ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ನಡಿಯ ಪೋಲುವೊ ಚೆನ್ನ ಕೆನ್ನೆಯ ತೋರು ಪ. ಚನ್ನ ಚೆಲುವೆ ಬಣ್ಣದರಿಶಿಣವ ಪೂಸುವೆನು ರನ್ನದ ಲಲಾಟಕೆ ಚನ್ನ ಕುಂಕುಮ ತಿಲಕ ಚಿನ್ನದಾ ಬೊಂಬೆ ಪದ್ಮಾವತಿ ನಿನಗೆ ತಿದ್ದುವೆನೆ ಚನ್ನಕೇಶವರಾಯ ನಿನ್ನ ಚೆಲುವಿಕೆಗೆ ಮೆಚ್ಚಿ ಬಂದಿಹೆನೆ 1 ಅರವಿಂದದಳನಯನೆ ಅಡವಿಯಲಿ ಯನ ಮೇಲೆ ಅರಸಿ ನೀ ಕಲ್ಲುಗಳ ಬೀಸಿದಾ ಕರಕೆ ಗಂಧ ಸರಸದಲಿ ಹಚ್ಚುವೆನೆ ಸರಸಿಜಾಕ್ಷಿಯೆ ಕೊರಳ ಹರುಷದಲಿ ತೋರೀಗ ನಿನ್ನ ಸರಸಿಜಾಕ್ಷಗೆ ಅರಸಿ ಪದ್ಮಿನಿಯೆ 2 ಸರ್ಪವೇಣಿಯೆ ನಿನಗೆ ಕಂದರ್ಪಪಿತ ಮಲ್ಲಿಕಾ ಪುಷ್ಪ ದಂಡೆಯನು ಮುಡಿಸುವೆನು ಕಮಲನಯನೆ ಸರ್ಪಶಯನನು ನಿನಗೆ ಅರ್ಪಿಸುವೆ ಸುತಾಂಬೂಲ ದರ್ಪವನು ಬಿಟ್ಟು ಕೈಕೊಳ್ಳೆ ವೀಳ್ಯವ ಅರಸಿ ಸರ್ವರಿಗೆ ಅಪ್ಪ ಶ್ರೀ ಶ್ರೀನಿವಾಸಾನೆಂದು ತಿಳಿಯೆ ದೇವಿ 3
--------------
ಸರಸ್ವತಿ ಬಾಯಿ
ನಿತ್ಯ ಶುಭಮಂಗಳಂ ಪ. ಹೃದಯವೆಂಬೀ ದಿವ್ಯ ಪದ್ಮಪೀಠದ ಮೇಲೆ ಪದ್ಮಾಕ್ಷಿ ಪದ್ಮೆಯನು ಕುಳ್ಳಿರಿಸಿ ಸದಮಲ ಭಾವದಿಂ ಮಧುಕೈಟಭಾಂತಕನ ಹೃದಯೇಶ್ವರಿಯ ಸೇವೆಗೈವೆ 1 e್ಞÁನವೆಂಬುವ ದಿವ್ಯ ಜ್ಯೋತಿಯಂ ಮುಂದಿರಿಸಿ ಧ್ಯಾನವೆಂಬುವ ನಿಲುವುಗನ್ನಡಿಯ ನಿಲಿಸಿ ದಾನÀವಾಂತಕ ರಾಮಚಂದ್ರಮನ ಧ್ಯಾನಿಸುತ ಜಾನಕಿಯ ಬಲಗೊಂಬೆ ಭರದಿ 2 ನೇಮನಿಷ್ಠೆಯ ಶುದ್ಧ ಹೇಮಕಲಶದಿ ಮತ್ತೆ ಭಕ್ತಿರಸದ ಪನ್ನೀರ ತುಂಬಿ ನಾಮಸಂಕೀರ್ತನೆಯ ನಾರಿಕೇಳವ ಬೆರಸಿ ಶ್ರೀನಾರಿಗಭಿಷೇಕವ ಗೈವೆ 3 ಚಿತ್ತಶುದ್ಧಿಯ ಶುಭ್ರವಸ್ತ್ರದಿ ನೇವರಿಸಿ ಸತ್ವಗುಣದ ಪೀತಾಂಬರವನುಡಿಸಿ ಕಂಚುಕ ತೊಡಿಸಿ ಚಿತ್ತಜನ ಜನನಿಯರ ನೋಡಿ ನಲಿವೆ 4 ಅಂತಃಕರಣ ಶುದ್ಧಿಯ ಅರಿಸಿನವನು ಪೂಸಿ ಶಾಂತಗುಣದ ತಿಲಕ ತಿದ್ದಿ ನಂದಮಲ್ಲಿಗೆಯ ದಂಡೆಯನು ಮುಡಿಸುತ್ತ ಇಂದ್ರಿಯ ನಿಗ್ರಹದ ಗಂಧ ಹಚ್ಚುವೆನು 5 ಪಂಚಭೂತಾತ್ಮಕದ ಛತ್ರಿಯನು ಪಿಡಿದೆತ್ತಿ ಪಂಚನಾದಗಳೆಂಬ ವಾದ್ಯಗಳ ನುಡಿಸಿ ಪಂಚೇಂದ್ರಿಯಂಗಳೇ ಪಂಚಭಕ್ಷ್ಯಗಳಾಗಿನಿ ರ್ವಂಚನೆಯಿಂದಾರೋಗಿಸೆಂಬೆ 6 ರೇಚಕವೆಂಬ ವ್ಯಜನದಿಂ ಬೀಸಿ ತಾರಕ ಚಾಮರವ ಪಿಡಿದು ಕುಂಭಕವೆಂಬ ಪನ್ನೀರಿನಿಂ ತೋಯ್ಸಿ ತಾರಕ ಬ್ರಹ್ಮನರಸಿಯಂ ಸೇವಿಸುವೆ 7 ಭೋಗಭಾಗ್ಯವನೀವ ಭಾಗ್ಯಲಕ್ಷ್ಮಿಗೆ ವೈರಾಗ್ಯದ ತಟ್ಟೆಯನು ಪಿಡಿದು ಭಾವದೀವಿಗೆಯ ಕರ್ಪೂರದಾರಿತಯೆತ್ತಿ ಬಾಗಿವಂದಿಪೆ ತಾಯೆ ಕರುಣಿಸೆಂದು 8 ವರದಾತೆ ಭೂಜಾತೆ ಸುವಿನೀತೆ ಸುವ್ರತೆ ವರಶೇಷಗಿರಿವಾಸದಯಿತೆ ಮಹಿತೇ ಸೆರಗೊಡ್ಡಿ ಬೇಡುವೆನು ಕರಪಿಡಿದು ಸಲಹೆಂದು ನೆರೆನಂಬಿ ನೆನೆನೆನೆದು ನಲಿವೆನಿಂದು 9
--------------
ನಂಜನಗೂಡು ತಿರುಮಲಾಂಬಾ