ಒಟ್ಟು 12 ಕಡೆಗಳಲ್ಲಿ , 8 ದಾಸರು , 12 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಚನಗಳು ಬಲ್ಲೆ ಬಲ್ಲೆನೆಂಬರು ಬಲ್ಲವಿಕಿ ಕೀಲು ಮರೆವರು | ಬಲ್ಲವಿಕಿ ಮಾರ್ಗವ ಮೆಚ್ಚಿ ಬಲ್ಲರಕೂಡ ಶಣಸುವರು | ಮಂಡೆಗೆ ಬೂದಿ ರುದ್ರಾಕ್ಷವನಿಟ್ಟು ದಿಂಡೇರು ಶಿವಭಕ್ತರೆಂದು ಹೆಮ್ಮಿಲಿ | ಕಂಡ ಜಾತಿಗಳಲಿ ಕೊಳವಮೆದ್ದು | ಜೊಂಡು ಗಡ್ಡವ ಬಿಟ್ಟು | ಮಿಂಡೇರ ಘಲ್ಲಿಸುವ ತುಂಡವರೆತ್ತ ಶಿವಶÀರಣರೆತ್ತ | ಆ ಮೊಂಡ ರೆಳೆದೊಯ್ದು ತುಂಡಿಸಿ ಮೂಗನು ಭಂಡ ಸಾಸಿವೆಯ ತುಂಬಿ ದಂಡಿಸುವಾ ಯಮನೇ ಗುರುಜಂಗ ಮನಯ್ಯಾ ಮಹಾಗುರು
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಅಂಜಬ್ಯಾಡಂಜಬ್ಯಾಡವೋ ಭೂನಂದಸೂನು ಪ ಅಂಜಬ್ಯಾಡಂಜಬ್ಯಾಡ ಕರುಣನಿಧಿಯೆಸಂಜೆ ಮುಂಜಾನಿಲ್ಲೆ ಬಾರೋ ಮಂಜುಳಾದ ಕಥೆಯ ಪೇಳ್ವೆ ಅ.ಪ. ಪಾಂಡುತನಯನಂತೆ ನಿನ್ನ ಭಂಡಿ ಬಾಹು ಕನ್ನೆಮಾಡಿಕಂಡ ಕಂಡ ಕಾರ್ಯದಲ್ಲೆ ದಂಡಿಸುವುದು ಎನ್ನೊಳಿಲ್ಲ 1 ಗೋಪಿಯಂತೆ ಸೊಂಟದಲ್ಲೆ ತ್ಯಾಪಿ ಹಗ್ಗಗಳನೆ ಕಟ್ಟಿಶ್ರೀಪತಿಯ ಒರಳಿಗ್ಹಾಕಿ ಆಪರಿಂದ ಕಟ್ಟೋಣಿಲ್ಲ2 ಜಾರ ಚೋರನಂತೆ ನಿನ್ನ ನಾರೇರಂತೆ ವ್ಯಾಸಮುನಿಯಮಾರಿಗ್ಹಾಕಿ ವಾರ್ತೆಯನ್ನು ದೂರೋಣಿಲ್ಲ ಜಗದಿ ಸ್ವಾಮಿ 3 ಮಂದಗಮನೆ ಮೋಹಕಾಗಿ ಚಂದ್ರಮೌಳಿಯಂತೆ ಬೆಣ್ಣೆಹಿಂದೆ ಮುಂದೆ ಓಡಿಸಿಂದು ದಣಿಸೋಣಿಲ್ಲ ಶ್ರೀಶಕೃಷ್ಣ 4 ಇಂದಿರೇಶ ಎನ್ನ ಹೃದಯ ಮಂದಿರದೊಳಿಟ್ಟುಕೊಂಡುಚಂದ ಚಂದ ಕಥೆಯ ಪೇಳ್ವೆ ನಂದತನಯ ನೊಂದಿಸುವೆನು 5
--------------
ಇಂದಿರೇಶರು
ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ನಿತ್ಯ ಸಜ್ಜನರ ಒಡಗೂಡು1 ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2 ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನe್ಞÁನದಲಿ ನಡೆದು ಗುಣವಂತನಾಗು 3 ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4 ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5 ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6 ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7 ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8 ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9 ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10 ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11
--------------
ವಿಜಯದಾಸ
ದೂರು ಯಾತಕ್ಕೆ ತರಲ್ಯಮ್ಮಾ | ಯಶೋದಮ್ಮ || ವಾರಿಜ ಮುಖಿಯರು ಶೇರದೆ ಹೇಳ್ವರು ಪ ವಂದು ದಿನ ನಾ ಮನಿಯ ಬಿಟ್ಟು ಹೋಗುವೆನೆಯಲ್ಲ್ಯೊ | ಬಂದು ಹೇಳುವರೆಲ್ಲ ಕೇಳು ಗೋಕುಲದೊಳು | ಸಂದು ಸಂದನೆ ತಿರುಗಿ ಮಂದಗಮನಿಯರು | ಹೊಂದಿ ಒದಗಿ ಬಾಯಂದದ್ದು ನಿಜಮಾತು 1 ಯನ್ನ ಮಾತನ್ನು ಸುಳ್ಳಾದರೆ | ಗೋವಳ್ಹಾರೇ ಮನ್ನಿಸಿ ಬದಿಗೆ ಕರೆದುಕೇಳು | ಅವರಿಗೆ ಹೇಳು ಕನ್ಯೆಯರೆಲ್ಲಾ ಬಂದು ಬೆಣ್ಣೆಗಳ್ಳನೆಂದು ಕಣ್ಣಿಲಿ ನೋಡದೆಯನ್ನ ದಂಡಿಸುವರೇ2 ಪರರ ಮನೆಯೊಳಗಿರುವ ಮಡಿಕೆ ಪಾತ್ರೆ ನಿನಗ್ಯಾಕೆ | ಸ್ಥಿರ ಕ್ಷೀರಾಂ ಬುಧಿಶಯನನಾಗಿ | ಇರವದು ಆಗಿ | ಪುರದ ಸ್ತ್ರೀಯರು ಯಲ್ಲ ದೊರೆ ಹೆನ್ನೆ ವಿಠಲನೆಂದು ಮರೆತು ಹೇಳಲಿ ಬಹು ಸ್ಥಿರವಾಗಿ ಮಾಡುವರೇನೆ 3
--------------
ಹೆನ್ನೆರಂಗದಾಸರು
ಧ್ಯಾನಿಸು ಶ್ರೀಹರಿಯ ಧ್ಯಾನಿಸು ಪ ಧ್ಯಾನಿಸು ಮನವೆ ಶ್ರೀ ಹರಿಯ ಪಾದ ಧ್ಯಾನವಂತರ್ಯಾಮಿ ಹರಿಯ, ಆಹ ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಅ.ಪ ಪರಮಾಣು ಪ್ರದೇಶದಲ್ಲಿ, ಪ್ರಾಣಿ ರಾಸಿ ಅನಂತವುಂಟಲ್ಲಿ ಹೀಗೆ ವರಲುತಿದೆ ವೇದದಲ್ಲಿ ದೃಷ್ಟಾಂ ತರವ ಪೇಳುವೆ ದೃಢದಲ್ಲಿ-ಆಹ ಪರಮ ಸೂಕ್ಷ್ಮ ವಟತರು ಫಲದಲ್ಲಿಹ ನಿತ್ಯ 1 ನಿರುತ ಸುವರಣ ಬ್ರಹ್ಮಾಂಡದಲ್ಲಿ ಪರಿಪೂರ್ಣವಾಗಿ ಅಖಂಡವಾಗಿ ಮೆರೆವುತಲಿಪ್ಪ ಮಾರ್ತಾಂಡ ದಿವ್ಯ ಕಿರಣದಂತಿರುವ ಪ್ರಚಂಡ-ಆಹ ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ ನರಿತು ಆವಾಗಲು ದೊರಕಿದ ಸ್ಥಳದಲ್ಲಿ 2 ಸಲಿಲ ಭೂಗಿರಿ ಲತೆ ನಾನಾ-ವೃಕ್ಷ ಮೃಗ ಪಕ್ಷಿ ಕಾನನ-ಮುಕ್ತ ಸ್ಥಳಗಳವ್ಯಾಕೃತ ಗಗನ, ತೃಣ- ಪಾವಕ ತರು ಪವನ-ಆಹ ಒಳಗೆ ಹೊರಗೆ ಎಲ್ಲ ಸ್ಥಳದಲ್ಲಿ ಹರಿಮಯ ನೆಲೆಯ ನೀ ನಲವಿಂದ ತಿಳಿದು ಆವಾಗಲು3 ವಿಶ್ವ ಮತ್ಸ್ಯಾದಿ, ತೇಜೊ ರಾಶಿ ಹಯಗ್ರೀವಾದಿ, ಜೀವ ರಾಶಿಯೊಳಿದ್ದು ಅನಾದಿ ಸರ್ವ ದೇಶ ಭೇದಿಸುವಂಥ ವೇದಿ-ಆಹ ಮೂರ್ತಿ ಶ್ರೀಶ ರಂಗನೆಂದು ನಿತ್ಯ 4 ಸಪ್ತಾವರಣ ದೇಹದಲ್ಲಿ, ದಶ ಸಪ್ತ ದ್ವಿಸಹಸ್ರ ನಾಡಿಯಲಿ, ದಶ ಸಪ್ತ ದ್ವಿಸಹಸ್ರ ರೂಪದಲಿ ಹರಿ ವ್ಯಾಪ್ತ ನಿರ್ಲಿಪ್ತ ಸ್ಥಾನದಲಿ-ಆಹ ಆಪ್ತನಂತಿಪ್ಪ ಸುಷುಪ್ತಿ ಜಾಗರದೊಳು ತಪ್ತ ಕಾಂಚನದಂತೆ ದೀಪ್ತಿಸುತಿಪ್ಪನ್ನ5 ಜೀವರಿಂದತ್ಯಂತ ಭೇದ, ಪ್ರತಿ ಜೀವಾಂತರದಲ್ಲಿ ಮೋದನಾಗಿ ಯಾವಾಗಲಿರುತಿಹ ವೇದ-ದಲ್ಲಿ ಪೇಳುವುದು ಸತ್ಯಂಭಿದಾ-ಆಹ ಈ ವಿಧ ವೇದಾರ್ಥ ಸಾವಧಾನದಿ ತಿಳಿದು ಶ್ರೀ ವಾಯುಮತದ ಸುಕೋವಿದರೊಡಗೂಡಿ 6 ಶ್ರೀಕೇಶವನೆ ಮೂಲರಾಶಿ, ಶ್ರುತಿ- ಏಕೋ ನಾರಾಯಣ ಆಸೀತ್ ನಾನಾ ಲೋಕ ಸೃಷ್ಟಿಪ ಧಾತನಾಸೀತ್, ಜಗ ದೇಕತಾರಕ ಉಪದೇಶೀ-ಆಹ ನೀ ಕೇಳಿ ನಿಗಮಾರ್ಥ ನೀಕರಿಸು ಸಂಶಯ ಏಕಮೇವ ದ್ವಿತಿಯ ಶ್ರೀಕೃಷ್ಣನಂಘ್ರಿಯ 7 ಗಂಗಾಜನಕ ಸಿರಿರಂಗ ಉ- ತ್ತುಂಗ ಗುಣಾಂತರಂಗ, ಕಾ ಳಿಂಗ ಸರ್ಪನ ಮದಭಂಗ, ಭು ಜಂಗಶಯನ ಅಮಲಾಂಗ-ಆಹ ಮಂಗಳ ಇಡಾ ಪಿಂಗಳ ಸುಷುಮ್ನ ಸಂಗಡ ಮಧ್ಯದಿ ತಿಂಗಳಂತಿಪ್ಪನ್ನ 8 ಹೃದಯಸ್ಥಾನದಲಿದ್ದ ಮೂರ್ತಿ, ಬಲು ಅದುಭುತಾತನ ದಿವ್ಯಕೀರ್ತಿ, ಅದು ಪದುಮುಜಾಂಡದಿ ಪರಿಪೂರ್ತಿ ತರು ವುದಕೆ ಬೇಕು ವಾಯು ಸಾರಥಿ-ಅಹಾ ಅದು ಬಿಂಬಮೂರ್ತಿ ಜೀವದಾಕಾರಾವಾಗಿದ್ದ ಪದುಮಕೋಶದಲ್ಲಿ ಸದಮಲಾತ್ಮಕನನ್ನು 9 ಧರೆಯನಳೆದ ದಿವ್ಯ ಚರಣ, ಅದು ಮೆರೆವುತಿಹುದು ಕೋಟಿ ಅರುಣನಂತೆ ಪರಿಪೂರ್ಣ ಭರಿತವು ಕಿರಣ, ಸ್ಮರಿ- ಪರಿಗೆ ಮಾಡುವುದು ಕರುಣ-ಆಹ ತರಣಿಯಂಥ ನಖದಿ ಸುರನದಿಯನು ಹೆತ್ತ ಎರಡೈದು ಬೆರಳಲ್ಲಿ ಕಿರುಗೆಜ್ಜೆ ಪೆಂಡೆಯು 10 ಪೆರಡು ಜಾನು ಜಂಘೆ ಘನ್ನ ಸುರು- ಚಿರ ವಜ್ರಾಂಕುಶ ಧ್ವಜ ನಾನಾ, ದಿವ್ಯ ವರ ರೇಖೆಯಿಂದಲೊಪ್ಪುವನ, ಜಘನ ಪರಮ ಶೋಭಿತ ಸುಂದರನ-ಆಹ ಕದಳಿ ಕಂಬ ಇರುವೂರು ಶೋಭಿಸೆ ಸರಿಗಾಣೆ ಹರಿವುಟ್ಟ ವರ ಪೀತಾಂಬರವನ್ನು 11 ಗಜವೈರಿಯಂತಿಪ್ಪ ಮಧು ಬಲು ವಿಜಯ ವಡ್ಯಾಣ ಅಚ್ಛೇದ್ಯ, ಭೇದ್ಯ ನಿಜಘಂಟೆ ಘಣರೆಂಬೊ ವಾದ್ಯ, ಕು ಬುಜೆ ಡೊಂಕ ತಿದ್ದದನಾದ್ಯ-ಆಹ ಅಜ ಜನಿಸಿದ ನಾಭ್ಯಂಬುಜದಳ ಚತುರ್ದಶ ಕುಕ್ಷಿ ನಿಜಪೂರ್ಣ ಸಖನನ್ನು 12 ಉದರ ತ್ರಿವಳಿ ನಾನಾ ಹಾರ ದಿವ್ಯ ಪದಕ ಪವಳದ ವಿಸ್ತಾರ ರತ್ನ ಮುದದಿಂದ ಧರಿಸಿದ ಧೀರ ಸುಂದರ ವಾದ ಕಂಬುಕಂಧರ-ಆಹಾ ಪದುಮಜ ಭವರಿಂದ ತ್ರಿದಶರು ತಿಳಿಯುತ್ತ ಸದಾಕಾಲ ಧ್ಯಾನಿಪ ಹೃದಯಾಂಬರವನ್ನು 13 ಸಿರಿವತ್ಸ ಕೌಸ್ತುಭಹಾರ, ಮೇಲೆ ಸರಿಗೆ ನ್ಯಾವಳದ ವಿಸ್ತಾರ ಅಲ್ಲಿ ವೈಜಯಂತಿ ಮಂದಾರ, ಗುರು ತರವಾದ ಭುಜ ಚತುರ-ಆಹ ಮರಿಯಾನೆ ಸೊಂಡಿಲಂತಿರೆ ಬಾಹು ಕೇತಕಿ ಬೆರಳು ನಕ್ಷತ್ರದ ಅರಸಿನಂತೆ ನಖ14 ಕರಚತುಷ್ಟಯದಲ್ಲಿ ಶಂಖ, ಚಕ್ರ ವರಗದೆ ಪದುಮು ನಿಶ್ಶಂಕನಾಗಿ ಧರಿಸಿ ಮೆರೆವೊ ಅಕಳಂಕ, ದುರು ಳರ ದಂಡಿಸುವ ಛಲದಂಕ ಆಹ ಬೆರಳು ಮಾಣಿಕದುಂಗುರ ಕಡಗ ಕಂಕಣ ಬಿರುದಿನ ತೋಳ್ಬಂದಿ ವರ ಭುಜಕೀರ್ತಿಯ15 ಅಗರು ಚಂದನ ಗಂಧÀಲೇಪ, ಕಂಬು ಸೊಗಸಾದ ಕಂಠಪ್ರತಾಪ, ಮಾವು ಚಿಗುರಲೆ ಕೆಂದುಟಿ ಭೂಪ, ನಸು ನಗುವ ವದನ ಸಲ್ಲಾಪ-ಆಹ ಮಗನಾಗಿ ತಾನು ಗೋಪಿಗೆ ವದನದೊಳು ಅಗಣಿತ ಮಹಿಮನ್ನ 16 ಮುಗುಳು ಮಲ್ಲಿಗೆ ಮೊಗ್ಗೆ ದಂತ ಪಙÂ, ಜಗವ ಮೋಹಿಸುವ ಸುಶಾಂತ ಜಿಹ್ವೆ ನಿಗಮಕೆ ವೇದ್ಯವಾದಂಥ ಬಲು ಬಗೆಯಿಂದ ನಡೆಸುವ ಪಂಥ-ಆಹ ಪೊಗಳಲಾರದು ವೇದ ಖಗವಾಹನನ ಮಹಾ ಅಗಣಿತ ಮಹಿಮೆ ಸಂಪಿಗೆಯ ನಾಸಿಕನನ್ನು 17 ಪೊಳೆವೊ ವಿದ್ಯುತ ಕಪೋಲ, ನೀಲೋ- ತ್ಪಲದಳ ನೇತ್ರ ವಿಶಾಲ, ದಿವ್ಯ- ತಿಲಕವನಿಟ್ಟ ಸುಫಾಲ, ನೀಲಾ- ಚಲಕಾಂತಿ ತನುರುಹ ಜಾಲ-ಆಹ ಕುಂಡಲ ಕರ್ಣದೊಲುಮೆಯ ಚೆಲುವಿಕೆ ಇಳೆಯೊಳಗೆಣೆಗಾಣೆ ಇಂದಿರಾಲೋಲನ್ನ 18 ಶುಭ ನೋಟ, ಕಂಗ- ಳೆರಡ ಚೆಲುವಿಕೆ ಮಾಟಕಿನ್ನು ಅರವಿಂದ ಸರಿಯಿಲ್ಲ ದಿಟ ಅಲ್ಲಿ ತರಣಿ ಚಂದ್ರಮರ ಕೂಟ-ಆಹ ಶರಣ ಜನರ ಮನೋಹರುಷ ವಾರ್ಧಿಗೆ ಸುಧಾ ಕರ ದುಷ್ಟಜನರ ತಿಮಿರಕ್ಕೆ ಭಾಸ್ಕರನ್ನ 19 ಹೊಳೆವ ಹುಬ್ಬುದ್ವಯ ಸ್ಮರನ ಚಾಪ- ತಲೆ ತಗ್ಗಿಸುವಂಥ ರಚನ ಫಾಲ- ದಲ್ಲಿಟ್ಟು ತಿಲಕ ಸುಂದರನ ಲೋಕ- ಕಳವಳಗೊಳಿಸುವ ಸುಗುಣ-ಆಹ ನಲಿವ ವದನದಲ್ಲಿ ಅಳಿಗಳಂತೊಪ್ಪುವ ಸುಳಿಗುರುಳಿನ ಮೇಲೆ ವಲಿವಾರಳೆಲೆಯನ್ನು 20 ರೂಪ ಶೃಂಗಾರ ವಿಲಾಸ ಉಡು- ಭೂಪ ನಾಚುವ ಮುಖಹಾಸ ವಿಶ್ವ ರೂಪ ಧೃತ ಸ್ವಪ್ರಕಾಶ ಸರ್ವ ವ್ಯಾಪಕಾಖಿಳ ಜಗದೀಶ-ಆಹ ತಾಪಸರಿಗೆ ಕರುಣಾಪಯೋನಿಧಿ-ಅಣು ರೂಪಿನೋಳ್ ಪರಮಾಣು ರೂಪನಾಗಿಪ್ಪನ್ನ21 ಕೋಟಿಮಾರ್ತಾಂಡ ಸಂಕಾಶ ಕಿ ರೀಟಕ್ಕೆ ಅಸಮ ಪ್ರಕಾಶ ಎಲ್ಲು ಸಾಟಿಗಾಣೆನು ಲವಲೇಶ ಕಪಟ- ನಾಟಕ ಶ್ರೀ ಲಕುಮೀಶ-ಆಹ ನಖ ಲಲಾಟ ಪರಿಯಂತ ನೋಟದಿಂದಲೆ ಈಶ ಕೋಟಿ ಸಹಿತನಾಗಿ 22 ಕಾಮಾದಿಗಳನೆಲ್ಲ ತರಿದು ಮುಕು- ತೀ ಮಾರ್ಗವನ್ನೆ ನೀನರಿದು ಅತಿ- ಪ್ರೇಮದಿ ಗುರುಗಳ ನೆನೆದು ಹೇಮ ಭೂಮಿ ಕಾಮಿನಿಯರ ಜರಿದು-ಆಹ ಸಾಮಜ ವರದ ಶ್ರೀ ವಿಜಯವಿಠ್ಠಲನಂಘ್ರಿ ಯುಗ್ಮ ನಿತ್ಯ 23
--------------
ವಿಜಯದಾಸ
ಮನವೇ ಕೊಬ್ಬ ಬ್ಯಾಡ ಉಬ್ಬ ಬ್ಯಾಡಾ ಪ ನೆನುವಿನೊಳಿಟ್ಟು ಮಾನುಭಾವರ ಚರಣ ಕಮಲವನು ಜನುಮ ಸಾರ್ಥಕವನು ಮಾಡು ಕಂಡ್ಯಾ ಅ.ಪ ವಿದ್ಯೆ ವಶವಾದರೆ ನೀ ತಿದ್ದಿ ಕಲಿಸು ಆರ್ತರಿಗೆ | ಬುದ್ಧಿವಂತರ ಕೂಡಾ ತರ್ಕಸ್ಯಾಡ ಬೇಡಾ ನೋಡಬ್ಯಾಡಾ | ಉಧೃತ ಶಕ್ತಿಯ ಬಲದಿಂದ ಸಂತ ಸೇವೆ ಮಾಡು | ಗುದ್ದಿ ಹೆಟ್ಟಿ ಪರರ ಪೀಡಿ ಕುಡಬ್ಯಾಡಾ ಮಾಡಬ್ಯಾಡಾ | ಮುದ್ದಿ ಘನವಾದರ ಸತ್ಪಾತ್ರಕ ನಿವೇದಿಸು | ಮದ್ದು ತಿಂದು ನುಡಿವವನಂತ ಪರರ ದೋಷ ಗುಣಾ | ಬದ್ಧವಚನವ ನುಚ್ಚರಿಸದಿರು 1 ರಾಜಮುದ್ರಿಯ ನೆವದಿ ಉದರ ತುಂಬಲಾಗಿ ನೀತಿ ಬಿಟ್ಟು | ಈ ಜನರನಾ ದಂಡಿಸುವದಲ್ಲಾ ಇದುಸಲ್ಲಾ | ಆ ಜನ ಹೊಟ್ಟೆ ಹಾಕಿ ಬರೆಗೈಯ್ಯ ಹೋಗುವಂತೆ | ನೀ ಜಯಿಸಿ ಬಂದದಲ್ಲಾ ಸಂದದಲ್ಲಾ | ತ್ಯಾಜದಿಂದ ದೊಡ್ಡವ ನೀನೆಂದು ಸೆಜ್ಜಿ ತೆನೆಯಂತೆ | ಸುಜನರೊಳಗ ಗರ್ವ ಹಿಡಿಯದಿರು ಪಡೆಯದಿರು | ವಾಜಿಯಲಿ ನವಣಿ ತೆನೆಯಂತ ಬಾಗಿ ನಡೆದರೆ| ಶ್ರಿ ಜನಾರ್ಧನ ರಕ್ಷೀಸುಚ ಕಂಡ್ಯಾ 2 ಜರಿದು ಕೈಯಲ್ಲಿಂದ ಸಬಕಾರ ನೀರೊಳಗ ಬಿದ್ದ | ತೆರದಿಂದ ತಿರುಗಿ ತಿರುಗಿ ಯಾತಿಗಳನು | ಭರದಿಂದ ಕಡಿಯಲಿ ಪುಣ್ಯ ಫಲ ವಶದಿಂದ| ನರದೇಹವನು ತಾಳಿ ಬಂದಿ ನೀನು ತಿಂದಿ ನೀನು | ತ್ವರಿತ ಸುತಪ್ರಿಯ ಗುರು ಮಹಿಪತಿ ಚರಣಕ | ಮೊರೆ ಹೊಕ್ಕು ಗತಿ ಪಡೆ ಭಾವದಿಂದ ಜೀವದಿಂದ | ಧರೆಯೊಳು ಗಾಳಿಯೊಳಗಿನ ದೀಪ ತೋರುವಂತೆ | ಸ್ಥಿರವಲ್ಲಾ ಆಗಲ್ಹೋ ಈಗಲಿದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಧವ ಗೀತೆ ಶರಣು ಹರಿಗೆ ಶರಣು ಸಿರಿಗೆ ಶರಣು ಬ್ರಹ್ಮವಾಣಿಯರಿಗೆ ಶರುಣು ಭವಗೆ ಶರಣು ಶಿವೆಗೆ ಶರಣು ಬೆನಕಗೆ ಶರಣು ತತ್ವಮಾನಿಗಳಿಗೆ ಶರಣು ಮುನಿ ಸಮೂಹಗಳಿಗೆ ಮಾಧವ 1 ಪರಮಭಕ್ತರಾಗಿ ಮೆರೆದ ಗುರು ಪುರಂದರಾದಿ ಸಾಧು ವರರ ವಚನ ಮಣಿಗಳನ್ನು ಮನದೊಳಾರಿಸಿ ಸರವ ಮಾಡಿ ಶರಣ ಜನರ ಕರುಣದೆಳೆಯೊಳಿದನು ಬಿಗಿಸಿ ಮಾಧವ 2 ಶ್ರೀಯೆ ಸತಿಯು ನಿನಗೆ ಬ್ರಹ್ಮರಾಯ ಹಿರಿಯ ಮಗನು ವೈನ- ತೇಯ ರಥವು ಖಾದ್ರವೇಯೆ ಶಯ್ಯೆ ಛತ್ರವು ಮನೆಯ ದಾಸಿ ಸುರನಿ ಮಾಧವ 3 ಪರ್ವತೇಶನಣುಗಿ ತಂಗಿ ಶರ್ವದೇವ ನರ್ಮ ಸಖಳು ಸರ್ವದುರಿತವಳಿವ ಗಂಗೆ ನಿನ್ನ ಪುತ್ರಿಯು ಸರ್ವಕರ್ತ ಸರ್ವಶಕ್ತ ಸರ್ವಕಾಲ ದೇಶ ವ್ಯಾಪ್ತ ಭೋಕ್ತ ಮಾಧವ 4 ನೀನೆ ತಾಯಿ ನೀನೆ ತಂದೆ ನೀನೆ ಬಂಧು ನೀನೆ ಬಳಗ ನೀನೆ ಸಖಳು ನೀನೆ ಗುರುವು ನೀನೆ ದ್ರವ್ಯವು ನೀನೆ ಧೃತಿಯು ನೀನೆ ಸ್ಮøತಿಯು ನೀನೆ ಮತಿಯು ಮಾಧವ 5 ನಿನ್ನ ನಾಮ ಪುಣ್ಯನಾಮ ನಿನ್ನ ರೂಪ ಮಾನ್ಯರೂಪ ಅನ್ಯ ದೈವರನ್ನು ಕಾಣೆ ಘನ್ನ ಭಕ್ತವರ್ಯರಾಣೆ ಮಾಧವ 6 ದೀನ ನಾನು ದಾನಿ ನೀನು ಹೀನ ನಾನು ಮಾನಿ ನೀನು ಏನ ಬಲ್ಲೆನೈಯ ನಾನು e್ಞÁನಪೂರ್ಣನೈಯ ನೀನು ಮಾಧವ 7 ಹೃದಯದಲ್ಲಿ ನಿನ್ನ ರೂಪ ವದನದಲ್ಲಿ ನಿನ್ನ ನಾಮ ಉದರದಲ್ಲಿ ಅರ್ಪಿತಾನ್ನವಿತ್ತು ಅನುದಿನ ಒದಗಿ ಬಂದು ಬದಿಯಲಿದ್ದು ಮದಡ ಬುದ್ಧಿಯನ್ನು ಬಿಡಿಸಿ ಮಾಧವ 8 ಸ್ನಾನ ಮೌನ ಧ್ಯಾನ ತಪಗಳೇನು ಮಾಡಲೇನು ದೇವ ನೀನೆ ಕೃಪೆಯಿನೊಲಿಯದಿರಲು e್ಞÁನ ಬಾರದು ಏನು ಹೀನ ಹಾನಿ ಬರಲು ನೀನು ಮಾತ್ರ ಬಿಡದಿರೆನ್ನ ಮಾಧವ 9 ನಿತ್ಯವಲ್ಲ ದೇಹವಿನ್ನು ವ್ಯರ್ಥವಾಗಿ ಪೋಪುದಾಯು ಮತ್ತೆ ಬರುವುದೇನು ನಿಜವು ಮತ್ರ್ಯಕಾಯವು ನಿತ್ಯ ನಿನ್ನ ಭಜಿಸುತಿಪ್ಪ ಮಾಧವ 10 ಅಂಬುಗುಳ್ಳೆಯಂತೆ ಇರುವ ಡಿಂಬವನ್ನು ನಂಬಿ ಕೆಟ್ಟು ಹಂಬಲಿಸುತ ವಿಷಯಗಳಿಗೆ ಡೊಂಬನಾದೆನು ಕಂಬಳಿಯೊಳು ಕಟ್ಟಿದನ್ನ ತಿಂಬುವನಿಗೆ ದೊರೆವ ಸುಖವು ಮಾಧವ 11 ಹೊಟ್ಟು ತಂದು ಕುಟ್ಟಿ ಕೇರಿ ಕಷ್ಟಪಟ್ಟು ತುಕ್ಕಿ ಬೀಸಿ ಅಟ್ಟಹಾಸದಿಂದ ರೊಟ್ಟಿ ಸುಟ್ಟು ತಿನ್ನಲು ಎಷ್ಟು ಸುಖವೊ ಅಷ್ಟೆಯಿನ್ನು ಭ್ರಷ್ಟ ಭವದಿ ಮಮತೆಯಿಡಲ ಮಾಧವ 12 ಹೊಟ್ಟೆಕಿಚ್ಚು ಪಡುವೆ ದೈವಕೆಷ್ಟು ಪೂಜೆ ಮಾಡೆ ಕರುಣ ಪುಟ್ಟಲೊಲ್ಲದದಕೆ ಬೆಟ್ಟದಷ್ಟು ಕೊಟ್ಟರು ಬೆಟ್ಟು ನೀರೊಳದ್ದಿ ಬಾಯೊಳಿಟ್ಟು ಚಪ್ಪರಿಸಲು ರುಚಿಯ ಮಾಧವ 13 ತಪ್ಪು ಸಾಸಿರಂಗಳನ್ನು ಒಪ್ಪಿಕೊಂಡು ಕಾವದೇವ ಮುಪ್ಪುರಂಗಳನ್ನು ಗೆಲಿಸಿದಪ್ರಮೇಯನೆ ಕಪ್ಪು ಮೇಘಕಾಂತಿಯಿಂದಲೊಪ್ಪುತಿಪ್ಪ ತಿರುಮಲೇಶ ಮಾಧವ 14 ಒರಳ ನೆಕ್ಕಿ ವ್ರತವ ಕೆಟ್ಟ ಮರುಳನಂದವಾಯ್ತು ದೇಹ ಧರಿಸಿದುದಕೆ ನಿನ್ನ ಬಿಟ್ಟು ನರರ ಸ್ತುತಿಸಲು ಹರಕು ಚಿಂದಿ ಬಿಡಿಸಲಿಲ್ಲ ಕರಕು ಅನ್ನ ಹೋಗಲಿಲ್ಲ ಮಾಧವ 15 ಮೊರಡು ತುರುವ ಹಿಡಿದು ಕಟ್ಟಿ ಕರೆದು ಕಷ್ಟ ಪಟ್ಟು ಪಾಲ ನುರಗಗಳಿಗೆ ಎರೆದ ತೆರದಲಾಯ್ತು ನಿನ್ನನು ತರಣಿ ಮುಣಗ ದುಡಿದು ಬಡಿದು ಮಾಧವ 16 ಕೆರವ ತಿಂಬ ನಾಯಿಗಿನ್ನು ಸುರುಚಿಯನ್ನ ಸೊಗಯಿಸುವುದೆ ನರಕ ಭಾಗಿ ಪಾಮರಂಗೆ ನಿನ್ನ ನಾಮವು ಗರಳದಂತೆ ತೋರ್ಪುದೈಯ ಗುರುಗಳಿಲ್ಲ ಹಿರಿಯರಿಲ್ಲ ಮಾಧವ 17 ಕ್ರೂರ ಮಾನವರೊಳುದಾರ ಧೀರ ಶೂರರೆಂದು ಸಾರಿ ಬಾರಿ ಬಾರಿಗಿನ್ನು ಪೊಗಳಿ ಬೊಬ್ಬೆಯಿಟ್ಟರು ಬಾರದವರಿಗೆಂದು ಕರುಣ ಘೋರತನದ ದನುಜರವರು ಶೌರಿ ಮಾಧವ 18 ಹಾಳು ಹೊಲಕೆ ನೀರನೆತ್ತಿ ತೋಳು ಬೀಳು ಹೋದವೋಲು ಖೂಳ ಜನಕೆ ಪೇಳಿಕೊಳ್ಳುತಿಹನು ಬಾಳ್ವೆಯು ದಾಳಿ ಮಾಳ್ಪ ವಿಷಯಗಳನು ಹೂಳಿ e್ಞÁನ ಭಕ್ತಿಯನ್ನು ಮಾಧವ 19 ಎಷ್ಟು ನೀಲಿಯನ್ನು ತೊಳೆಯೆ ಬಿಟ್ಟು ಹೋಗದವರ ಬಣ್ಣ ದುಷ್ಟ ಮಾನವರಿಗೆ ಕರುಣ ಪುಟ್ಟದೆಂದಿಗು ಕಷ್ಟಪಟ್ಟು ಸೇವಿಸುವರ ಹೊಟ್ಟೆಯನ್ನು ಹೊಡೆದು ತಮ್ಮ ಮಾಧವ 20 ನಿರುತ ನಿನ್ನ ಕಥೆಯ ಬಿಟ್ಟು ನರರ ಕಥೆಗಳನ್ನು ಕೇಳಿ ಗುರುಗಳನ್ನು ಹಿರಿಯರನ್ನು ಜರೆಯುತಿಪ್ಪರು ಪೊರೆದ ತಂದೆ ತಾಯ ಮಾತ ಪರಿಕಿಸದಲೆ ತೊರೆದು ತಮ್ಮ ಮಾಧವ 21 ಪಟ್ಟದರಸಿಯನ್ನು ತೊರೆದು ಬಿಟ್ಟು ಪರರ ಸತಿಯ ಕೂಡಿ ಕೊಟ್ಟ ಸಾಲವನ್ನು ಕೊಡದೆ ನುಂಗುತಿಪ್ಪರು ಕರವ ಭಾಷೆಯನ್ನು ಕೊಟ್ಟು ಮೋಸ ಮಾಡುತಿಹರು ಮಾಧವ 22 ಉಂಡ ಮನೆಗೆ ಬಗೆವರೆರಡನವರು ಭಂಡರು ಕಂಡು ನುತಿಸಿ ಬೇಡಿಕೊಂಡರು ದಂಡಿಸುವರ ಕಂಡು ನಡುಗಿ ಮಾಧವ 23 ಕೊಳ್ಳರೊಳಗೆ ಸ್ನೇಹ ಬಹಳ ಸುಳ್ಳರೊಳಗೆ ಸೋಲುತಿಹರು ಒಳ್ಳೆಯವರ ಕಂಡವರ ಟೊಳ್ಳು ಮಾಳ್ಪರು ಬಳ್ಳೆಸುರಿದು ಬಲ್ಲಿದವರಿಗಳ್ಳೆ ಬಿರಿಯಲುಣಿಸಿ ದಣಿಸಿ ಮಾಧವ 24 ಮಾಡಿದಂಥ ಕೃತಿಯು ಮರೆತು ಕೇಡು ಬಗೆದು ಕಾಡುತಿಹನು ನೋಡರೊಮ್ಮೆಗಾದರವರು ಬಡವರೆಂಬುದ ಜಾಡೆಯರಿತು ನಿನ್ನ ನಾಮ ಪಾಡಿ ಪೊಗಳುತಿಹರಿಗೆಂದು ಮಾಧವ 25 ಶಾಕವ್ರತದೊಳೆಲ್ಲ ಶಾಕಂಗಳನ್ನು ಬಿಡುವ ತೆರದಿ ಬೇಕು ಬೇಕು ಎಂಬ ಬಯಕೆ ಬಿಡಲು ಬಾರದು ಸಾಕೆನಿಸದೆ ರತಿಯ ಸುಖದೊಳೇಕ ಚಿತ್ತನಾಗುವಂತೆ ಮಾಧವ 26 ನೇಮ ನಿಷ್ಠೆಯೆಂದು ಪರರ ಧಾಮದನ್ನ ಬಿಡುವವೋಲು ಕಾಮಲೋಭ ಮೋಹಗಳನು ಬಿಡಲು ಬಾರದು ನಿತ್ಯ ಪರರ ಮಾಧವ 27 ಹೇಸಿಗೆಯನು ಕಂಡು ಕರದಿ ನಾಸಿಕವನು ಹಿಡಿಯುವಂತೆ ಹೇಸಿ ವಿಷಯ ವಾಸನೆಯನು ಬಿಡಲು ಸಲ್ಲದು ಘಾಸಿಬಟ್ಟು ಪರರ ಸೇವೆಯಾಸೆಬಟ್ಟು ಮಾಡುವಂತೆ ಮಾಧವ 28 ವಿತ್ತ ಪದವಿ ಕಂಡು ಹರುಷ ಕ್ಲೇಶಗಳಿಗೆ ಸಿಲುಕು- ತಿರುಳು ಹಗಲು ಬಿಡದೆ ಕುದಿದು ತೊಳಲುತಿರುವೆನು ದುರುಳ ವಿಷಯಗಳಿಗೆ ಮನವ ಮಾಧವ 29 ಹೇಸಿ ವಿಷಯ ಸುಖವ ನಾನು ಲೇಸೆನುತ್ತೆ ತಿಳಿದು ಮಮತೆ ಯಾಸೆಯಲ್ಲಿ ಕಟ್ಟುಬಿದ್ದು ಕ್ಲೇಶಪಡುತಿಹೆ ಪಾಶಬಿಡಿಸಿ ದಾಸ ದಾಸ ದಾಸನಾಗಿಸೆನ್ನ ದೋಷ ಮಾಧವ 30 ಆಗದೆನಗೆ ಅಬುಜನಾಭ ಭಾಗವತವ ಕೇಳೆ ಮನಸು ಬೈಗು ಬೆಳಗು ಪೋಗುತಿಹುದು ಸಾಗಿ ಬಾರದು ಭೋಗ ಭಾಗ್ಯಗಳನು ಬಯಸಿ ರಾಗ ಲೋಭಗಳಲಿ ನೆಲಸಿ ಮಾಧವ 31 ಬಂದ ಕಾರ್ಯವಾಗಲಿಲ್ಲ ಎಂದು ಬ್ರಹ್ಮ ದೇಹ ಧರಿಸಿ ಮುಂದ ನೊಂದನರಿಯೆ ಮಾಧವ 32 ದಾಸ ವೇಷವನ್ನು ಹಾಕಿ ದೇಶ ದೇಶವನ್ನು ತುಕ್ಕಿ ಮೋಸಮಾಡಿ ಸುಜನರನ್ನು ಘಾಸಿಗೊಳಿಸಿದೆ
