ಒಂದೇ ಮಂತ್ರವು ಸಾಕೋ ಶ್ರೀರಾಮ ಎಂಬ ಪ
ಒಂದುಸಾಸಿರ ಮಂತ್ರಕೊಂದೇ ಸಾಟಿಯು ಎಂದು
ಇಂದುಶೇಖರ ಪೇಳ್ವ ಶ್ರೀರಾಮ ನಾಮವೆಂಬ ಅ.ಪ
ಮಾಹೇಶ್ವರ [ನುತ] ಮಂದರೋದ್ಧಾರ ಕೇಶವ
ಶ್ರೀಹರಿ ಭೂದೇವಿಯುತ ಮೃಗೇಂದ್ರ ವರದಾ
ರೋಹಿಣಿಪುತ್ರ ವೇಣುವಿಶಾರದ
ಬಾಧಾಪಹಾರಕ ಕೇಶವ ನಾಮಂಗಳೆಲ್ಲಕೆ 1
ನಾರಾಯಣಾಚ್ಯುತ ಗೋವಿಂದ ಮಾಧವ
ನೀರೇಜಭವತಾತ ದಾಮೋದರ
ಕ್ಷೀರಾಬ್ಧಿ ಮಂದಿರ ಖಗೇಂದ್ರವಾಹನ
ಶ್ರೀರಂಗ ಮಾಂಗಿರಿಯ ಕೋದಂಡಧರನೆಂಬ 2