ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಪರೊಬ್ಬರಿಲ್ಲ ಪ ದಂಡಾದಿ ರಾಜ್ಯವು ಕೆಟ್ಟು ಪೋಕ ಪುಂಡರು ಹೆಚ್ಚಿ ಮಾರ್ಗವತೋರಿ ಕೊಟ್ಟು ಪೆಂಡಾರರಿಗೆ ಸುಲಿಗೆ ಕೊಟ್ಟು ಭೂ ಮಂಡಲದೊಳಗಣ ಜನರೆಲ್ಲ ಕೆಟ್ಟು 1 ಎತ್ತು ಮುಟ್ಟುಗಳೆಲ್ಲ ಹೋಗಿ ಬೀಳು ಬಿದ್ದು ಗದ್ದೆಯ ಪೈರು ನಿಸ್ಥಳವಾಗಿ ತುತ್ತುರಿಗಳು ಸುಟ್ಟು ಹೋಗಿ ದಂಡು ನಿತ್ತು ಪ್ರಜೆಗೆ ಮನೆ ಮುಖವಿಲ್ಲದಾಗಿ 2 ಕರಿದೋ ಬಿಳಿದೋ ಕಾಣೆ ಕ್ಷೀರ ಕೊಡುವ ತರುಗಳಿಲ್ಲವು ಮರ ಒಣಗಿ ಅರಮನೆ ಯತ್ತಣಿಂ ಘೋರ ಕರೆ ಕರೆಯೊಳು ಬಂದಿತಯ್ಯ ಗ್ರಹಚಾರ 3 ಗಂಜಿ ಗಾಸ್ಪದವಿಲ್ಲವಾಯ್ತು ಮೂರು ಸಂಜೆಯ ದೀಪಕೆ ಕೊಳ್ಳಿ ಬೆಳಕಾಯ್ತು ಅಂಜನ ಪಾತ್ರೆ ಹೆಚ್ಚಾಯ್ತು ಬದುಕಲು ನಾಲ್ಕು ವರ್ಣ ಒಂದಾಯ್ತು 4 ಕಾಲಗತಿಯು ಬಲು ಬಿರುಸು ಮುಂದೆ ಬಾಳುವ ಜನರಿಗೆ ನೃಪರಿಂದ ಹೊಲಸು ಶೂಲಿ ಸಾಯುಜ್ಯವ ಬಯಸು ಲಕ್ಷ್ಮೀ ಲೋಲನ ನಾಮವ ಮನದೊಳುಚ್ಚರಿಸು 5
--------------
ಕವಿ ಪರಮದೇವದಾಸರು