ಧರಣೆಯನಾಳ್ವ ಪಾರ್ಥಿವರಿಂಗೆ ಪ್ರಜೆಗಳು ಬೇಡವಾಯ್ತು
ವರಹದ ಮೇಲಣಾಸೆಯಿಂದ ರಹಿತರ ಬಡಿವುದಾಯ್ತು ಪ
ರಾಜ್ಯಕೆ ದಂಡ ಹಾಕಿದರು ತೀರಿತೆಲ್ಲಿ
ಪ್ರಜೆಗಳ ಬಾಳು ನಜರು ಕೊಡುವುದಾಯ್ತು
ತೆರತೆರುವುದರಿಂದ ವರಹಕೊಂಡು ಬಂದು
ಏರೆಯ ರೂಪಾಯಿಗಳನು ಎತ್ತಿ ದಂಡಿಗೆ ಕೊಡುವುದಾಯ್ತು 1
ಮತ್ತೆ ಸೇನಭೋಗರು ಶಿರಸ್ತೆದಾರರು ಸಾವಿರ ಸಾವಿರ
ವೆತ್ತಿ ಜನಕೆ ಬೆದುಕಮಾಳ್ವ ಕರಣಿಕರಿಗೆ
ಪತ್ತು ನೂರು ಮೂರು ಸಾವಿರವೆಂದು ದಂಡವನುಕಟ್ಟಿ
ವಿತ್ತವನ್ನು ಸೆಳೆದರದುವೆ ಬಿತ್ತು ಬೇರೆ ಪ್ರಜೆಗಳ ಮೇಲೆ 2
ಸೂಳೆ ಮಾಲೆಯರನು ಕರೆಸಿ ಜನಕೆ ಸಾವಿರದಂಡಕಟ್ಟಿ
ಕೂಳತಿನಲು ಬಿಡದೆ ತರುಬಿವಾಲೆ ಮೂಗುತಿ ನಾಣ್ಯಗೊಂಡು
ಬೀಳು ಕೊಟ್ಟು ಮನೆಗೆ ಅಂಗಡಿ ಸಾಲುವಳಿಗೆಯರನು
ಕಾಲನಂತೆ ದಣಿಸಿ ರೊಕ್ಕದ ಜಾಳಿಗೆಯನು ಕೊಂಡು ಮೆರೆವ 3
ಸುಲಿಗೆಯಾಗ ದುಳಿಯಲಿಲ್ಲ ಬೆಳೆದ ಬೆಳೆಯ ನುಣ್ಣಲಿಲ್ಲ
ಹೊಳಲ ಸುಟ್ಟು ಬಿಟ್ಟುದೆಲ್ಲ ಕುಲಕೆ ಪಶುಗಳುಳಿಯಲಿಲ್ಲ
ತಲೆಯ ಚಂಬುಹಾರಿತಲ್ಲ ಜನರು ಸತ್ತು ಹೋದುದೆಲ್ಲ
ಮಲೆತ ರಿಪುಗಳನ್ನು ಕುಟ್ಟಿ ಪ್ರಜೆಗಳ ಕಾಯ್ದು ಕೊಳ್ಳಲಿಲ್ಲ 4
ತಿರುಕರಿಂಗೆ ಸುಖಿಗಳಿಂಗೆ ಹರುವೆ ಸೊಪ್ಪುಮಾರ್ವರಿಂಗೆ
ತರುಣಿಯರನು ಬಿಟ್ಟು ತಲೆಯ ಹೆರೆಸಿ ಕೊಂಡಲೆಗಳರಿಂಗೆಗೆ
ಹಿರಿದು ಕಿರಿದು ಎಂದು ಬಿಡದೆ ಮರುತ ಸುತನ ಕೋಣೆಲಕ್ಷ್ಮಿ
ಯರಸ ರುದ್ರರೂಪಧರಿಸಿ ಜನರಿಗಿನಿತು ಮಾಡಿದ 5