ರಾಮಾಯನ್ನಿ ರಾಮಾಯನ್ನಿ ರಾಮಯನ್ನಿರೈ |
ವಿಷವಾಧರಿಸಿ ಶೆಖೆ ಘಸಣೆಗಾರದೇ ಶಿವಾ |
ವಸೆದು ಜಪಿಸಲು ನಾಮಾ ಸ್ವಖಾನಂದವ ನಿತ್ತಾ 1
ಗಿಳಿಯ ನುಡಿಸುವ ನೆವದಲಿ ಗಣಿಕಾನನದಲಿ |
ವಳಿದು ಬರಲು ನಿಂದಾಚಲ ಪದವಿಯಿತ್ತಾ 2
ಒಂದು ಗ್ರಾಮದಿ ದೈತ್ಯರಿಂದಾ ದಂಪತಿಗಳಾ |
ಬಂದು ಬಾಧೆ ಬಿಡಿಸಿ ಛಂದದಿ ಸಲುಹಿದಾ 3
ಕುಂದು ಕೊರತೆಗಳಾ ಒಂದು ನೋಡದೇ ಬಂದು |
ತಂದೆ ಮಹಿಪತಿಸ್ವಾಮಿ ಹೊಂದಿದ್ದವರ ಕಾವಾ 4