ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಮ್ಮನರಿಯದೆ ತಮ್ಮೊಳೀತೆರನಾಡುವರು |ಹಮ್ಮ ಬಿಡದೆ ಪರಬಮ್ಮನ ಜರಿಯುವರು ಪ ಒಂಬತ್ತು ಛಿದ್ರುಳ್ಳ ಕುಂಭದ ಗಾಲಿಗೆ |ಸ್ತಂಭದಂತೆ ನಿಲಿಸಿ ಸಂಭ್ರಮ ಪಡೆವರು 1 ಮುಂಡ ಬೋಳವ ಮಾಡಿ ಕಂಡಲ್ಲನ್ನವನುಂಡು |ದಂಡ ಧರಿಸಿ ಮನ ದಂಡಿಸದಿರುವರು 2 ಕದಲಿಸದೆ ಕಾಯಾ ಹದನದಿಂದಲಿರಿಸಿ |ವೇದದ ಮೊದಲೆಂದು ನಾದಕೆ ಬೆರೆವರು 3 ಓದಿ ಆಗಮಗಳನು ಭೇದಿಸಿ ತಿಳಿಯದೆ |ಮೇದಿನಿಯೊಳಗೆಲ್ಲ ವಾದಿಸಿ ಮೆರೆವರು 4 ಪಥ ಪಡೆದು ವೇಷ ಪಾಲಟ ಮಾಡಿ |ದೋಷಕಂಜದೆ ರುಕ್ಮ ಭೂಷಗೆ ಮರೆವರು 5
--------------
ರುಕ್ಮಾಂಗದರು