ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆರೆನಂಬಿದವರನ್ನ ಪರಿವೆಮಾಡದೆ ಇನ್ನು ಪೊರೆಯದಿರುವರೆ ಪರಮಪುರುಷನೆ ನರಹರೆ ನಿಮ್ಮ ಚರಣ ಕಮಲವ ಹಾಗೆ ಸ್ಮರಿಸುತಿರುವಂಥ ಪರಮಪುಣ್ಯ ಭಕ್ತಜನ ರನು ಪಾಲಿಸದೆ ಇನ್ನು ಇರುವದುಚಿತವೆ ಪ ಅಮಿತ ಪರಾಕ್ರಮ ಕುಂಡಲಶಯನ ಅಕ್ರೂರ ವಂದ್ಯಾ ಪುಂಡರೀಕಾಕ್ಷನೆ ಪುಣ್ಯ ಪ್ರಭಾವನೆ ಕುಂಡಲಾಧಿಪ ದೇವ ಮಹಾನುಭಾವ ದಂಡಿದಾನವ ಖಂಡಗರ್ವ ಅಖಂಡಮುನಿಮನ ಮಂಡಲ ನಿಲಯ ಕೋದಂಡಧರನೆ ಅಂಡಜ ಗಿರಿವಾಸ ಹರಿಗೋವಿಂದನೆ 1 ಭೂಮಿಜರಮಣ ಸಂಪೂರ್ಣಾನಂದನೆ ಸಾಮಗಾನಲೋಲ ಸರ್ವೇಶನೆ ಕಾಮತಾರ್ಥಗಳೀವ ಕರುಣಾಸಾಗರ ದೇವಾ ಸ್ವಾಮಿ ಜಗನ್ನಾಥ ಸರ್ವೋತ್ತಮನೆ ಕಾಮ ಜನಕ ಸುದಾಮ ರಕ್ಷಕ ಪ್ರೇಮ ಸೀತಾರಾಮ ಜಗತ್ಪತಿ ಶೌರಿ ಶ್ರೀಹರಿ ಕೋಮಲಾಂಗ ಕೃಷ್ಣ ಮೂರುತಿ 2 ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕನಾಗಿ ಸಕಲಭಾರಕರ್ತ ಶ್ರೇಷ್ಠನೆ ನಿಕರದಿ ಸಲಹುವ ನಿಜನಿತ್ಯಾನಂದಾನೆ ಪ್ರಕೃತಾದಿ ಪಾಲಿಸುವ ಪರಮಾತ್ಮನೆ ಸಕಲ ವೈಭವ ಚಿದ್ವಿಲಾಸನೇ ನಿಖರಾರೈ ನಿನ್ನಲಿ ನಮೋ ಭಕುತವತ್ಸಲ ಮುಕುತಿದಾಯಕ ರುಕ್ಮಣಿಯವರ 'ಹೆನ್ನವಿಠ್ಠಲಾ’ 3
--------------
ಹೆನ್ನೆರಂಗದಾಸರು
ಶೇಷಗಿರಯವಾಸಾ ಶ್ರೀವೆಂಕಟೇಶಾ ಶಾಶ್ವತ ಜಗದೀಶಾ ಪ ಸಾಸಿರ ನಾಮದೊಡೆಯಾ ಸಕಲ ಭಕ್ತರ ಪ್ರೀಯಾ ಕಾಯ ವಸುದೇವನಂದನ ಜೇಯಾ ಅ.ಪ ಕಟ್ಟಿಕೊಂಡು ಲಂಕೆಯಪುರವಾ ಪುಂಡಮಹಾನುಭಾವ ದಂಡಿದಾನವರನ ಹಿಡದಾ ಖಂಡಗಳು ಕತ್ತರಿಸಿನಿ ದಶಶಿರ ಪುಂಡರೀಕ ವರದ ದೇವ 1 ಪತಿ ಮಾಧವ ಶ್ರೀ ಮುಕುಂದಾ ಭೇದಿಸಿ ಹರಿಕೊಂದಾ ಪೊಗಳಲೊಶವೆ ವೈಭವ ದೇವ ದೇವಾ 2 ತ್ಯಜಿಸಿ ವೈಕುಂಠದಿಂದಾ ಭಜಕಾರ ಪೊರೆವ ನಿಜವುವುಳ್ಳ ಕನ್ನಿಕೆಯ ಸಂಗ ಭಜನಿಯನು ಕಳಕೊಂಡು ಬಂದ ತ್ರಿಜಗವಂದಿತ ಹೊನ್ನ ವಿಠಲಾ 3
--------------
ಹೆನ್ನೆರಂಗದಾಸರು