ಶ್ರೀ ಗಣೇಶ
ಕ್ಷಿಪ್ರ ಪ್ರಸಾದನೆ ಪ್ರಣಮಿಸುವೆ ಕರುಣಾಳು
ವಿಪ್ರ ಪ್ರಬುಧ್ಧರಿಗೆ ಪ್ರಿಯತರ ಗಣೇಶ
ಅಪ್ರತಿಸುಪೂರ್ಣ ಸಚ್ಛಕ್ತಿಸ್ವರೂಪನು
ಸುಪ್ರಕಟ ನಿನ್ನೊಳು ಪ್ರಭಂಜನಸಮೇತ ಪ
ಬಾಲಾರ್ಕನಿಭ ವಸ್ತ್ರ ತನುಮಾಲ್ಯ ಲೇಪನದಿ
ಹೊಳೆಯುವ ಮಹೋದರ ಗಜಾನನ ಸುಫಲದ
ಥಳಥಳಿಪ ಪಾಶ ದಂತಾಂಕುಶಾಭಯಹಸ್ತ
ಒಲಿದು ವಿಘ್ನವ ಕಳೆದು ಕಾಮಿತಾರ್ಥವನೀವೆ 1
ನಿಖಿಳ ಲೋಕಂಗಳ
ಮುಕ್ತಾಮುಕ್ತರ ಸರ್ವಧಾರಕಾಕಾಶ
ಏಕಾತ್ಮ ವಿಶ್ವನು ಪ್ರಕಾಶಿಪನು ನಿನ್ನೊಳು
ಶಂಕರಾತ್ಮಜ ಭೂತಾಕಾಶಾಭಿಮಾನಿ 2
ತ್ರಾತ ಪದ್ಮಜಪಿತ ಪ್ರಸನ್ನ ಶ್ರೀನಿವಾಸನ
ಅತಿ ವಿಮಲ ನಾಭಿಧೇಶದಲಿರುವೆ ಮುದದಿ
ಅನುಜ ವಿತ್ತಪಗೆ ಸಮ ಶೇಷ
ಶತಸ್ಥರಿಗೆ ಉತ್ತಮನೆ ಗುರುವರ ನಮಸ್ತೆ 3