ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಘವೇಂದ್ರ ಯತಿಸಾರ್ವಭೌಮ ದುರಿ ತೌಗಘದೂರ ತೇ ನಮೋ ನಮೋ ಪ ಮಾಗಧರಿಪು ಮತಸಾಗರ ಮೀನ ಮ ಮಾಘ ವಿನಾಶಕ ನಮೋ ನಮೋ ಅ.ಪ. ಶ್ಲಾಘಿತ ಗುಣಗಣ ಸೂರಿಪ್ರಸಂಗ ಸ ದಾಗಮಜ್ಞ ತೇ ನಮೋ ನಮೋ ಮೇಘ ಶ್ಯಾಮಲ ರಾಮಾರಾಧಕ ಮೋಘ ಬೋಧತೇ ನಮೋ ನಮೋ 1 ತುಂಗಭದ್ರ ಸುತರಂಗಿಣಿ ತೀರಗ ಮಂಗಳಚರಿತ ಶುಭಾಂಗ ನಮೋ ಇಂಗಿತಜ್ಞ ಕಾಳಿಂಗ ಮರ್ದ ಯದು ಪುಂಗವ ಹೃದಯ ಸುಸಂಗ ನಮೋ ಸಂಗಿರ ಚಿಹ್ನಿತ ಶೃಂಗಾರಾನನ ತಿಂಗಳ ಕರುಣಾಪಾಂಗ ನಮೋ ಗಾಂಗೇಯ ಸಮಾಭಾಂಗ ಕುಮತ ಮಾ ತಂಗ ಸಿಂಗ ಶಿತ ಪಿಂಗ ನಮೋ 2 ಶ್ರೀ ಸುಧೀಂದ್ರ ಕರಜಾತ ನಮೋ ನಮೋ ಭೂಸುರ ನುತ ವಿಖ್ಯಾತ ನಮೋ ದೇಶಿಕ ವರ ಸಂಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ ಕ್ಲೇಶಿತಜನ ಪರಿಪಾಲ ನಮೋ ನಮೋ ಭಾಸಿತ ಕರುಣಾಶೀಲ ನಮೋ ವ್ಯಾಸ ರಾಮ ಪದ ಭಕ್ತ ನಮೋ ನಮೋ ಶಾಶ್ವತ ಕರುಣಾಸಕ್ತ ನಮೋ 3 ಮಣಿ ಸಂ ಭಾವಿತ ಮಹಿಮ ಪಾಲಯ ಮಾಂ ಸೇವಾಪರ ಸರ್ವಾರ್ಥಪ್ರದ ವೃಂ ದಾವನ ಮಂದಿರ ಪಾಲಯ ಮಾಂ ಮಾರ್ಗಣ ಭುಜಗ ವಿನಾಯಕ ಭಾವಜ್ಞ ಪ್ರಿಯ ಪಾಲಯ ಮಾಂ ಕೇವಲ ನತಜನ ಪಾವನರೂಪ ಸ ದಾ ವಿನೋದಿ ಹೇ ಪಾಲಯ ಮಾಂ 4 ಸನ್ನುತ ಮಹಿಮ ಜಗನ್ನಾಥ ವಿಠಲ ಸನ್ಹಿತ ಮಾನಸ ಜಯ ಜಯ ಭೋ ಚಿಹ್ನಿತ ದಂಡಕಮಂಡಲ ಪುಂಡ್ರ ಪ್ರ ಪನ್ನೆ ಭಯಾಪಹ ಜಯ ಜಯ ಭೋ ಮಾನ್ಯ ಮಹಾತ್ಮ ಪ್ರಸನ್ನ ವದನ ಕಾ ರುಣ್ಯ ಪ್ರಯೋದಧೆ ಜಯ ಜಯ ಭೋ ಧನ್ಯ ಕ್ಷಮಾಸಂಪನ್ನ ಬುಧಜನ ಶ ರಣ್ಯ ಸದಾರ್ಚಿತ ಜಯ ಜಯ ಭೋ 5
--------------
ಜಗನ್ನಾಥದಾಸರು
