ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ಪ ಶ್ರಾವಣ ಶುಕ್ರವಾರದಲಿ ಸಾವಧಾನ ಮನದಿ ನಿತ್ಯ ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ 1 ಹೆತ್ತತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ ಭೃತ್ಯವರ್ಗವನ್ನು ಪೊರೆದು ನಿತ್ಯಲೋಕ ಮಾತೆಗೀಗ 2 ಚಿಂತಿತಾರ್ಥನೀವ ಲಕ್ಷ್ಮೀಕಾಂತನುರ ಸ್ಥಳದಿ ನಿಂತು ದಂತಿವರದನನಂತ ಗುಣಗಳನಂತಗಾಣದಿರುವಳಿಗೆ 3
--------------
ಲಕ್ಷ್ಮೀನಾರಯಣರಾಯರು
ಎಂತು ಜೀವಿಪೆನಯ್ಯಾ ನಿನ್ನನಗಲಿ ನಾನು ಶಾಂತ ಮೂರುತಿ ಕೃಷ್ಣ ಕೃಷ್ಣಯ್ಯಾ ಪ ದಂತಿವರದ ಭಕ್ತ ಚಿಂತಾಮಣಿಯೆ ಲಕ್ಷ್ಮೀ ಕಾಂತ ಸಕಲ ಜಗದಂತರಾತ್ಮಕ ದೇವ ಅ.ಪ. ಅಂಗಜಪಿತ ನಿನ್ನ ಅನುಪಮ ರೂಪವ ನಿತ್ಯ ನೋಡಿ ನಲಿಯುತ ತುಂಗಮಹಿಮ ನಿನ್ನ ಘನ ಕೃಪೆಯಿಂದ ಅಂತ- ರಂಗದ ಭಕ್ತ ನಾನೆಂದೆನಿಸಿರಲಾಗಿ ಮಂಗಳಾಂಗ ಮನೋಹರ ನಿನ್ನ ಸಂಗ ಬಿಟ್ಟಿರಲಾರೆನೋ ಸ್ವಾಮಿ ರಂಗ ಎನ್ನಂತರಂಗವರಿಯಯಾ ಇಂಗಿತಜ್ಞ ನೀನಲ್ಲವೇ ಕೃಷ್ಣ 1 ಇಂದಿರೇಶನೆ ನಿನ್ನ ಚರಿತೆಯ ಕೇಳಿ ಆ- ನಂದದ ಸವಿ ಕಂಡೆ ಪುಣ್ಯಾತ್ಮರಿಗೆ ಬೇರೆ ಒಂದರಲಭಿರುಚಿ ತೋರ್ಪುದೆ ಗುಣಗಣ ಸಿಂಧು ನಿನ್ನನು ಬಿಟ್ಟೇನೊಂದ ನಾನೊಲ್ಲೆನು ಸಿಂಧು ಮಂದಿರ ಸುಂದರ ನಿನ್ನ ಪೊಂದಿಕೊಂಡಿಹನಲ್ಲವೇ ಕೃಷ್ಣ ತಂದೆ ಕೈ ಬಿಡಬೇಡವೊ ಎಳ- ಗಂದಿಯೆಂಬುದ ನೆನೆದು ಪಾಲಿಸೊ 2 ದೋಷ ರಹಿತ ಯಾದವೇಶ ಭಕ್ತರ ಪೋಷ ಶ್ರೀಶ ಕರಿಗಿರೀಶ ಸಕಲ ಲೋಕೇಶ ಪಾದ ಭೂಸುರ ಪ್ರಿಯ ಎನ್ನ ದೋಷಗಳೆಣಿಸದೆ ನೀ ಸಲಹಲಿ ಬೇಕೊ ವಾಸುದೇವ ಪರಾತ್ಪರ ಕೃಷ್ಣ ಕ್ಲೇಶ ಪರಿಹರನಲ್ಲವೆ ಸ್ವಾಮಿ ದಾಸ ಜನರಭೀಷ್ಟದಾಯಕ ನಾ ಶರಣು ಹೊಕ್ಕಿಹೆನು ರಕ್ಷಿಸು 3
--------------
ವರಾವಾಣಿರಾಮರಾಯದಾಸರು
ದಂತಿವದನ ವಿಘ್ನದಂತಿನಿಚಯಕೆ ಹರಿ ದಂತಿವರದನ ಪ್ರಪೌತ್ರ ವಿನಂತಿಯ ಕೇಳೊ ಪ ಕಂತುವೈರಿಯ ಪುತ್ರ ಪರಮ ಪವಿತ್ರ ಕಳತ್ರ 1 ಸಾದರಲಿ ನಿನ್ನಾರಾಧಿಸುವೆ ಮುನ್ನ ನೀ ದಯದಿ ವಿಘ್ನ ನಿವಾರಿಸೊ ಮೋದಕ ಪ್ರಿಯಾ 2 ರಂಗೇಶವಿಠಲನ ರಾಗದಿಂ ಪಾಡುತ ಮಂಗಳ ಮೂರುತಿಯೆ ಉತ್ತಂಗ ಪ್ರಭಾವ 3
--------------
ರಂಗೇಶವಿಠಲದಾಸರು
ಮದನ ಮೋಹನ ಕೃಷ್ಣ ಉದಧಿ ಶಯನ ಹರಿ ಮಾಧವನ ಪ ಮದಗಜಗಮನೆ ಶ್ರೀ ಪದುಮಲೋಚನೆ ಪ್ರಿಯ ಅದ್ಭುತ ಮಹಿಮ ಶ್ರೀ ಅಚ್ಚುತನ ಅ.ಪ ಇಂದಿರೆ ರಮಣ ಗೋವಿಂದನ ಮಹಿಮೆಯ ಒಂದೆ ಮನದಿ ಸ್ತುತಿಸುವ ಜನರ ಕುಂದೆಣಿಸದೆ ಮುಚುಕುಂದ ವರದ ಹೃನ್ಮಂದಿರದಲಿ ನಲಿದಾಡುವನು 1 ಗೋಕುಲಪತಿ ಜಗದ್ವ್ಯಾಪಕ ಹರಿ ಎಂದ- ನೇಕ ವಿಧದಿ ಸ್ತುತಿಸುವ ಜನರ ಶೋಕಗಳಳಿದು ಏಕಾಂತ ಭಕ್ತರೊಳಿಟ್ಟು ತೋಕನಂದದಿ ಪರಿಪಾಲಿಸುವ 2 ಪದ್ಮನಾಭನ ಪಾದಪದ್ಮವ ಸ್ಮರಿಸುತ ಶುದ್ಧಮನದಿ ಪಾಡಿ ಪೊಗಳುವರಾ ಸಿದ್ಧಾರ್ಥನಾಮ ವತ್ಸರದಲಿ ಸುಜನರ ಹೃದ್ರೋಗವಳಿಯುತ ಸಲಹುವನೂ 3 ಚಿಂತೆ ಎಲ್ಲವ ಬಿಟ್ಟೀ ವತ್ಸರದಲಿ ಲಕ್ಷ್ಮೀ- ಕಾಂತನನೇಕ ವಿಧದಿ ಸ್ಮರಿಸೆ ದಂತಿವರದ ಅನಂತ ಮಹಿಮ ತನ್ನ ಕಾಂತೆ ಸಹಿತ ಒಲಯುವನವರ್ಗೆ4 ಕಮಲಸಂಭವಪಿತ ನಮಿಸಿ ಸ್ತುತಿಸುವೆನು ಕಮಲ ಪತ್ರಾಕ್ಷಹರಿ ಕರುಣಾನಿಧೆ ಕಮಲನಾಭ ವಿಠ್ಠಲ ವಿಠ್ಠಲ ರಕ್ಷಿಸೆನೆ ಹೃ- ತ್ಕಮಲದಿ ಪೊಳೆಯುವ ಸುಜನರಿಗೆ5
--------------
ನಿಡಗುರುಕಿ ಜೀವೂಬಾಯಿ
ಯೋಗಧರತಾತಕಘ ಲೋಕಪತಿ ದೇವಸಿರಿ|ಯೋಗ ನಿನ ಪದಕೆ ಶರಣೆಂಬುವೆನೊ ಕಾಯೋ ಪಯೋಗಾಂಡದೊಳ ಹೊರಗೆ ವ್ಯಾಪ್ತನೆ ಗುಣರಹಿತನೆ |ಯೋಗಾಂಬರ ಧರ ಘ-ಮುಖ ಜನಕ ||ಯೋಗಗಾತ್ರಷ ದೂರ ವರ್ಗದ್ವಯ ಅವತಾರ |ಯೋಗ ಪಾಣೀ ಸುತ ಪ್ರಿಯ ಸುಮತಿ ಕೊಡು ಜೀಯ 1ಯೋಗರಾಯಗೆ ಅದೇಪದವಿಕರುಣಿಸಿ ಕೊಟ್ಟೆ |ಯೋಗೇಶಣಾಸ್ತ್ರ ಪಿತದಂತಿವರದ||ಯೋಗದಲಿ ಮನಸು ನಿಶ್ಚೈಸೊ ಹಾ ಕರ್ತೃತ್ವ |ಯೋಗಫಲ ಸ್ವೀಕರಿಸುತಿಹ ಕಂಜನಾಭ 2ಯೋಗನಾಗೆಯೋ ದುರ್ಮತಿಗಳಿಗೆಂದಿಗೂ ನೀನು |ಯೋಗಿಜನ ವಂದ್ಯ ಹಾ ನಾರೀಪತಿ ನಿನ್ನ ||ಯೋಗ ಸೇವಕರೊಳಿಡೋ ಪ್ರಾಣೇಶ ವಿಠ್ಠಲನೇ |ಯೋಗ ಹ್ರಾಸ ವಿವರ್ಜ ಘಟಜ ಕರಪೂಜ್ಯ 3
--------------
ಪ್ರಾಣೇಶದಾಸರು