ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾವ ಲೋಕಕೆ ಎನ್ನ ಎಳತಂದೆ ಹರಿಯೇ ದೇವಕೀ ಕಂದ ಗೋಪಾಲ ನಾನರಿಯೇ ಪ ನಳಧರ್ಮನೃಪ ಹರಿಶ್ಚಂದ್ರಾದಿಗಳು ಜನಿಸಿ ಖಳರನ್ನು ದಂಡಿಸೇ ಶಿಷ್ಟರನು ಹರಿಯೇ ಸಲಹ ಸುಜನರಿಗೆಲ್ಲ ಮಾನವಂ ಕೊಟ್ಟು ತಾ ವಿಳೆಯ ಸತ್ಯದೊಳಾಳಿದಾ ರಾಜ್ಯವಲ್ಲಾ 1 ಹಿಂದೆ ದುರ್ಜನರನ್ನು ತರಿಯಲೋಸುಗ ನೀನು ಅಂದದಿಂದೊಂಬತ್ತು ಅವತಾರವೆತ್ತಿ ಬಂದು ಸುಜನರ ಪೊರೆದು ಧರ್ಮವನು ನೆಲೆಗೊಳಿಸಿ ಚಂದದಿಂ ರಕ್ಷಿಸಿದ ಲೋಕವಿದು ಅಲ್ಲಾ 2 ಮನ್ನಿಸದೆ ಧರ್ಮವನು ನಿತ್ಯಕರ್ಮವ ಬಿಟ್ಟು ಹೀನ ಪಥಗಳ ಪಿಡಿದು ಬಂಜೆಯನು ಆಸೀ ಚನ್ನಕೇಶವ ನಿಮ್ಮ ನಾಮ ಸಂಕೀರ್ತನೆಯ ದೈನ್ಯದಿಂ ಗೈಯದ ರಾಜ್ಯವಿದು ಹರಿಯೇ 3
--------------
ಕರ್ಕಿ ಕೇಶವದಾಸ