3. ನೀತಿಬೋಧೆ
ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ಪ
ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ಅ.ಪ.
ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲ್ಲಿ ತಂದು ನಿಲ್ಲಿಸಿ ನೃಪರಕನ್ನೆಯರ ಷೋಡಶಸಹಸ್ರವನೆ ತಂದಾತಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ 1
ಕರ ಪಡೆದ ಕಾರ್ತವೀರ್ಯಾರ್ಜುನನುಭೂವಲಯದೊಳಗೊಬ್ಬನೇ ವೀರನೆನಿಸಿರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿಸಾವಾಗ ಏನು ಕೊಂಡೊಯ್ದನೋ ನೋಡೊ 2
ಕೌರವನು ಧರೆಯೆಲ್ಲ ತನಗಾಗಬೇಕೆಂದುವೀರ ಪಾಂಡವರೊಡನೆ ಕದನಮಾಡಿಮಾರಿಯ ವಶವೈದಿ ಹೋಹಾಗ ತನ್ನೊಡನೆಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ3
ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿಉರಗ ಜನುಮವನೈದಿ ಹೋದಾಗ ತನ್ನೊಡನೆಸುರಲೋಕದೊಳಗೇನ ಕೊಂಡ್ಹೋದ ನೋಡೊ 4
ತುಂಗಗುಣ ಧ್ರುವ ವಿಭೀಷಣ ಹನುಮಾದಿಗಳುಮಂಗಳಾತ್ಮಕ ಹರಿಯನರಿತು ಭಜಿಸಿಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನುರಂಗವಿಠಲರೇಯನ ನೆರೆ ನಂಬಿರೋ 5