ಶ್ರೀ ಗಿರೀಶಾ ನಮೋ ಮಹಾದೇವಾ
ನಾಗ ಚರ್ಮಾಂಬರ ಸದಾಶಿವ ನಾಗ ಭೂಷಣ ದೇವನೆ ಪ
ನೀಲ ಲೋಹಿತ ನಿರುಪಮಚರಿತಾ |
ಬಾಲಚಂದ್ರನ ವೆತಾಳಿಲಿಟ್ಟಿ ಹಿಮಾಲಯತ್ಮಜಾ ಲಾಲನಾ
ಭಾಲಲೋಚನ ಭಕ್ತರ ಪ್ರೀಯಾ |
ನೀಲ ಗ್ರೀವಕ | ಪಾಲಿಮೂಲೋಕ ಪಾಲನಾ 1
ಗಮನ |
ಭಂಗ ಮಾಡಿದಾ |
ತುಂಗಮುನಿ ಮನೋ ಸಂಗನೇ |
ಮಂಗಳಾತ್ಮಕ ಮಹಿಮ ಅಪಾರಾ |
ಹಿಂಗ ದಂತರಂಗಲ್ಯಾಡುತಾ ಸಂಗರಹಿತ ಸಿತಾಂಗನೇ 2
ಕರುಣಾಸಿಂಧು ಕೈಲಾಸ ವಾಸೀ |
ಧರಣೀಯೊಳಗ ಬೀರುವೇ ||
ಗುರು ಮಹಿಪತಿ - ಸುತ ಸಹಕಾರೀ |
ಹರಹರಾಯನೇ ಹಾರಿಸಿ ಕಲುಷವ|
ಪರಗತಿಯನೀ ತೋರುವೇ || 3