--------------
ಲಕ್ಷ್ಮೀನಾರಯಣರಾಯರು
ಏಕೆ ದೇಹವನು ದಂಡಿಸುವೆ ವೃಥಾ - ಬಿಡ - |ದೇಕ ಚಿತ್ತದಿ ಲಕ್ಷ್ಮೀಕಾಂತಹರಿಎನ್ನದೆಪ.ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ - |ಮೌನವನು ಪಿಡಿದು ಬಕಪಕ್ಷಿಯಂತೆ |ಹೀನ ಬುಧ್ಧಿಗಳ ಯೋಚಿಸಿ ಕುಳಿತು ಫಲವೇನು ||ದಾನವಾಂತಕನ ನಾಮಕೆ ಮೌನವುಂಟೆ ? 1ಜಪವ ಮಾಡುವೆನೆನುತ ಕಪಟಬುದ್ಧಿಯ ಬಿಡದೆ |ಗುಪಿತದಿಂದಲಿ ನೀನು ಕುಳಿತು ಫಲವೇನು ||ಅಪರಿಮಿತಮಹಿಮ ಶ್ರೀ ನಾರಾಯಣನೆಂದರೆ ||ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ 2ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ |ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ ? |ಸಂದೇಹವೇಕೆ ನೀನೊಂದು ಕ್ಷಣವಗಲದೆ |ತಂದೆ ಶ್ರೀ ಪುರಂದರವಿಠಲ ನೆನೆಮನವೆ 3
--------------
ಪುರಂದರದಾಸರು
ಕಲಿಯುಗದ ಮಹಿಮೆಯನು ಕಾಣಬೇಕಿಂತು ಪ.ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |ಗುರುಹಿರಿಯರೊಳು ದೋಷವೆಣಿಸುತಿಹರು |ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |ತರುಣಿಯರ ನುಡಿಗಳನು ಲಾಲಿಸುತ್ತಿಹರು 1ಕಂಡುದನೆ ಹೇಳರು ಕಾಣದನೆ ಹೇಳುವರು |ಉಂಡ ಮನೆಗೆರಡನ್ನೆ ಎಣಿಸುತಿಹರು ||ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |ದಂಡಿಸುವರಿಂಗೆ ಧನಗಳನು ಕೊಡುತಿಹರು 2ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |ಒಳ್ಳೆಯವರೊಡನೆ ವಂಚನೆ ಮಾಳ್ಪರು ||ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |ಬಲ್ಲಿದವರಿಗೆ ಬಾಯ ಸವಿಯನುಣಿಸುವರು 3ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು 4ಮಾಡಿದುಪಕಾರವನು ಮರೆತುಕಳೆವರು ಮತ್ತೆ |ಕೂಡಾಡಿ ಬೇಡುವರು ಕುಟಿಲತ್ವದಿಂದ ||ರೂಢಿಗೊಡೆಯನು ನಮ್ಮ ಪುರಂದರವಿಠಲನ |ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ 5
--------------
ಪುರಂದರದಾಸರು
ನಾರದ ಕೊರವಂಜಿ1ಜಯ ಜಯ ಜಯ ಜಯ ಜಯ ಜಯ ಪ.ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯನೀರಚರಕಮಠಕಿಟಿನೃಹರಿವಟುಭೃಗುಜ ರಘುವೀರ ಯದುಪತೆಬುದ್ಧಕಲ್ಕಿ ಸ್ವರೂಪಾ ಜಯ ಜಯ1ಶ್ರೀ ಮತ್ಕಪಿಲ ಋಷಭ ಯಜÕದತ್ತ ಕಂಸ್ತುಘ್ನ ?ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯಸ್ವಾಮಿ ಮಹಿದಾಸ ತಾಪಸ ಉರುಕ್ರಮಶೂಲಿವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ 2ಆನಂದ ಜ್ಞಾನ ಬಲಮಯ ಚಿತ್‍ಸ್ವರೂಪ ಜಯಅನಂತ ಮಹಿಮ ವೈರಾಜ ಪುರುಷೋತ್ತಮ ಜಯಅನಂತ ಬ್ರಹ್ಮ ರುದ್ರೇಂದ್ರಾದಿಸೇವ್ಯಜಯಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ 32ಶರಣು ಮಂಗಳ ದೇವತೇವರಶರಣುಚಿತ್ಸುಖಸಾಗರಶರಣುಅಗಣಿತಗುಣಶುಭಾಕರಶÀರಣು ವೆಂಕಟ ಮಂದಿರ 4ದುರುಳದೈತ್ಯರು ಸೊಕ್ಕಿ ವರದಲಿಧರೆಗೆ ಕಂಬನಿ ತರಿಸಲುತ್ವರದಿ ಸುರರಿಗೆ ಮೊರೆಯನಿಟ್ಟಳುಧರಿಸಲಾರೆನು ಎನುತಲಿ 5ಸರಸಿಜೋದ್ಭವಭವಪುರುಹೂತರರಿದು ಚಿಂತಿಸಿ ಮನದಲಿವರಪಯೋನಿಧಿಗೈದಿ ಸ್ತುತಿಸಲುಕರುಣದಲಿ ಅವತರಿಸಿದೆ 6ಬಂದು ಧರ್ಮದ ವೃಂದ ರಕ್ಷಿಪೆನೆಂದು ದೀಕ್ಷೆಯವಿಡಿದು ನೀಅಂದಗೆಡಿಸುತ ದನುಜನಿಕರವಹೊಂದಿ ದ್ವಾರಕ ನಗರವ 7ಇಂದಿರೆಯು ನಿನ್ನಿಚ್ಛೆಯನುಸರದಿಂದ ಕ್ರೀಡಿಪಳನುದಿನÀಮಂದಜನರಿಗೆ ಮೋಹಿಸುತನರರಂದದಲಿ ತೋರಿದೆ ಹರೆ 8ದೇವಋಷಿ ನಾರದನು ಶ್ರೀಪದಸೇವೆಗÉೂೀಸುಗ ಕೊರವಿಯಭಾವದಲಿ ಜಗದಂಬೆ ರುಕ್ಮಿಣಿದೇವಿಯಳ ಬಳಿಗೈದು ತಾ 9ದೇವ ನಿನ್ನಯ ಬರವ ಬೆಸಸಿದಕೋವಿದತೆಯನು ಪೇಳುವೆಶ್ರೀವರ ಪ್ರಸನ್ವೆಂಕಟ ಕೃಷ್ಣಪಾವನ ಮತಿಯ ಕರುಣಿಸೊ 103ಶ್ರೀ ರಂಭೆ ಭೀಷ್ಮಕನಭೂರಿಪುಣ್ಯದ ಗರ್ಭವಾರಿಧಿಯಲ್ಲಿ ಜನಿಸಿನಾರಿ ರುಕ್ಮಿಣಿಯೆಂಬ ಚಾರುನಾಮದಿಕಳೆಯೇರಿ ಬೆಳೆದಳಂದವ್ವೆ 11ಜನನಿಜನಕರೆಲ್ಲ ತನುಜೆಯ ಹರಿಯಂಘ್ರಿವನಜಕೆ ಕೊಡಬೇಕೆನ್ನೆನೆನೆದು ತಾನೊಂದು ರುಕ್ಮನು ದಮಘೋಷನತನುಜಗೆ ತಂಗಿಯನು 12ಕೈಗೂಡಿಸುವೆನೆಂಬ ವೈಭವದಲ್ಲಿರೆವೈಮನಸದೊಳು ಕನ್ಯೆಯುಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃಷ್ಣಯ್ಯನೊಳ್ ಮನವಿಟ್ಟಿರೆ 134ದನುಜಮಥನÀ ಹರಿಸೇವೆ ಇದೆಂದುಅನಿಮಿಷಮುನಿ ಧರೆಗಿಳಿದು ತಾ ಬಂದುವನಿತೆ ಕೊರವಂಜಿಯ ವೇಷವÀ ಧರಿಸಿಜನಪ ಭೀಷ್ಮಕನೋಪವನದಲ್ಲಿ ನೆಲಸಿ 14ಹಲವು ಕೊರವಿಯರ ಕೂಡಿ ಸಿಂಗರದಿಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿಇಳೆಯ ಜನರು ಮೋಹಿಸುವಪರಿಇಹಳುಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು 15ಮಂಜುಗಾವಿಯ ಸೀರೆ ನಿರಿತೆಗೆದುಟ್ಟುಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟುಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲಗಂಜಿ ಹೊಂದಾಳೆ ಸರಗಳಳವಟ್ಟು 16ಕಂಚುಕಪುಟ ಬಿಗುಪೇರಿದ ಕಟ್ಟುಚಂಚಲನೇತ್ರಕಂಜನ ಕಾವಲಿಟ್ಟುಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣನಂ ಚಿಂತಿಸಿ ಜಯ ಜಯಯೆಂದಳುಕೊರವಿ175ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದುಮಡದಿ ರಾಜಬೀದಿಯಲಿನಿಂದು18ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆಕಡುಮೌನಿ ಜನರ ಮೋಹಿನೆ 19ಚಪಲ ನೋಟಕೆ ನಾಗರಿಕರು ನೋಟಕರು ನೋಟಕರುಲಿಪಿಯ ಚಿತ್ರದೊಲು ನಿಂತಿಹರು 20ನಿಪುಣೆಕೊರವಿಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನಶ್ರೀಪ್ರÀ್ರಸಾದವ ಬೇಡುತಿದ್ದಳಣ್ಣ 216ಬೆಡಗಿನ ಗಮನದಿ ಎಡಬಲಕೊಲಿದುಕಡಗ ಶಂಖದ ಬಳೆ ನುಡಿಸುತ ನಡೆದುಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತಕ್ಕಡ ಧಿಗಿಧಿಮಿಕೆಂದುಜಡಿದುತಾಳ್ವಿಡಿದು22ತಿಗುರಿದ ಗಂಧ ಸೆಳ್ಳುಗುರಿನ ನಾಮಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮಮಗುವನುಡಿಯಲೆತ್ತಿ ಜಗಚ್ಚರಿಯಮ್ಮಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ 23ನಗರದ ಜನದ ಕಣ್ಣಿಗೆ ಕೌತುಕೆನಿಸಿಬಗೆ ಬಗೆ ಒಗಟು ಮಾತುಗಳನುಚ್ಚರಿಸಿನಗರಾಧಿಪತಿಯ ಮನೆಯಕೇಳಿನಡೆದುಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು 247ಬ್ರಾಹ್ಮರ ಕೇರಿಗೆ ಬಂದಳಾಕೊರವಿಪರಬ್ರಹ್ಮನ ಗುರುತ ಕೇಳುತ್ತನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದುಸನ್ಮಾನದಾಲಯವ ಪೊಗುತಾ 25ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡುನೃಪನಂತಃಪುರದ ಸತಿಯರೈದಿಕಂತುವಿನ ಜನನಿಗೆ ಕರವೆರಡು ಮುಗಿದು ಏಕಾಂತ ಪೇಳಿದರು ಚೆನ್ನಾಗಿ 26ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನಮ್ಮೂರ್ವಳಗೆ ತಿರುಗುತಿಹಳಮ್ಮಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದನಿರ್ವಚನ ಕರೆಸಿ ಕೇಳಮ್ಮ 278ಬಂದಳು ನೃಪನರಮನೆಗೆ ತಾನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.ಬಂದ್ಹೇಳಿದ ನುಡಿಗೇಳ್ದು ಪೂರ್ಣೇಂದುವದನೆ ಮುದತಾಳ್ದುಮಂದಿರಕೆ ಕರೆಸಿದಳು ನಲವಿಂದಲಿ ಬಲು ಬೆಡಗಿನ ಕೊರವಂಜಿ 28ತಳಪಿನ ಮುತ್ತಿನ ಕಟ್ಟುಶುಭತಿಲಕದ ಹಚ್ಚೆಯ ಬಟ್ಟುಅಲುಗುವ ಮೂಗುತಿಯಬಲೆ ಸಲೆಬಳುಕುತ ಬಡನಡುವಿನ ಚಪಲೆ 29ಬಟುಗಲ್ಲದ ಮಕರಿಕಾಪತ್ರ ಪವಳದುಟಿ ದಾಡಿಮರದಗೋತ್ರವಿಟಮೃಗಸ್ಮರಶರ ನೇತ್ರ ಕೊರಳ್ದಟಿಸುವಮಣಿಮುತ್ತಿನ್ಹಾರಗಳೊಲಪಲಿ30ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿಮುಟ್ಟುವ ಮುಡಿಯ ಮಾಲಿಕೆಯುಬಿಟ್ಟ ಮುಂಜೆರಗಮಲಿಕೆಯು ಕಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು 31ತೆಳ್ವೋದರದ ತ್ರಿವಳಿಯ ಜಗುಳಿಬೀಳ್ವ ಮಣಿಮುಕ್ತಾವಳಿಯಸಲ್ಲಲಿತ ಸಂಪಿಗೆ ಕಳೆಯ ಗೆಲ್ವಚೆಲ್ವೆಕೊರವಿಪುರವೀಥಿಯ ಬಳಿಯ32ಕಿಣಿ ಕಿಣಿ ರವದ ಕಿಂಕಿಣಿಯುಝಣ ಝಣತ್ಕಾರಿಪಂದುಗೆ ಮಣಿಯುಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚಕುಣಿ ಕುಣಿಸಿ ನಟಿಪ ನಡೆವಾಂಗನೆಯು 33ಸಿಂಗನ ಉಡಿಯಲ್ಲಿಕಟ್ಟಿಉತ್ಸಂಗದೊಳೊಲಪಿನ ದಿಟ್ಟಿರಂಗ ಶ್ರೀ ಪ್ರಸನ್ವೆಂಕಟ ಕೃಷ್ಣಾಂಗನೆಯನು ಕಾಂಬುವೆನೆಂಬ ತವಕದಿ 349ವಚನಪದುಮನಾಭನ ರಾಣಿ ರಾಣಿವಾಸದಲಿಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲುಒದಗಿ ಬಂದಳುಕೊರವಿಕರೆಯುತ್ತ ತಾನುಚದುರ ಪ್ರಸನ್ವೆಂಕಟ ಕೃಷ್ಣನರಸಿಯನು 3510ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗಳೆಲ್ಲಿಹಳೆ ನೀಡೆಯವ್ವನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿನಲ್ಲೆ ಬಾರೆ ಮುಂದಕವ್ವ 36ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯಸೊಲ್ಲುವೆನೆ ನೀಡೆಯವ್ವನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈಒಳ್ಳೆ ಕಜ್ಜಾಯ ನೀಡೆಯವ್ವ 37ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲಮೃಷ್ಟಾನ್ನವ ನೀಡೆಯವ್ವಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸಹೊಟ್ಟೆ ತುಂಬ ನೀಡೆಯವ್ವ 38ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದುಇಷ್ಟ ಕಾಣೆ ನೀಡೆಯವ್ವಇಷ್ಟುಣಲಿಕ್ಕೆನ್ನತುಷ್ಟಿಬಡಿಸಿ ಸತ್ಯಗೋಷ್ಠಿಕೇಳೆ ನೀಡೆಯವ್ವ39ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲಕನ್ನೆ ಬಾರೆ ಮುಂದಕವ್ವಮುನ್ನ ರಕ್ಕಸನೊಯ್ದ ಮಡದಿಗೆ ಒಳಿತವನೆಲ್ಲ ಹೇಳಿದ್ದೆನವ್ವ 40ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವಕನ್ನೆ ಕೇಳಜಕಾಮರವ್ವಕಣ್ಣಾರ ಕಾಂಬೆ ನಿನ್ನಣ್ಣನಪಾಟುಪ್ರಸನ್ನವೆಂಕಟ ಕೃಷ್ಣನಿಂದವ್ವ 4111ಚೂರ್ಣಿಕೆಈ ವಾಕ್ಯವಂಕೇಳಿತೀವಿ ತೋಷವ ತಾಳಿದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆಹೀಗೆಂದಾಸನ ಕೊಟ್ಟು ಬಾಗಿಲೊಳು ಕಾವಲಿಟ್ಟುಬೇಗ ಪ್ರಸನ್ವೆಂಕಟ ಕೃಷ್ಣನಾಗಮವ ಮನದಿ ಕೇಳ್ದಳವ್ವೆ 4212ಕುಳ್ಳಿರೆ ಕುಳ್ಳಿರೆ ಕುಳ್ಳಿರೆ ಕೊರವಂಜಿಫುಲ್ಲಬಾಣನಾನೆ ಕುಳ್ಳಿರೆಸೊಲ್ಲಮ್ಮ ಸೊಲ್ಲಮ್ಮ ಹಲವು ಮಾತಿನ ಜಾಣೆಎಲ್ಲ ಬಯಕೆಯನೆಲ್ಲ ಸೊಲ್ಲಮ್ಮ ಕೊರವಂಜಿ 43ಆದರದಾ ಮಾತ ಕೇಳುತ ಕುಳಿತಳುಯಾದವರರಸ ಮುಕುಂದನಕೋದಂಡಪಾಣಿ ತಿರುವೆಂಗಳ ಮೂರ್ತಿಯಪಾದಕೆ ಮಾಡಿದಳೊಂದನೆ ಕೊರವಂಜಿ 44ಮಣಿಮಯ ಬುಟ್ಟಿಯ ಎಡದಲಿಟ್ಟುಕೊಂಡುವನಿತೆ ಪದ್ಮಾಸನವಿಟ್ಟಳುಮಿನುಗುವ ಎಳೆನಗೆಯಣುಗನ್ನ ಮಲಗಿಸಿವನಿತೆ ರುಕ್ಮಿಣಿಯನ್ನು ಕರೆದಳು ಕೊರವಂಜಿ 45ಜಾಣೆ ಬಾರೆ ಸುಗುಜಾಣೆ ಬಾರೆ ನಾರಿಮಾಣಿಕಳೆಕಟ್ಟಾಣಿಬಾರೆವಾಣಿಪತಿಪಿತ ಪ್ರಸನ್ವೆಂಕಟ ಕೃಷ್ಣನರಾಣಿ ಬಾರೆಸುಪ್ಪಾಣಿಬಾರೆ ಕಲ್ಯಾಣಿ ಬಾರೆ ಫಣಿವೇಣಿ ಬಾರೆಶುಭಶ್ರೋಣಿ ಬಾರೆ ಎಂದು ಕರೆದಳು ಕೊರವಂಜಿ 4613ವಚನಅಮ್ಮ ರುಕ್ಮಿಣಿಯಮ್ಮ ಉಮ್ಮ್ಮಯವಟ್ಟುಮುಮ್ಮೊರದ ರತುನ ಮುತ್ತಿನ ಕಾಣಿಕಿಟ್ಟುಪರಬೊಮ್ಮಪ್ರಸನ್ವೆಂಕಟಕೃಷ್ಣನ ಅಡಿಗಳನಮ್ಮಿಸುತ ಮನೋರಥವÀ ಮನದಿ ಬೆಸಗೊಳ್ಳಲು 47ಉಂಡ ಊಟ ಕಂಡ ಕನಸು ಪುಂಡರೀಕಾಂಬಕಿಯೆತಂಡ ತಂಡದ ವಾರುತೆಗಳ ಪೇಳುವೆನು ಸಖಿಯೆಹಿಂಡುದೈವದಗಂಡಪ್ರಸನ್ವೆಂಕಟ ಕೃಷ್ಣನ ಕಣ್ಣಾರಕಂಡು ಸಾರುವಕೊರವಿಎಳ್ಳನಿತು ಸಟೆಯರಿಯೆ4815ಚೂರ್ಣಿಕೆಕಾಸಿನಾಸೆಯವಳು ನಾನಲ್ಲಭಾಷೆ ಹುಸಿದರೆ ಬಿರುದು ಬಿಸುಡುವೆನೆಲ್ಲಭಾಷೆ ಪಾಲಕರು ನಮ್ಮ ಸಿದ್ಧರೆಲ್ಲ ಲೇಸುಲೇಸೆಂದುಕೇಸಕ್ಕಿತಿಮ್ಮಯ್ಯನ ಬೆತ್ತವ ಮುಟ್ಟೆಲೆ ದುಂಡೆಎನ್ನ ಮನದ ದೈವ ಎನ್ನಕ್ಕ ಕೇಳೆಯವ್ವತಿರುಮಲೆ ತಿರುವೆಂಗಳಯ್ಯವರಅಹೋಬಲ ನರಸಿಂಗಯ್ಯಹರಿಕಂಚಿ ವರದರಾಜಯ್ಯಶಿರಿ ರಂಗದ ರಂಗರಾಯಯ್ಯಬದರಿಯ ನರನಾರಾಯಣಯ್ಯಪುಂಡರೀಕವರದ ಪಂಢರಿರಾಯ ಎಮ್ಮಉಡುಪ ಕುಲಜ ಮನ್ನಾರು ಕೃಷ್ಣಮ್ಮಒಡ್ಡಿಜಗನ್ನಾಥ ಅಲ್ಲಾಳನಾಥಯದುಗಿರಿನಾಥ ಶಿರಿಮುಷ್ಣನಾಥಕೃತಪುರದ ವೀರ ನಾರಾಯಣಕೊಲ್ಲಾಪುರದ ಕನ್ನೆ ವೇಲಾಪುರದ ಚೆನ್ನಅನಂತಶಯನ ಜನಾರ್ದನ್ನಅನವರತಪರಸನ್ನ ವೆಂಕಟ ಕೃಷ್ಣನ ಕನ್ನೆಇಂತಪ್ಪಾನೇಕ ದೈವ ಏಕವೆಂದು ಏಕಾನೇಕವೆಂದುನಂಬಿಪ್ಪೆನೆ ಕೇಳೆಯವ್ವ 4916ಇಂತಿಪ್ಪ ಎನ್ನ ಮನೆಯ ದೈವ ಅವರಂತವ ಬೊಮ್ಮರರಿಯರವ್ವ ವಿಶ್ರಾಂತಿಲಿ ಕೊಂಡಾಡುವೆನವ್ವ ನಾನುಕಂತುವಿನಣ್ಣನ ಮಗಳವ್ವ 50ಇಪ್ಪಲ್ಲಿಪ್ಪಕೊರವಿನಾನಲ್ಲ ಹೋಗಿಬಪ್ಪೆ ಹದಿನಾಲ್ಕು ಲೋಕಕೆಲ್ಲಛಪ್ಪನ್ನದೇಶಗಳ ಸುದ್ದೀನೆಲ್ಲಕೇಳಿಬಪ್ಪುವ ಕಜ್ಜವ ಕೃಷ್ಣ ಬಲ್ಲ 51ಆವಾವ ದೇಶದ ಸುದ್ದಿ ಕೇಳವ್ವ ನಿನ್ನಭಾವದ ಬಯಕೆಯನೆಲ್ಲ ಕೇಳವ್ವಶ್ರೀವರ ಪ್ರಸನ್ನವೆಂಕಟಾದ್ರಿ ಕೃಷ್ಣ ದ್ವಾರಕಿಂದಾವಾಗ ಬಪ್ಪನೆಂದು ಕೇಳವ್ವ 5217ಚೂರ್ಣಿಕೆಓಯಮ್ಮ ನಿನ್ನವರುಗಳು ಆ ಬಲಮಗು ಮದನಕಾಮಬುಡುಕ್ಕಾನೆ ಪರತಾನು ಚಿಂತಿಶೆ ಮಾಣಮ್ಮನಾ ತಿರುಕ್ಕಿ ವಂದ ದೇಶ ಐವತ್ತಾರು ಶೊಲ್ಲರೆಅಂಗ ವಂಗ ಕಳಿಂಗ ಕಾಂಬೋಜ ಭೋಟಕರ್ನಾಟಕ ಘೋಟ ಮಹಾಘೋಟಜಿನ್ನ ಮಹಾಜಿನ್ನ ಜೊನ್ನಗಕಾಶ್ಮೀರ ತುರುಷ್ಕಮಾಗಧಬಂಗಾಳ ಗೌಳ ಮಾಳವ ಮಲೆಯಾಳನೇಪಾಳ ಗೌಡ ಗುರ್ಜರ ಕೊಂಕಣದರ್ದುರಬರ್ಬರ ಸೌರಾಷ್ಟ್ರ ಮಹಾರಾಷ್ಟ್ರಸಂಬರ ಮುಂಗಿಳ ಘೋಟ ಮುಖಏಕಪಾದ ಸೌಳ ಸಂಸಾಳಕಆನರ್ತ ಹಮ್ಮೀರ ಕೊಮ್ಮೀರಮತ್ಸ್ಯಪಾಂಚಾಲರಾಜಶೇಖರ ವರಶೇಖರ ಯುಗಂಧರ ಮಧ್ಯದೇಶಲಂಬಕರ್ಣ ಸ್ತ್ರೀರಾಜ್ಯ ಆಂಧ್ರ ದ್ರವಿಡಅರವ ಕನ್ನಡ ತುಳುವ ತುಳಾಂಡಜಾಳೇಂದ್ರ ಕೈಕೇಯ ಕೌಸಲ ಕಂಚಿಕನೋಜ ಸವ್ವೀರಸಿಂಧುಕೇರಳವೈದರ್ಭ ದೇಶದೊಳ್ಕುಂಡಿನಾಪುರದೊಳ್ ನಿನ್ನಂ ಕಂಡುಮನದಂಡಲಿಕೆಗೆ ಸಾಗಿತ್ತೆನೆಲೆ ದುಂಡೆ 5318ಈ ನಾಡ ಚರಿಸಿ ನಿನ್ನರಸುತ ಬಂದೆನೆಜಾಣೆ ಬಂಗಾರವ್ವ ಕೈ ತೋರೆ 54ನಿನ್ನ ಕಾಣುತ ಹಸಿವೆ ನೀರಡಿಕೆಲ್ಲ ಹೋಯಿತುಜಾಣೆ ಬಂಗಾರವ್ವ ಕೈ ತೋರೆ 55ಸಂಧಾನಕ್ಹಾರುವನಟ್ಟಿದ್ದೆ ಮೊದಲಹುದೇನೆ ಮಂಗಳದೇವಿ ಕೈ ತೋರೆ 56ನೀ ಬರೆದೊಕ್ಕಣೆ ಯದುರಾಯನರಿತಾನುಸೌಭಾಗ್ಯವಂತೆ ಕೈ ತೋರೆ 57ರಥವನೇರಿಕೊಂಡು ಬರಹ ನೋಡಿಕೊಳ್ವಜಾಣೆ ಬಂಗಾರವ್ವ ಕೈ ತೋರೆ 58ಧ್ಯಾನದ ಕಳವಳ ಮುಸುಡುಗಂಟಿನ ಚಿಂತೆಮಾಣು ಮಂಗಳದೇವಿ ಕೈತೋರೆ 59ತ್ರಿಭುವನೇಶ ಪ್ರಸನ್ನವೆಂಕಟ ಕೃಷ್ಣತಾ ಬಹನೆಲೆ ದುಂಡಿ ಕೈ ತೋರೆ 6019ಚೂರ್ಣಿಕೆಎಲೆಲೆ ಎಳೆವೆಂಗಳೆ ಎಲೆ ಹುಲ್ಲೆಗಂಗಳೆಮಹಾಭೂಷಣದ ಮಾರುವೇಣಿ ಮಡದಿಯರಸುಪ್ಪಾಣಿಕೀರವಾಣಿ ಕಿಸಲಯಪಾಣಿಕಂಧಿಜ ಬಿಂಬವದನೆ ಕುಲಿಶಮಣಿರದನೆಮದನಕಾರ್ಮುಕೋಪಮ ಭ್ರೂಲತೆಯಳೆ ಮಹಾಲಕುಮಿಯಳೆಅರುಣವಿಧ್ರುಮಾಧರೆ ಅಬ್ಜಜಾ ಕಂಧರೆಅರ್ಧಚಂದ್ರನ ಪೋಲ್ವಡಿ ಪಣೆಯಳೆ ಅನಘ್ರ್ಯ ಚೂಡಾಮಣಿಯಳೆಸಿಂಧೂರಸೀಮಂತಿನಿಯೆಸಿರಿತಿಲಕದ ಶೋಭಿನಿಯೆನುಣ್ಗದಪುನಾಸಿಕಮಣಿಯಳೆ ನೂತನೊಜ್ರದೋಲೆಯಳೆನಿಷ್ಕ ಕಂಠಾಭರಣೆಯಳೆ ನಿತ್ಯಮಂಗಳ ಸೂತ್ರಿಯಳೆನಿಡುಜಾಲಕ ಮಾಲೆಯಳೆಬುಗುಡಿ ಚಳತುಂಬು ಕೊಪ್ಪಿನ ಕಿವಿಯಳೆಬಾವಲಿ ನಾಗೋತ್ರ ಪೊಂಬರಳೆಲೆ ಲಲಿತ ಬಾಹುಲತೆಯಳೆಲಸತ್ವನಜಕೋರಕ ಸ್ತನಿಯಳೆಕಡು ತೆಳ್ವೋದರಿ ನಿಮ್ನ ನಾಭಿಯಳೆಕಂಠೀರವಕಟಿಯಳೆ ಕರಭೋರು ಯುಗಳೆಯಳೆಅಪರಂಜಿಕಂಚುಕಾಂಬರ ಉತ್ತರೀಯಳೆಅಮೂಲ್ಯ ಕಾಂಚಿದಾಮಾಂಕಿತಳೆಬಟುಗನ್ನಡಿ ಜಾನುದ್ವಯಳೆ ಬ್ಞಣ ಪಂಚಕನ ಬತ್ತಳಿಕೆ ಜಂಘೆಯಳೆಕೋಮಲತರಾಂಘ್ರಿ ಸರಸಿಜಯುಗಳೆನೀಲಪಚ್ಚ ಪದ್ಮರಾಗ ಹೀರ ಮುತ್ತಿನ ಪೆಂಡೆಯಳೆಕಾಲಂದಿಗೆ ಮೆಂಟಿಕೆ ವೀರಮುದ್ರೆ ಕಿರಿ ಪಿಲ್ಲಿಯಳೆಮಣಿಮಯಾಂಗುಲ್ಯದ ವಲಯಾಭರಣೆ ಮದಗಜಗಮನೆಪ್ರತಿಯಿಲ್ಲದ ರನ್ನದ ಬೊಂಬೆ ಪರಬೊಮ್ಮನ ಪಟ್ಟದ ರಂಭೆಬಾಬಾ ತಾತಾ ಎಂದು ವಾಮಕರವಬೇಡಲಿತ್ತಳಾ ರುಕ್ಮಿಣಿ ತಾಯಿ 6120ಜಗದ ನಾರಿಯರ ಕೈಗಳ ಕಂಡೆನವ್ವಮೃಗಮದಗಂಧಿ ನಿನ್ಹೋಲ್ವರಿಲ್ಲವ್ವ 62ಯುಗಯುಗಾಂತರ ದೇಶ ದೇಶದಲ್ಲವ್ವಅಗಲ್ಯಾಟವಿಲ್ಲ ನಿನ್ನರಸ ನಿನಗವ್ವ 63ಸವತೇರು ಬಹಳುಂಟು ನೆಂಟರ ಜಾಣೆ ಎಲೆ ಬೀಗರ ಸುಗುಣೆಯುವತಿ ಪ್ರಸನ್ವೆಂಕಟ ಕೃಷ್ಣ ನಿನ್ನ ಪ್ರಾಣ 6421ಕಣಿ ಕೇಳೆ ಕಣಿ ಕೇಳೆ ಕಣಿ ಕೇಳೆ ಚೆಲ್ವೆಕಣಿ ಕೇಳೆ ನಿನ್ನ ಮನದಾ ಮಾತ್ಹೇಳ್ವೆಎಣಿಕೆಗೊಳ್ಳದಿರಮ್ಮಇಂದುನಾಳೆಂದುಗುಣನಿಧಿ ಗೋಪಾಲ ಬಹ ದಯಾಸಿಂಧು 65ತ್ರುಟಿಯುಗವಾಗಿದೆ ನಿನಗೀಗ ಮುಗ್ಧೆಕುಟಿಲಮಾಗಧಸಾಲ್ವ ನೆನೆವ ದುರ್ಬುದ್ಧೆಘಟಿಸದೆಂದಿಗೆ ಖಳರ ಮನೋರಥ ಸಿದ್ಧೆದಿಟವೆನ್ನವಾಕುಸುರಲೋಕ ಪ್ರಸಿದ್ಧೆ66ಹಿಂದೊಮ್ಮೆ ಖಳರು ಗೋವಿಂದ ಬಂದಾಗಮಂದಮತಿಯಲಿ ಮನ್ನಿಸದಿರಲಾಗಇಂದ್ರ ಸಿಂಹಾಸನವ ಹರಿಗೆ ಕಳುಹಿಸಿದವೃಂದ ದೈತ್ಯರಿಗೆಲ್ಲ ಭಯವ ಸೂಚಿಸಿದ 67ಜಂಭಾರಿಕುಲಿಶಕಂಜುತ ಪೋಕರೆಲ್ಲಥಂಬಿಸಿದರು ವಾಗಾಡಂಬರವೆಲ್ಲಅಂಬುಜಾಕ್ಷಗೆ ನಿನ್ನತಾತಪೂಜಿಸಿದಅಂಬುಜನಾಭ ತನ್ನೊಳುವಿಶ್ವತೋರ್ದ68ಅದನೆಲ್ಲ ಬಲ್ಲ್ಯವ್ವ ಹರಿಯ ನಿಜನಲ್ಲೆಬೆದರಿದೊಲ್ಲೋರ್ವ ನಿನ್ನ ಮಾಯವ ಬಲ್ಲೆಪದುಮಜ ಭವರ ಹೃದಯಾಬ್ಜ ನಿಯಂತ್ರೆಉದಧೀಶನಾಜÕದಿ ಸರ್ವಸ್ವತಂತ್ರೆ 69ಕೇಳಮ್ಮ ನಿನ್ನ ಹೆತ್ತವರಿಗೆ ನಿನ್ನಮೇಲೆ ಹಂಬಲ ಬಹಳ ಪಾಪಿ ನಿಮ್ಮಣ್ಣಆಲೋಚನೆಯಿಲ್ಲದೆ ನಿಶ್ಚೈಸಿದ್ದಾನೆ ಶಿಶುಪಾಲಗೆ ನಿನ್ನ ಕೊಡುತೇನಂತೈದಾನೆ 70ಆಗಲ್ಯಾಕವನಿಂದಲೀಕಜ್ಜ ಬುರ್ರಾಬೇಗ ಭೀಷ್ಮಕನಂತರ ಬಲ್ಲ ಶ್ರೀಧರ್ರಾಸಾಗರಶಯನ ತಾ ಸಮಯಕೈತರುವನೇಗಿಲಧರನು ಕೃಷ್ಣನ ಕೂಡ ಬರುವ 71ಆ ಗೌರಿ ಮೌನಿಯೆಂಬುವಳ ಪೂಜೆಯಲಿಯೋಗವಾಗಿದ್ರ್ದಾ ಕಾಪುರುಷ ಸಭೆಯಲ್ಲಿಮೇಘಮುಸುಕಿರ್ದ ಚಂದಿರನಂತೆ ನಿನ್ನಯೋಗೇಶ ಪ್ರಸನ್ವೆಂಕಟ ಕೃಷ್ಣ ನೊಯ್ವ ಚೆನ್ನ 7222ಇನಿತೆಲ್ಲ ಕೊರವಂಜಿಕರವಪಿಡಿದು ಹೇಳಿಕ್ಷಣ ಕ್ಷಣಕೊಡೆಯನ ಹೊಗಳಿನೆನಪಿಗೆ ಬೆಸಗೊಂಬೆ ಕಾಲಜ್ಞಾನದ ವಾರ್ತೆಎನಗೆ ತಿಮ್ಮಯ್ಯ ಹೇಳೆಂದು 73ಶ್ರೀ ರುಕ್ಮಿಣಿಯ ಮನದುಲ್ಲಾಸವನೆಲ್ಲಪೂರೈಸುವೆನೆಂಬ ನುಡಿಯತೋರು ಎನ್ನಯ ನಾಲಿಗೆಯಿಂದಲುಸುರುವೆವೀರ ದ್ರಾವಿಡ ವೆಂಕಟಯ್ಯ 74ಶರಣ್ಯೆಲೆ ಸತ್ಯನೆ ಶರಣ್ಯೆಲೆ ನಿತ್ಯನೆಶರಣು ಶರಣು ನಿತ್ಯಮುಕ್ತಶರಣು ಪರೇಶನೆ ಶರಣು ಅವಿನಾಶನೆಶರಣು ಪ್ರಸನ್ವೆಂಕಟ ಕೃಷ್ಣ 7523ವಚನಓ ರುಕ್ಮಿಣಿ ತಾಯಾರೆಉನ್ನ ಮನಸಿಲೆ ನಿನೈಚ್ಚ ಕಾರ್ಯಂ ಕೈಕ್ಕೂಡಿನಾಲ್ಎನಕ್ಕೆ ಎನ್ನ ಸಂತೋಷಂ ಪಣ್ಣಿರಾಯ್ಓಯಮ್ಮ ಉನ್ ಪ್ರಾಣನಾಯಗನ್ ಶ್ರೀಕೃಷ್ಣನ್ ವಂದುಪೊಟ್ಟಣೆ ಕೈ ಪಿಡಿಚ್ಚಿ ಕಲ್ಯಾಣಂ ಪಣ್ಣಿಕೊಳ್ಳರಾಂಇಂದ ವಾರ್ತೆ ತಪ್ಪಿನಾಲ್ ನಾಂ ಕೊರ್ತಿಯೇ ಅಲ್ಲೆಉನ್ ತಮಯನ್ ರುಗ್ಮಂ ವೇಕ್ಕತ್ತೆ ಕೊಲ್ಲರಂ ವರಾನುಓಯಮ್ಮ ಇಂದ ವಾರ್ತೆಯೈ ಪಣ್ಣಿಕೋ ಅª, À್ಮು 7624ಮದ್ಯಪಾನಿತಾಮಸಯವನನ ಕೊಲಿಸಿದನೆನಿದ್ರೆಗೈವ ರಾಯನಿಂದಲಿಸದ್ದಿಲ್ಲದೆ ಮಧುರೆ ಜನರ ಸಾಗರದಮಧ್ಯ ದ್ವಾರಕೆಯಲ್ಲಿಟ್ಟನೆ 77ಯವನ ಸೈನ್ಯಜಲಧಿಬತ್ತಿಸಿ ಸಾಲ್ವಾದ್ಯರಹವಣಮುರಿದು ನಿಜರ ಹೊರೆವನು ನಿನ್ನವಿವಹ ಮಾಳ್ಪೆನೆಂಬ ಮಾಗಧನು ಚೈದ್ಯ ತನ್ನಕುವರನೆಂದು ಮಾನವಿಡಿದಿಹ 78ಇನಿತರೊಳು ರಂಗರಾಯನು ಮೋಹರದಿಮಣಿರಥವನೇರಿ ಬಹನುವನಿತೆ ನಿನ್ನಂದಣವ ನೋಡುತ ಜಿಗಿವನಲ್ಲಿಂದ ಘನತರ ಮೃಗೇಂದ್ರನಂದದಿ 79ನರಿಯ ಹಿಂಡಿನೊಳಗಿನಾನೆಯ ಒಯ್ವ ತೆರದಿಹರಿನಿನ್ನಪ್ಪಿಕೊಂಡುಹಾರುವಗರುಡನಮೃತ ಕಲಶವ ಸುರರ ಗೆದ್ದುಹರುಷದಿಂದೊಯ್ಯುವಂತೆ ಒಯ್ವನು 80ಸರಸಿಯಾಬ್ಜ ಹಂಸ ಒಯ್ವವೋಲ್ ಪರಮಪುರುಷತ್ವ, ರಿಯ ತನ್ನ ರಥಕೆ ಒಯ್ವನೆಬರಿಯ ದುಗುಡವ್ಯಾಕೆ ಬಾಲಕಿಪ್ರಸನ್ವೆಂಕಟ ಕೃಷ್ಣ ನಿನ್ನ ಮೆಚ್ಚುಗಾರನೆ 81ಬಂದನೆಂಬ ನುಡಿಯು ಬರುತಿದೆಜವದಿಕೃಷ್ಣಬಹನೆಂಬ ನುಡಿಯು ಬರುತಿದೆ 8225ಚೂರ್ಣಿಕೆನೀಡೆಯವ್ವ ಎನ್ನ ಮನೆ ಗಂಡನ ಕಾಟ ಘನ್ನವವ್ವಕ್ಷಣಕೈದು ನಡೆಯವನವ್ವಒಮ್ಮಾನ ತಿರಿತಂದರೆ ಇಮ್ಮಾನ ಬೇಡುವನವ್ವಚೆಂಬಣ್ಣ ಕರಿಬಿಳಿಯಬಟ್ಟೆನಮ್ಮತ್ತೆಗಳವ್ವಆರು ಮಂದಿ ಗಂಡನ ಗೆಳೆಯರವ್ವಏಳು ಪದರು ಮೂರು ತ್ಯಾಪೆ ಗುಡಲುಂಟವ್ವಎಪ್ಪತ್ತೆರಡು ಸಾವಿರ ನುಲಿಯ ಸಿಂಬಿಗಳವ್ವಗುಡಲೊಳು ಮೂರು ಒಲೆಯುಂಟವ್ವಗುಡಲು ಬಿದ್ದರೆ ನುಲಿಗೆ ಮಾರ್ಯೆವ್ವಒಂಬತ್ತು ಗುದ್ದಿನೊಳಗೆ ಹತ್ತು ಹೆಗ್ಗಣದೋಡ್ಯಾಟವವ್ವಕೊರವನ ಕೈಯಿಚ್ಛೆ ಮೂರು ನಾಯಿಗಳವ್ವಎಣಿಕಿಲ್ಲದ ಕುತ್ತಗಳುಂಟವ್ವಕೊಬ್ಬಿನ ಸವತೇರೆಂಟು ಮಂದಿ ಕೊರವಗೆ ಮಚ್ಚೂಡುವರವ್ವಸಂಸಾರದಲೆಳ್ಳನಿತು ಸುಖವಿಲ್ಲವ್ವಅತ್ತೆಗಳಾಟ ಗಂಡನ ಬ್ಯಾಟ ಸವತಿಯರ ಕಾಟನೆರೆಹೊರೆಯವರ ನೋಟ ಮನೆಯ ಮಾಟಗತರಸದೂಟಕಂಜಿ ನಡುನಡುಗಿಮೂರೂರ ಹಾದಿ ಮೆಟ್ಟಿ ಬಂದುಆರೂರರಸಿನ ಮೊರೆ ಹೊಕ್ಕೆನೆಯವ್ವವಿದರ್ಭದೇಶದ ಕುಂಡಿನಾಪುರದೊಳು ನಿನ್ನ ಗುರುತಕೇಳಿಉಪವನದ ಪ್ರದ್ಯೋತನಾಳ್ವ ಎರಡು ಬಾವಿಯ ಮ್ಯಾಗಣಹೂವಿನ ತೋಟದ ನಡುವೆ ಬುತ್ತಿಯನುಂಡು ನಿನ್ನ ಕಂಡುಕುಂತಳಾಪುರದಲ್ಲಿ ಕುಳಿತುಂಬಬ್ರಹ್ಮಾನಂದದವರ ಭಾಗ್ಯವ ಬೇಡ ಬಂದೆನೆ ಅವ್ವಅಸುವಿಗೆ ಹಾಲನೆರೆಯವ್ವಶಿಶುವಿಗೆನವನೀತನೀಡೆಯವ್ವಬಂಗಾರೆವ್ವ ಸಿಂಗಾರೆವ್ವ ಸೋರ್ಮುಡಿಯವ್ವಮಲ್ಲಿಗೆದುರುಬು ಸಂಪಿಗೆದುರುಬುಪಚ್ಚೆ ಮರುಗ ಮುಡಿವಾಳ ಶಾವಂತಿಗೆ ತುರಬಿನವ್ವಪ್ರಸನ್ವೆಂಕಟಕೃಷ್ಣನ ತೋಳ್ತಲೆಗಿಂಬಿನವ್ವ ನೀಡೆಯವ್ವ 8326ವಚನಇಂತಾಧ್ಯಾತ್ಮವಂ ಪೇಳಿಕಂತುವಿನಯ್ಯನ ಕಾಂತೆಯಂ ಸಂತಸಪಡಿಸಿಅಂತರಂಗದಿ ಚಿಂತಾಯಕನಂ ನೆನೆನೆನೆದುಭ್ರಾಂತಿ ಪರವಶಾದಂತೆ ಕೆಂಜೆಡೆಯಂ ತೂಗಿ ತೂಗಿಅಂತದತ್ಯಂತ ತೂಳಂತುಂಬಿಇಂತೆಂದಳಾ ಕೊರವಂಜಿ 8427ಬರುತಾನೆ ಜಾಣೆ ಬರುತಾನೆಬರುತಾನೆ ಚೆಲ್ವೆ ಬರುತಾನೆ 85ಹಿಂಡುಭಂಡರೆಲ್ಲ ಕೂಡಿ ನಿನ್ನ ಮುಚ್ಚಲು ಎತ್ತಿಕೊಂಡು ಒಯ್ವ ಜಾಣ ಬರುತಾನೆಪುಂಡರೀಕಸುರಗಿ ಖಡ್ಗ ಭಿಂಡಿವಾಲ ನುಗ್ಗುಮಾಡಿದಂಡಿಸುವ ಜಾಣ ಬರುತಾನೆ 86ಕುಂಡಿನಾಪುರದಿ ನೆರೆದ ಕೊಂಡಿ ಕುಹಕರ ತಲೆಯಚಂಡನಾಡ್ವ ಜಾಣ ಬರುತಾನೆಮಂಡೆಯಲ್ಲಿ ಪಚ್ಚಚೂಡವಿಟ್ಟು ರುಕ್ಮನಭಿಮಾನಕೊಂಡೇನೆಂಬ ಜಾಣ ಬರುತಾನೆ 87ತಂಡ ತಂಡದಲ್ಲಿ ನಿನ್ನಯ್ಯನ ಸದ್ವಾಸನನ್ನಉಂಡೇನೆಂಬ ಜಾಣ ಬರುತಾನೆಲೆಂಡದಾನವಾರಿ ಪ್ರಸನ್ನವೆಂಕಟಕೃಷ್ಣ ಬೊಮ್ಮಾಂಡಪತಿ ಜಾಣ ಬರುತಾನೆ 8828ಚೆನ್ನೆ ಕೊರವಂಜಿ ಮಾತು ಶ್ರೀಕನ್ಯೆಕೇಳಿನಲಿವಾಂತುಮನ್ನಿಸಿ ಗುಣವ ಕೊಂಡಾಡಿ ಮುಕ್ತಿರನ್ನಗಾಣಿಕೆಯನು ನೀಡಿ 89ಎಲೆ ಸತ್ಯಲೋಕದ ಕೊರವೆ ನೀಬಲು ಸತ್ಯ ನುಡಿದೆ ನಾನರಿವೆಛಲದಂಕ ದೇವರದೇವ ಈಖಳರೊಳು ಒಯ್ವುದರಿದವ್ವ 90ಹರಿರಥವೇರಿ ಬಾಹೋಣ ಕಾಪುರುಷರ ಮತ ಕೆಡಿಸೋಣಗುರುಪ್ರಸನ್ವೆಂಕಟ ಕೃಷ್ಣ ಬಂದುಹೊರೆವುದುಂಟೇನವ್ವ ರಮಣಿ 9129ನಂಬಲೇನೆ ನಿನ್ನ ಮಾತು ಕೆಳದಿ ಕೊರವಮ್ಮ ನಮ್ಮಂಬುಜಾಕ್ಷ ಬಾಹನೇನೆ ದೇವಿ ಕೊರವಮ್ಮ 92ಉಡಿಯ ಕಂದನಾಣೆ ಇಡುವೆ ನಂಬೆ ರುಕ್ಮಿಣಿ ನಾನುಡಿವ ನಾಮದಾಣೆ ಇಡುವೆ ನಂಬು ರುಕ್ಮಿಣಿ 93ಎಡದ ತೋಳು ತೊಡೆಕಂಗಳುಹಾರಲೊಳಿತೇನೆ ಚಿಲಿಪಿಲಿನುಡಿವಶಕುನಎಡದ ಗೌಳಿಯ ನುಡಿಯು ಒಳಿತೇನೆ94ಕಡಲಶಯನ ನಿನ್ನ ಪ್ರಾಣದೊಡೆಯ ಬಪ್ಪನೌ ಎನ್ನಪಡೆದನಯ್ಯ ಪ್ರಸನ್ನವೆಂಕಟಕೃಷ್ಣ ತಪ್ಪನೌ 9530ನಿನ್ನಗಂಡಬೆಣ್ಣೆಗಳ್ಳ ಕನ್ನೆಗೊಲ್ಲತಿಯರ ನಲ್ಲಕಣ್ಣೆವೆ ಸನ್ನೆಗಾರ ನಂದಗೋಪ ಕುಮಾರ 96ಚಿನ್ನತನದಿ ದಶಲಕ್ಷ ಚಿನ್ನರ ಪಡೆದನು ದಕ್ಷಪೊನ್ನ ಕೊಳಲನೂದಿ ಮೂಜಗವ ಮೋಹಿಸುವ 97ಉನ್ಮತ್ತಮಾತುಳನ್ನ ತುಳಿದ ತನ್ನ ಪೆತ್ತವರೆಡರ್ಗಳೆದಮನ್ನಿಸಿ ಪಾಂಡವರÀ ಪೊರೆದ ಚಿನ್ಮಯ ಸುಖದ 98ಪೆಣ್ಗಳ್ ಹದಿನಾರುಸಾವಿರದ ನೂರೆಂಟನಾಳ್ವ ಚದುರನಿನ್ನ ಪ್ರಾಣ ಪ್ರಿಯ ಬಂದ ಪ್ರಸನ್ನವೆಂಕಟ ಕೃಷ್ಣ ಮುಕುಂದ 9931ನುಡಿ ನುಡಿಯೆಲೆ ಬಡನಡುವಿನ ಮಡದಿ ನಿನ್ನುಡಿಗುಚಿತವಕೊಡುವೆನಡಿವಿಡಿವೆ ಮನವಿಡುವನೆ ಕಡಲೊಡೆಯ ಕೈವಿಡಿವನೆ ಎನ್ನ ಕಡೆಯ ನೋಡಿ ನುಡಿವನೆ ಸವಿನುಡಿಯಕಡು ಬಲಿಭುಜ ಗಡಣಂಗಳ ನಡುವ್ಹಂಸನಪಡಿಮಿಡುಕುವೆನುಡಿ ಬೇಗೆಂದು ಪಡೆಗೂಡಿ ಹಲಿಯೊಡನಾಗಮ ನುಡಿಯೇ ನಿನ್ನುಡಿಗಮೃತವ ಪಡೆಯೇ ಮತ್ತೀಜಡಜಡಿ ಲೋಕೊಡೆಯೆ ಪ್ರಸನ್ನವೆಂಕಟ ಕೃಷ್ಣರಾಯನನುಡಿಯೆಲೆ ನುಡಿನುಡಿಯೆ ನುಡಿನುಡಿಯೆ 10032ಹರಿಬರುತಾನೆ ಗುರುತು ಗಂಟ ಕಟ್ಟೆಪಕೇಳೆ ನರಸಿಂಗನಂಗನೆಯನೊಯಿದು ಕೆಟ್ಟನರಿಗಳಾಳಬಲ್ಲವೇನೆ ನಲಿದು ನೀನುದುರುಳರಿಗೆ ದಕ್ಕಬಲ್ಲ್ಯೇನಮ್ಮ ನಿನ್ನಾಚರಣೆಯೆಲ್ಲ ಜಗದ್ವಿಡಂಬನಮ್ಮ 101ನನ್ನ ತರಳನಾಣೆ ಸಟೆಯನಾಡೆನಮ್ಮ ನಾನೊರೆದವಾಕುಸಾಕ್ಷಿ ಬರುತಾವಮ್ಮ ಮ್ಯಾಲರಕೆಯುಳ್ಳ ತಾಯಿಯಾದರೆ ನೀ ನನ್ನಕರೆಸಿ ಕೇಳೆ ನಿನ್ನ ಮನೆಗೆ ಜಾಣೆ 102ನಿನ್ನ ಹೆಸರ ತಕ್ಕ ಊಟವ ನೀಡೀಗ ನಾಹಸಿದೆನೆಂದು ಉಂಡುಕೊರವಿಬೇಗಪ್ರಸನ್ನವೆಂಕಟ ಕೃಷ್ಣನ ರಾಣಿಗೆÉ ಹಾರೈಸಿದಳು ಬಸುರು ಬುಡುಕೆಂದು 10333ಚಕ್ಕನೆ ನಿಂತಳು ಕೊರವ್ಯಮ್ಮ ಕಂಡುಫಕ್ಕನೆ ನಿಂತಳು ರುಕ್ಮಿಣಮ್ಮ ಪ್ರಾಣದಕ್ಕರ ಬಿಡಲಾರೆ ನಿನ್ನ ಗೆಳತಿ ಪ್ರೇಮಉಕ್ಕುತಿದೆ ನೀ ಹೋಗುವುದೊಳಿತೆ ಎನಲು ನಕ್ಕು 104ಶ್ರೀ ಗೋಪಾಲ ಬಾಹನಕ ನಿಲ್ಲೆ ವಿಯೋಗ ತಾಳಲಾರೆ ನೀ ಬಲ್ಲೆಹೀಗೆನೆÀ್ನ ಬೇಡಿಕೊಂಡಳು ಮರುಳೆ ನೆನೆದಾಗೆ ಬಹೆನೆಂದ್ಹೇಳಿ ತೆರಳೆ ಅನುರಾಗದಿಂದ 105ಆವ ಪರಿಂದಾರೆ ಹರಿಸೇವೆ ಮಾಡಿದೇವಋಷಿ ನಿಜಾನಂದ ತೀವಿಶ್ರೀವರ ಪ್ರಸನ್ವೆಂಕಟ ಕೃಷ್ಣನ ಮಹತೇವಿಡಿದು ಹೊಗಳುತ ಮುನಿರನ್ನ ರಾಮೆಯಾಜÕದಿ 10634ಸುರಋಷಿಪೇಳ್ದ ಒಕ್ಕಣೆಯಹರುಷದಿ ಕೇಳ್ದ ರುಕ್ಮಿಣಿಯಅರಸ ಪ್ರಸನ್ನವೆಂಕಟ ಕೃಷ್ಣನಿರುತದಿ ಜಯ ನಮಗೀವ 107ಜಯ ಜಯ ಚಿನ್ಮಯಮೂರ್ತಿಜಯ ಜಗನ್ಮಯ ಸ್ವಚ್ಛಕೀರ್ತಿಜಯ ಜಯ ಪ್ರಸನ್ವೆಂಕಟ ಕೃಷ್ಣಜಯಮೂರ್ತಿನಿನಗೆ ಶರಣು108
--------------
ಪ್ರಸನ್ನವೆಂಕಟದಾಸರು
ಮನಸು ನಿನ್ನ ಮೇಲೆ ಬಹಳ-ಕಾಲ |ಅನುಕೂಲಿಸದೊ ಗೋಪಾಲ ಪನಿನ ಕೂಡೆ ಈಗ ಕೂಡುವೆನೆಂದರೆ ಮನೆ-|ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪಗಂಡನೆಂಬವನು ಉದ್ದಂಡ-ಎನ್ನ |ಕಂಡರೆ ಸೇರನುಭಾವಪ್ರಚಂಡ ||ಭಂಡೆ ಅತ್ತೆಯು ಲಂಡೆಅತ್ತಿಗೆಕೇಳೊ |ಕಂಡರಿಬ್ಬರನು ದಂಡಿಸುವರೊ ರಂಗ 1ನೆರೆಹೊರೆಯವರೆನ್ನನೆಲ್ಲ-ಮೈಯ |ನೆರಳ ಕಂಡರೆ ಸೇರರಲ್ಲ ||ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |ಮರೆಮಾತನಾಡಲು ವೇಳೆ ಕೂಡದೊ ರಂಗ 2ಮದುವೆ ಮಾಡುವರೊ ಮನೆಯೊಳು-ನಾಳೆ |ಅದರ ಸಂದಣಿಯ ಹೊಂಚಿನೊಳು ||ಮುದದಿಂದ ಕೂಡುವೆನಾವ ಪರಿಯೊಳು |ಮದನತಂತ್ರದಿಂದ ಪುರಂದರವಿಠಲ3
--------------
ಪುರಂದರದಾಸರು
ಹರಿಯೆ ಅಚ್ಯುತಾನಂತ ಗೋವಿಂದದುರುಳಹಿರಣ್ಯಕ ಅಸುರ ಅವತರಿಸಿದರೆ ಎಲ್ಲಿಪರಿಪರಿಯ ಲೋಕ ಪಾತಾಳ ಸ್ವರ್ಗವ ಗೆದ್ದುಪಡೆದು ಅವನ ಸತಿಯ ಸುರಪತಿಯು ಎಳೆತರಲುಅಲ್ಲಿ ಗರ್ಭದಲಿ ಪ್ರಹ್ಲಾದನಿಹನೆಂದುಹರಿಯೆ ಚಂಡಹಿರಣ್ಯಕ ಅಸುರ ದಂಡಿಸುವದುಷ್ಟಮರ್ದನ ದೂರಾತಿದೂರ ಜಗ-ಪರಿಪರಿಯಿಂದ ತುತಿಸುತ್ತ ಕರಗಳ ಮುಗಿಯೆಇತ್ತ ಸುರರೆಲ್ಲ ತಮ್ಮ ತತ್ತಸ್ಥಾನಕೆ ಪೋಗೆಒರೆದೊರೆದು ಪೇಳಿ ಬಹು ಬಗೆ ಬಗೆಯಿಂದಲಿನಮ್ಮ ಅಂತರ ತತ್ವ ನಿಶ್ಚಯವೆ ಇದು ಸರಿಅನ್ಯರಲ್ಲವು ನಾವು ಹಿತವರೆ ನಿನಗಿನ್ನುಭಿನ್ನ ದೇಹ್ಯವುನೋಡುಮುನ್ನಿಂದಲಿ ಇನ್ನುಬಾಧ್ಯ ಬಾಧಕ ಹರಿಯೆ ಸಾಧ್ಯ ಸಾಧನಕೆಹರಿಚಂಡಮಾರ್ಯರು ತಾವು ಚೆಲುವ ಬಾಲಕಿ ಕೇಳುಆವ ವಿಪರೀತವನೆ ಅಲ್ಲದ್ದು ನುಡಿದನುಏಸುಬಗೆಯಿಂದ ಉಪಾಯದಲಿ ಕೇಳಿದರುಈಸು ದಿನ ಇವ ಎನ್ನ ಸುತನು ಎಂದರಿದಿದ್ದೆನಾನಾ ಬಗೆಯಿಂದ ವಧೆಗೇನೇನು ಉಪಾಯಎಲ್ಲಿ ಪ್ರಹ್ಲಾದ ನಿನ್ನೊಡೆಯನು ಇನ್ನುಭುಂಗಿ ಭುಂಗಿಗೆ ಬ್ರಹ್ಮಾಂಡವೆಲ್ಲ ಗದ್ದರಿಸಿನ್ನುಬಿರಬಿರನೆ ಕಣ್ಣುಗಳ ಬಿಡುವುತ್ತ ಹೂಂಕರಿಸಿಕೆಡಿಸದೆ ತಾನಿತ್ತವರಸತ್ಯವೆಂದೆನಿಸಿಪರಿಪರಿಯಿಂದ ಸಿರಿದೇವಿಗೆಇದೆ ಸಮಯವೆಂದುಸಿರಿಅಜಭವಾದಿಗಳೆಲ್ಲಪರಿಪರಿಯಿಂದಸುರ ಋಷಿಪಿತೃ ಗಂಧರ್ವಕಂದ ಪ್ರಹ್ಲಾದನ್ನ ಮುಂದಕ್ಕೆ ಕರೆದು ನಿಮ್ಮಮೆಚ್ಚಿದೆನು ಪ್ರಹ್ಲಾದ ವರವ ಬೇಡೆಂದೆನಲುಆಗ ಪ್ರಹಲ್ಲಾದಗೆ ಕರಕಮಲಗಳಿಂದಹರಿಯೆ ಜಗಕಿನ್ನು ಇರತೋರಿನ್ನು ಪ್ರಹಲ್ಲಾದಜಯ ಜಯತು ಪ್ರಹ್ಲಾದವರದ ಜಗದಾಧಾರ
--------------
ಗೋಪಾಲದಾಸರು