ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಯಸ ಸಿದ್ಧಿ ಕೊಟ್ಟಾವಮ್ಮ ಒಲಿದಾಳೆ ದೂತೆ ಶ್ರೀಶನ ದಯ ಸೂಸಿತುಳುಕುತ ಶ್ರೇಯಸ್ಸು ಬರಲೆಂದು ಪ. ಶುದ್ಧ ಮುತ್ತು ರತ್ನದವಸ್ತ ತಿದ್ದಿಸೀರಿ ಕುಪ್ಪುಸ ತೊಟ್ಟುಬದ್ಧವಾದ ತಳಪಿಲಿಂದ ಮುದ್ದು ಸುರಿಯುತ1 ಪುಂಡರಿಕಾಕ್ಷನ ಪಾದಕೆ ದಂಡಪ್ರಣಾಮವ ಮಾಡಿ ಕೊಂಡಾಡಿ ಕೃಷ್ಣನ ನಡೆದಳು ಪಾಂಡವರರಮನೆಗೆ2 ಭಾವೆ ರುಕ್ಮಿಣಿ ದೇವಿಯರಿಗೆ ಭಾವ ಭಕ್ತಿಯಿಂದ ನಮಿಸಿ ಸ್ವಾಮಿ ಕಾರ್ಯ ಸಾಧಿಸಿ ನಿಸ್ಸೀಮಳು ನಡೆದಾಳೆÉ 3 ಅಂದಣ ಏರಿದಳು ದೂತೆ ಬಂದವು ನೀರಿನ ಕುಂಭಚಂದದ ಸೇವಕರು ಮಾರ್ಗ ಮುಂದೆ ನಡೆದರು 4 ಹಾಲು ಮೊಸರು ಹಲವು ಫಲ ಸಾಲುಸಾಲು ಮುತ್ತೈದೆಯರು ಮೇಲಾದ ವಿಪ್ರರು ಮೇಲೆ ಮೇಲೆ ಬಂದರು5 ಧೀರ ಧರ್ಮರಾಯನ ಸಭೆüಯ ದ್ವಾರಪಾಲಕಳಾಗಿ ದೂತೆ ವೀರ ಮುದ್ರಿಕೆಯ ಕೊಟ್ಟು ನೀರೆ ನಡೆದಳು6 ಶ್ರೀದೇವಿ ದೂತೆ ರಾಮೇಶನ ಪಾದಸ್ಮರಣೆಯ ಮಾಡಿಮೋದಭರಿತಳಾಗಿ ರಾಯನ ಪಾದಕ್ಕೆರಗಿದಳು 7
--------------
ಗಲಗಲಿಅವ್ವನವರು
ವಿಧಿ ನಿಷೇಧವು ನಿನ್ನ ಸ್ಮರಣೆ ವಿಸ್ಮರಣೆಯ- ಲ್ಲದಲರಿಯರೇನೊಂದು ಹರಿಭಕ್ತರು ಪ ಮಿಂದದ್ದೆ ಗಂಗಾದಿ ತೀರ್ಥಗಳು ಸಾಧುಗಳು ಬಂದದ್ದೆ ಪುಣ್ಯ ಕಾಲವುಗಳು ಅವರು ನಿಂದದ್ದೆ ಗಯ ವಾರಣಾಸಿ ಕುರುಕ್ಷೇತ್ರಗಳು ಬಂದು ಪೋಗಲು ಅದುವೆ ರಾಜಬೀದಿ 1 ಕಂಡು ಕಂಡದ್ದೆಲ್ಲ ಕಮಲನಾಭನ ಮೂರ್ತಿ ಮಂಡಿಸಿದ ಶಯನ ದಂಡಪ್ರಣಾಮ ತಂಡತಂಡದ ಕ್ರಿಯೆಗಳೆಲ್ಲ ಹರಿ ಪೂಜೆಗಳು ಮಂಡೆ ಬಾಗಿಸಿ ಸಮಿಪ ಶರಣ ಜನಕೆ 2 ನಡೆವ ನಡೆಯೆಲ್ಲ ಲಕ್ಷ ಪ್ರದಕ್ಷಿಣೆ ಮತ್ತೆ ನುಡಿವ ನುಡಿಯೆಲ್ಲ ಗಾಯಿತ್ರಿ ಮಂತ್ರ ಒಡೆಯ ಶ್ರೀಕಾಂತನ್ನ ಅಡಿಗಡಿಗೆ ಸ್ಮರಿಸುತಿಹ ದೃಢ ಪ್ರಜ್ಞರೇಂಗೈಯ್ಯಲದುವೆ ಮರ್ಯಾದೆ 3
--------------
ಲಕ್ಷ್ಮೀನಾರಯಣರಾಯರು