ದಂಡವ್ಯಾತಕಯ್ಯ ಹರಿ ಹರಿ ದಂಡವ್ಯಾತಕಯ್ಯ ಪ
ದಂಡವ್ಯಾತಕಯ್ಯ ಪಾಂಡುಪಕ್ಷ ಮಹ
ಪಾದ ಮರೆಯ ಬಿದ್ದವರಿಗೆ ಅ.ಪ
ಭಾರನಿನ್ನದೆಂಬ ಭಕ್ತರ ಭಾರವಹಿಸಿಕೊಂಬ
ಪಾರಕರುಣಾನಿಧಿ ಧೀರ ನಿನ್ನ ಪಾದ
ಸೇರೆ ಭಜಕರಿಗೆ ಧಾರುಣಿ ಜನರ 1
ಅಜಾಮಿಳನಂತ್ಯದಿ ತವನಾಮ ನಿಜವಾದೊಂದಕ್ಷರದಿ
ಮಜೆದು ಗೆಲಿದು ಕಷ್ಟ ನಿಜಪದ ಪಡೆದದ್ದು
ನಿಜವನರಿತು ನಿಮ್ಮ ಭಜಿಸುವ ಜನರಿಗೆ 2
ಸಿಂಧುಶಯನನೆನಲು ಅನ್ಯರ ಬಂಧುವೆ ಕರುಣಾಳು
ಮಂದರಪರ್ವತ ಮಂದಿರ ಶ್ರೀರಾಮ
ಪಾದ ವಂದಿಸಿ ಸುಖಿಪರಿಗೆ 3