ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂದನಿಗೆ ಕಾಲಿಲ್ಲವಮ್ಮ, ಪುಟ್ಟಿ-ಪ ದಂದಿಂದ ಈ ಅಂಬೆಗಾಲು ಬಿಡದಮ್ಮ ಅ.ಪ ಮಳೆ ಹೊಳೆ ಕತ್ತಲೊಳು ತರಳ ಮಗ ಬೆದರಿದನೊಕಳೆಯುಳ್ಳ ಮುಖಕೀಗ ಗ್ರಹ ಸೋಕಿತೋಎಳೆಯ ಬೆಳದಿಂಗಳೋಳೆತ್ತಣ ದೃಷ್ಟಿ ತಾಕಿತೊಲಲನೆ ಮೀಸಲ ಹಾಲು ಮೆರೆದೆರೆದ ಪರಿಯೊ 1 ಬೆಣ್ಣೆಯನು ಮೆಲ್ಲುತ ಬೆದರಿ ಬಾಯಾರಿದನೊಉಣ್ಣೆ ಪೂತನಿ ಮೊಲೆಯ ವಿಷ ಸೋಂಕಿತೋಅಣ್ಣ ಪಾಪಿಯ ಭಯಕೆ ಅಂಜಿ ಕಾಲಿಟ್ಟನೊಹೆಣ್ಣು ದೈತೇಯರ ಕಾಲಲಿ ಬಂದ ಸರಕೊ 2 ಧುರವಿಜಯ ಶ್ರೀಕೃಷ್ಣರಾಯಗೆ ನಿಮ್ಮಹರದೇರಂದವ ತೋರಬಂದ ಪರಿಯೋಧರೆಗಧಿಕ ವಿದ್ಯನಗರವಳಿತೆಂದು ಉದಯಗಿರಿಯಿಂದ ಬಂದ ಮುದ್ದು ಬಾಲಕೃಷ್ಣಗೆ 3
--------------
ವ್ಯಾಸರಾಯರು
ಪೂರ್ವಜನ್ಮದಲಿ ನಾ ಮಾಡಿದಾ ಭವದಿಂದಉರ್ವಿಯೊಳು ಜನಿಸಿದೆನೊ ಕೃಷ್ಣ ಪಕಾರುಣ್ಯನಿಧಿಯನ್ನ ಕಾಯಬೇಕಯ್ಯಹರಿವಾರಿಜನಾಭನೇ ಮುದ್ದುಕೃಷ್ಣ ಅ.ಪಹುಟ್ಟಿದಂದಿಂದಿಗೂ ಸುಖವ ನಾ ಕಾಣದಲೆಕಷ್ಟನಾದೆನು ಕೇಳೊ ಕೃಷ್ಣತೊಟ್ಟಿಲಿನ ಶಿಶು ತಾಯ ಬಿಟ್ಟ ತೆರನಂತೆ ಕಂಗೆಟ್ಟು ಸೊರಗಿದೆನಯ್ಯ ಕೃಷ್ಣಮುಟ್ಟಲಮ್ಮರು ಎನ್ನಸತಿಸುತರು ಬಾಂಧವರುಅಟ್ಟಿ ಎಳೆಯುತ್ತಿಹರೋ ಕೃಷ್ಣಕಷ್ಟ ದಾರಿದ್ರ್ಯವನು ಪರಿಹರಿಸದಿರೆ ದೂರುಮುಟ್ಟುವುದು ನಿನಗಯ್ಯ ಕೃಷ್ಣ 1ಕಾಶಿಯಾವಾಸವನು ಬಯಸಿ ಬಹುದಿನದಿಂದಆಸೆಯೊಳಗಿದ್ದೆನಯ್ಯ ಕೃಷ್ಣಗಾಸಿಯನು ಮಾಡದಲೆ ದೋಷವನು ಪರಿಹರಿಸೊಸಾಸಿರನಾಮದ ಕೃಷ್ಣಹೇಸಿಕೆಯೊಳಿರ್ದ ಸಂಸಾರವೆಂಬುವ ಮಾಯಪಾಶದಿಂದಲಿ ಬಿಗಿದರೇ ಕೃಷ್ಣಕಂಸಮರ್ದನನೆ ನೀ ಕಾಯಬೇಕಯ್ಯಹರಿವಾಸುದೇವನೆ ಮುದ್ದು ಕೃಷ್ಣ 2ಲೋಕದೊಳಗೆನ್ನನು ಪೋಲ್ಪ ಪಾಪಿಗಳನ್ನುನೀ ಕಂಡು ಬಲ್ಲೆಯಾ ಕೃಷ್ಣಸಾಕಿನ್ನು ಎನಗೊಂದು ಗತಿಯ ತೋರಿಸಿ ಸದ್ವಿವೇಕಿಯನೆ ಮಾಡಯ್ಯ ಕೃಷ್ಣರಾಕೇಂದುಮುಖಿ ದ್ರೌಪದಿಯಮಾನವಕಾಯ್ದೆಆಕೆಗಕ್ಷಯವಿತ್ತೆ ಕೃಷ್ಣ ಪಿನಾಕಿಸಖಪುರಂದರವಿಠಲನೆ ಉಡುಪಿಯ ವಾಸಸಾಕಿ ಸಲಹೈ ಎನ್ನ ಕೃಷ್ಣ
--------------
ಪುರಂದರದಾಸರು