ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ಪ ಶ್ರಾವಣ ಶುಕ್ರವಾರದಲಿ ಸಾವಧಾನ ಮನದಿ ನಿತ್ಯ ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ 1 ಹೆತ್ತತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ ಭೃತ್ಯವರ್ಗವನ್ನು ಪೊರೆದು ನಿತ್ಯಲೋಕ ಮಾತೆಗೀಗ 2 ಚಿಂತಿತಾರ್ಥನೀವ ಲಕ್ಷ್ಮೀಕಾಂತನುರ ಸ್ಥಳದಿ ನಿಂತು ದಂತಿವರದನನಂತ ಗುಣಗಳನಂತಗಾಣದಿರುವಳಿಗೆ 3
--------------
ಲಕ್ಷ್ಮೀನಾರಯಣರಾಯರು
ದಂತಿವದನ ವಿಘ್ನದಂತಿನಿಚಯಕೆ ಹರಿ ದಂತಿವರದನ ಪ್ರಪೌತ್ರ ವಿನಂತಿಯ ಕೇಳೊ ಪ ಕಂತುವೈರಿಯ ಪುತ್ರ ಪರಮ ಪವಿತ್ರ ಕಳತ್ರ 1 ಸಾದರಲಿ ನಿನ್ನಾರಾಧಿಸುವೆ ಮುನ್ನ ನೀ ದಯದಿ ವಿಘ್ನ ನಿವಾರಿಸೊ ಮೋದಕ ಪ್ರಿಯಾ 2 ರಂಗೇಶವಿಠಲನ ರಾಗದಿಂ ಪಾಡುತ ಮಂಗಳ ಮೂರುತಿಯೆ ಉತ್ತಂಗ ಪ್ರಭಾವ 3
--------------
ರಂಗೇಶವಿಠಲದಾಸರು