ಉಪವಾಸ ಬೀಳುವುದ್ಯಾಕೋ ಮನುಜಉಪವಾಸ ಬೀಳುವುದ್ಯಾಕೋಉಪವಾಸ ಬೀಳಲಿಕೆ ನಿನಗೆ ಗ್ರಹಚಾರ ಸಾಲದೆ ಬೇಕೋ ಪ
ಅಂಗದಿ ತತ್ವಾಭಿಮಾನವು ಇರಲಿಕೆ ಆಹಾರವರ್ಜಿಪುದ್ಯಾಕೋಮಂದ ಮತಿಗಳು ಕೂಡಿಯೆ ನೀನು ಮಂದಮತಿಯಾದೆ ಯಾಕೋ 1
ದೇಹದಿ ವೈಶ್ವಾನರನಿರಲಿಕೆ ದೇಹವ ದಂಡಿಪುದ್ಯಾಕೋಮಹಾವ್ರತವೆಂದು ಮೊಸರ ಬಿಟ್ಟು ಮಣ್ಣನೆ ಮುಕ್ಕುವಿಯಾಕೋ 2
ನಿತ್ಯಾತ್ಮನು ಚಿದಾನಂದ ತಾನಿರೆ ನಿರಾಹಾರವದ್ಯಾಕೋಮತ್ತೇಕಾದಶಿ ಶಿವರಾತ್ರೆನ್ನುತ ಬಿಣ್ಣನೆ ಬಳಲುವಿಯಾಕೋ 3