ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಂಪ್ರದಾಯ ಶೃಂಗಾರದಂಥ ಶುಭಾಂಗಿ ನೀ ಏಳು ಕಂಗಳ ನೋಟದ ಕಡು ಚೆಲ್ವೆ ನಿನ್ನ ಪಾ- ದಂಗಳಿಗೆರಗುವೆ ಎನುತ ಮಾಲಕ್ಷುಮಿ(ಯ?) ಅಂಗನೆಯರ್ಹಸೆಗೆ ಕರೆದರು 1 ಅಜನಜನಕನರಗಿಳಿಯೆ ನೀ ಏಳು ಪದಮನಾಭನ ಪಟ್ಟದರಸಿ ನೀ ಏಳು ತ್ರಿಜಗಭೂಷಿತನೆದೆ ಮ್ಯಾಲೆ ಹೊಂದಿರುವಂಥ ಮದಗಜಗಮನೆ ಮಾಲಕ್ಷ್ಮಿ ಬಾರೆನುತಲಿ ಮುದದಿಂದಲಿ ಹಸೆಗೆ ಕರೆದರು 2 ಸೋಮವದನೆ ಸುಗುಣೆ ಜಾಣೆ ನೀ ಏಳು ಕೋಮಲ ಕೋಕಿಲವಾಣಿ ನೀ ಏಳು ಹೇಮಮಾಣಿಕ್ಯ ನಾಗವೇಣಿಯೆ ನಮ್ಮ ಭೀಮೇಶಕೃಷ್ಣನ ನಿಜರಾಣಿ ಮಾಲಕ್ಷುಮಿ ಪಟ್ಟದರಾಣಿ ಬಾ ಹಸೆಗೆ ಕರೆದರು 3
--------------
ಹರಪನಹಳ್ಳಿಭೀಮವ್ವ