ರಾಯರ ನೋಡಿರೈ ಶ್ರೀ ಗುರು |ರಾಯರ ಪಾಡಿರೈ |ಶ್ರೀ ಯರಸನ ಪ್ರಿಯಕಂಜಾಪ್ತಾಭಸು |ಕಾಯ ಕವಿಜನಗೇಯಾ ಪ ಶ್ರೀ ಸುಧೀಂದ್ರ ಕರಕಮಲದಲಿ ಸಂಭೂತಾ |ಬಹು ವಿಖ್ಯಾತಾ |ಶ್ರೀಶನ ಗುಣಗಳ ತುತಿಸುವ ಯತಿ ಶಿರೋಮಣಿಯೊ | ಚಿಂತಾಮಣಿಯೊ |ಈ ಸುಜನರ ಮನಸಿಗೆ ತೋರುವದಹಲ್ಲಾದಾ |ಶಿರಿ ಪ್ರಲ್ಹಾದಾ 1 ದಂಡಕಮಂಡಲ ಕಾಷಾಯವು ಸೂವಸನಾ |ವೇದ ವ್ಯಸನಾ |ಪುಂಡರೀಕ ಪದಭೃಂಗಾ ಮುನಿಕುಲೋತ್ತುಂಗಾ |ಕರುಣಾಪಾಂಗಾ |ಮಂಡಲದೊಳು ಬಹುತೋಂಡರ ಪರಿಪಾಲಕಾ |ವರ ಬಾಹ್ಲೀಕಾ 2 ತುಂಗಾ ತೀರದಿ ಮಂತ್ರಾಲಯದೊಳಗಿರುವೊ |ಕಲ್ಪ ತರುವೊ |ಗಂಗಾಜನಕ ವಿಹಂಗವಾಹನ ಇಲ್ಲಿಹನು |ನತ ಸುರದೇನು |ಮಂಗಳ ಮಹಿಮರ ದರುಶನ ಮಾತ್ರಾ ಫನಾಶಾ |ಶ್ರೀ ಗುರುವ್ಯಾಸಾ 3 ಪರಿಮಳ ವಿರಚಿಸಿ ಬುಧರಿಗೆ ಬೀರಿದದೀಶಾ |ಗುಣಗಂಭೀರಾ |ಪರಿಪರಿ ಚರಿತೆಯ ತೋರ್ದಭೂದೇವರ ದೇವಾ |ದೇವ ಸ್ವಭಾವಾ |ನರ ಇವರನು ಕ್ಷಣಬಿಡದಲೆ ಭಜಿಸಲು ಸುಖವೊ |ಅಹಿಕಾಮುಕವೊ (ಅಘ ಪರಿಹರವೊ) 4 ದುಷ್ಟ ಮತವ ಖಂಡಿಸಿ ಹರಿಪರನೆಂದೊರೆದಾ |ಭೀಷ್ಟಿಯಗರದಾ |ಸೃಷ್ಠಿಯೊಳಗೆ ಶ್ರೀಶ ಪ್ರಾಣೇಶ ವಿಠ್ಠಲನದಾಸಾಮುನಿಕುಲೋತ್ತಂಸಾ |ಎಷ್ಟು ಪೊಗಳಲಾಶಕ್ಯವು ಸದ್ಗುಣ ಸಾಂದ್ರಾ |ಶ್ರೀ ರಾಘವೇಂದ್ರಾ 5
--------------
ಶ್ರೀಶಪ್ರಾಣೇಶವಿಠಲರು
ಭಾಪುಬಲ್ಲಿದಹನುಮ ಭೂಪ ಹನುಮಶ್ರೀಪದ್ಮನಾಭನ ದಾಸ ಭಕ್ತರ ವಿಲಾಸ ಪ.ಹಾಟಕಯಜೊÕೀಪವೀತಕಚ್ಚುಟಕರ್ಣಕುಂಡಲ ಮುಖ್ಯಕೋಟಿಕಟಕ ಸಮಗಾತ್ರ ದಿಟ್ಟವಟು ಪಿಂಗಳನೇತ್ರದುಷ್ಟದಶಶಿರನಗರುವಮುಷ್ಟಿಯಿಂದಲ್ಹೊಡೆದೆ ಉರಕೆಕೋಟಿ ಪ್ಲವಗರ ಪೊರೆದಭಯ ಕೊಟ್ಟು ಪಾಲಿಸೆನ್ನಜೀಯ1ದುರುಳಕುನೃಪನಟ್ಟಿಘನಗರಳನುಂಗಿ ಪುರೋಚನನಉರುಹಿ ಧರ್ಮಾದ್ಯರನು ಪೊರೆದೆ ಕಿರ್ಮೀರಕರರಿದೆಕ್ರೂರ ಕೌರವನಪಾವಕಹರಿಶರಣ ಜನಪಾಲಕಮರೆಹೊಕ್ಕೆ ಬಿಡದಿರು ಕೈಯ ಧೀರ ಶ್ರೀ ಭೀಮಸೇನರಾಯ 2ಎಸೆವ ದಂಡಕಮಂಡಲವ ಧರಿಸಿ ಮಾರಶರವ ಜಯಿಸಿಬಿಸಜಾಕ್ಷನ ಪೊಳಲ ತೋರಿದೆ ಕಶ್ಮಲಮತವಳಿದೆವಸುಧೆಗೆ ವೈಷ್ಣವರೊಡೆಯ ನೋಯಿಸದೆಪೊರೆನಿನ್ನ ಪಡೆಯಶ್ರೀಶ ಪ್ರಸನ್ನವೆಂಕಟೇಶಾಂಘ್ರಿ ಸರೋಜರಜಭೃಂಗ 3
--------------
ಪ್ರಸನ್ನವೆಂಕಟದಾಸರು