇ |ದೇವ ದೇವೇಶಗುರು | ಗೋವಿಂದ ವಿಠ್ಠಲನೆನೀ ವೊಲಿದು ದಾಸತ್ವ | ಭಾವ ಸಿದ್ಧಿಪುದೋ 5