ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೋಗಣೆಯ ಮಾಡು ಶ್ರೀವೆಂಕಟೇಶ ಸಾಗರಶಯನನೆ ಸರ್ವವ್ಯಾಪಕ ಕೃಷ್ಣ ಪ ಗಂಗೆಯ ಜನಕಗೆ ಮಂಗಳ ಅಭಿಷೇಕ ಸಂಭ್ರಮದಲಿ ಮಾಡಿ ತವಕದಲಿ ಶಂಭುವಂದಿತಗೆ ಪೀತಾಂಬರನುಡಿಸಿ ಪಾ- ದಂಗಳನೆ ಪೂಜಿಸುತ ಸ್ತುತಿಪರು ಇಂದಿರಾಪತಿ ಶೀಘ್ರದಿಂದಲಿ 1 ಅಪ್ರಮೇಯನೆ ನಿನಗೆ ಅಪ್ಪಾಲು ಅತಿರಸ ವಪ್ಪಾದ ವಡೆದೋಸೆ ಚಿತ್ರಾನ್ನವೂ ಸತ್ಯಮೂರುತಿ ನಿನಗೆ ಮುತ್ತಿನಂಥಲಾಡುಓಗರ ಮತ್ತೆ ಪಾಯಸ ಮೊಸರು ಬುತ್ತಿ ವಿ- ಚಿತ್ರದಲಿ ತಂದರ್ಪಿಸಿಹರು2 ಕನಕ ಮಂಟಪದೊಳು ಕರ್ಪೂರದಾರತಿ ವಿನಯದಿ ಮಾಡುತ್ತ ನಮಿಸುವರು ಮನಕೆ ಬೇಸರ ಬೇಡ ಕಮಲನಾಭ ವಿಠ್ಠಲ ಘಮ ಘಮಿಪ ತಾಂಬೂಲ ವೀಳ್ಯವ ತವಕದಲಿ ಸ್ವೀಕರಿಸು ಶ್ರೀಶಾ 3
--------------
ನಿಡಗುರುಕಿ ಜೀವೂಬಾಯಿ
ನಾದನಾದ ಸುನಾದವ ತಿಳಿದವ ನಾದ ಮೂರುತಿ ನಿಜನಾದ ಪ ಆರು ಅರಿಗಳು ಅವರನು ಗೆಲುವೊಡೆ ಆಶ್ರಯ ತಾನಿದೆ ನಾದಧೀರತನದಲಿಹ ನಾಲ್ವರ ಸಾಧಿಸೆ ದಿಟವು ತಾನಿದೆ ನಾದ 1 ಅಷ್ಟಮದಂಗಳನೆಲ್ಲವ ತಿಳಿವೊಡೆ ಆದಿಯಹುದು ಈ ನಾದದುಷ್ಟರು ಐವರ ದೃಢವನು ಕೆಡಿಸಲು ದೃಷ್ಟಿಗೆ ತಾನಿದೆ ನಾದ 2 ಮೂರು ಮೂರು ಮೂರೆನಿಸುವ ತ್ರಿಪುಟಿಯ ಮೂಲನಾಶವಿದೆ ನಾದಚೋರರು ಸಪ್ತಾ ಸಪ್ತರು ಎಂಬರ ಭೇದಿಸೆ ತಾನಿದೆ ನಾದ3 ಎರಡರ ಭೇದವನೆಲ್ಲವನಳಿವೊಡೆ ಎಡೆದೆರಪಿಲ್ಲದ ನಾದಭರಿತವನಂದಾನಂದವ ತುಳುಕುವ ಭಾಗ್ಯವು ತಾನಿದೆ ನಾದ 4 ನಾದದಿ ನಿತ್ಯವು ಬೆರೆತಿಹ ಪುರುಷನೆ ನಾದ ಚತುರ್ಮಖನಾದವಾದರಹಿತ ಚಿದಾನಂದ ಗುರುವಿನ ಪಾದದೊಳಗೆ ಅವನಾದ 5
--------------
ಚಿದಾನಂದ ಅವಧೂತರು
ಮಂಗಳಂ ಮಹಿಜಾತಗೆ ಇಂಗಡಲ ಮಂದಿರಗೆ ಪ ಬಂಗಾರದೊಡಲ ಮುಖ್ಯ ಪದಂಗಳನೆಲ್ಲ ಕಂಗಳ ಭ್ರೂಭಂಗಾದಿ ಕರುಣಿಪ ದೇವಿಗೆ 1 ರಂಗು ಮಾಣಿಕದಾಭರಣಂಗಳನಿಟ್ಟು ಡಿಂಗರೀಕರಂತರಂಗದಿ ನಲಿಯುವ ದೇವಿಗೆ 2 ರಂಗೇಶವಿಠಲನರ್ಧಾಂಗಿಯೆನಿಸಿಕೊಂಡು ಹಿಂಗದೆ ಭಜಿಪರ್ಗೆ ಶುಭಗಳ ನೀಡುವ ದೇವಿಗೆ 3
--------------
ರಂಗೇಶವಿಠಲದಾಸರು