ಹೋಯಿತು ಪರಶುರಾಮನ ದಂಡಿಲಿ ನಷ್ಟ
ವಾಯಿತು ಜನರೆಲ್ಲ ಹೊಡೆತ ಕಡಿತದಿ ಪ
ಮೇಧಿನಿಯೊಳಗಣ ಜನರಿಂಗೆ ದಂಡಿಂದ
ಮಣಿ ಮುತ್ತು
ತೀರ್ದುದು ಕಂಚು ತಾಮ್ರಗಳು ಬಹುಕಾಲ
ಸಾಧಿಸಿದೊಡವೆ ಸಾಧನ ಸಂಪತ್ತುಗಳೆಲ್ಲ 1
ಉಡುವ ತೊಡುವ ಜವಳಿ ಅಡಕೆ ಮೆಣಸು ಭತ್ತ
ಕಡಿತ ಕಂಠಗಳಾಬ್ರ ಮುಡಿ ಉಪ್ಪುಗುಢಕಲ್ಲು
ಗಡಿಗೆ ಮಡಕೆ ಎಣ್ಣೆ ಕೊಡವು ಕಬ್ಬಿಣದ ಕತ್ತಿ
ಅಡಿಯಿಟ್ಟ ಚಿಟ್ಟು ಪಾಟ್ಟಿಗಳೊಂದುಳಿಯದಂತೆ 2
ಕೊಟ್ಟದೊಳಗೆ ಇಟ್ಟವಸ್ತು ವಡವೆಯೆಲ್ಲ
ನಷ್ಟವಾಯಿತು ಹಾರೆ ಕೊಡಲಿ ಗುದ್ದಲಿ ಕುಳ
ಬಟ್ಟಲು ಹಂಡೆ ಕೊಪ್ಪರಿಗೆ ಇಕ್ಕುವ ಗುಂಡಿ
ಮಣಿ ಮರಿಗೆ ಸರ್ವಸ್ವವು 3
ನಗ ಯೊತ್ತು ಉಂಗುರ ಜಪಮಣಿ ಮಾಲೆ ಹವಳ ಯಾ
ರೆತ್ತುವ ನಗನಾಣ್ಯವೆಲ್ಲ ಸುಲಿಗೆಯಿಂದ 4
ಅಂಧಕಾರಕೆ ನೆರವಾದಂತೆ ದುರ್ಭಿಕ್ಷ ಬಂದಿತು ಸಂಗಡ
ತಂಡುಲ ಗದ್ಯಾಣವೊಂದಕೈದಾಗಿ ಮುಗಿತು
ಹರಿನಂದನ ಕೋಣೆ ಲಕ್ಷ್ಮೀಶನೊಬ್ಬನೆ ಬಲ್ಲ 5