ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಲ್ಲ ಬಾ ನಿಲ್ಲ ಬಾ ಮೆಲ್ಲಮೆಲ್ಲನೆ ಹೆಜ್ಜೆನಿಟ್ಟುನಿಲ್ಲ ಬಾರೋ ಕೃಷ್ಣಾ ನಿಲ್ಲ ಬಾರೋ ಪ ದುಷ್ಟ ಪೂತನಿಯ ದೊಡ್ಡ ಹೊಟ್ಟೆಯೊಳಾಡಿದಿ ಮಂದಿದೃಷ್ಟಿ ತಾಕಿಹುದೊ ರಕ್ಷೆನಿಟ್ಟು ಮುದ್ದಿಸುವೆ 1 ಆಲಯದಂಗಳದೊಳು ಲೀಲೆ ಮಾಡುವಿಯೊ ಕೆಟ್ಟಬಾಲೆಯರ ಗಾಳಿ ಸೋಕಿಹುದೋ ಹಣ್ಣು ನಿವಾಳಿಸಿಒಗೆವೆ ಕೃಷ್ಣ 2 ಇಂದಿರೇಶ ನಿನ್ನ ಬಹುಮಂದಿ ನೋಡುವರೋ ದೃಷ್ಟಿಇಂದು ಆಗಿಹುದೊ ಮಾಳ್ಪೆ ಕದಲಾರತಿಯ ಕೂಸೆ 3
--------------
ಇಂದಿರೇಶರು
ಪಾದ ಪರಮಭಕ್ತಿಲಿ ಎನ್ನ ಶಿರದ ಮೇಲ್ಪೊತ್ತು ಬಿಡದಿರುವೆನನವರತ ಪ ತಾಳಿ ವಿಮಲಭಕ್ತಿ ತಾಳದಂಡಿಗೆ ಸ ಮ್ಮೇಳದೊಡನೆ ತ್ರಿಕಾಲವು ಬಿಡದೆ ನೀಲವರ್ಣನ ಭಜನೆ ಮೇಲಾಗಿ ಮಾಡುವ ರಾಲಯದಿ ನಲಿದಾಲಿಸಾನದಿಂದಪ 1 ನಿಲಯದಂಗಳದೊಳು ತುಲಸಿವನವ ರಚಿಸ ನಿತ್ಯ ಜಲಜನಾಭಂಗೆ ಮಲತ್ರಯಂಗಳ ನೀಗಿ ಮಲಿನಗುಣವ ಕಳೆದು ಸಲಿಸಿ ಶ್ರೀಪಾದಮಂ ಒಲಿಸಿ ಸುಖಿಸುತಿರ್ಪ 2 ತಿಳಕೊಂಡು ಸಂಸಾರ ಕಳವಿನಿಂದುಳಕೊಂಡು ಹೊಳೆವ ಜ್ಞಾನಜ್ಯೋತಿ ಬೆಳಗಿನೋಳ್ನಲಿಯುತ ನಿಲಿಸಿ ಹರಿಪಾದದಿ ಚಲಿಸದೆ ಮನ ಹಂ ಬಲಿಸಿ ತಪವ ಶೇಷಾಚಲಯಾತ್ರೆ ಮಾಳ್ಪಂಥ 3 ಮರೆವು ಮಾಯವ ನೀಗಿ ಅರಿವಿನಾಲಯದೊಳು ಸಿರಿಯರರಸನ ನಿಜ ಚರಿತಂಗಳರಸುತ ಪರಮಸಾಲಿಗ್ರಾಮದ್ವರಮಹಿಮೆಯನರಿತು ನಿರುತದಿಂ ಪೂಜಿಸಿ ಪರಮಪಾವನರೆನಿಪ 4 ಕಾಮಿತಂಗಳ ನೀಗಿ ಕೋಮಲ್ಹøದಯರಾಗಿ ಪ್ರೇಮಪಿಡಿದು ಸರ್ವಭೂಮಿ ಜೀವಂಗಳೊಳ್ ನೇಮನಿತ್ಯದಿ ನಿಸ್ಸೀಮರಾಗಿ ಸತತ ಸ್ವಾಮಿ ಶ್ರೀರಾಮನಾಮಾಮೃತ ಸುರಿಯುವ 5
--------------
ರಾಮದಾಸರು
ರಂಗನೆ ಬಾ ಮನಮಂದಿರಕೆ ಶೃಂಗಾರದ ಶ್ರೀ ಹರಿ ಶೌರೇ ಪ ನಗುತ ನಗುತ ಬಾ ಖಗವಾಹನ ಹರಿ ಬಗೆ ಬಗೆ ಕ್ರೀಡೆಗಳ ತೋರುತಲಿ ಝಗ ಝಗಿಸುವ ಪೀತಾಂಬರಧಾರಿಯೆ ಅಗಣಿತ ಗುಣನಿಧಿ ಬಾ ಹರಿಯೆ 1 ಪಕ್ಷಿವಾಹನ ಪುರುಷೋತ್ತಮ ಶ್ರೀಹರಿ ರಕ್ಷಿಸಿ ಕಾಪಾಡುವ ಜಗವ ಕುಕ್ಷಿಯೊಳಡಗಿಸಿ ಸಲಹುವ ಸುಜನರ ರಕ್ಷಿಸಿ ಪೊರೆಯಲು ಬಾ ಹರಿಯೆ 2 ಪೊಂಗೊಳಲೂದುತ ಮಂಗಳ ಚರಿತ ಹೃ- ದಂಗಳದೊಳು ನಲಿದಾಡುತಲಿ ಅಂಗಜಜನಕ ಗೋಪಾಂಗನೆ ಲೋಲ ಶ್ರೀ- ಮಂಗಳ ಮೂರುತಿ ಬಾ ಹರಿಯೆ 3 ಗಂಗಾಜನಕಗೆ ಭೃಂಗಕುಂತಳೆಯರು ರಂಗು ಮಾಣಿಕದಾರತಿ ಬೆಳಗೆ ಪೈಂಗಳನಾಮ ಸಂವತ್ಸರದಲಿ ಭವ ಭಂಗವ ಮಾಡಲು ಬಾ ಹರಿಯೆ 4 ಭ್ರಮರ ಕುಂತಳೆಯರು ಘಮಘಮಿಸುವ ಸುಮಮಾಲೆಗಳ ಕಮಲನಾಭ ವಿಠ್ಠಲಗರ್ಪಿಸುವರು ಶ್ರಮ ಪರಿಹರಿಸಲು ಬಾ ಹರಿಯೆ 5
--------------
ನಿಡಗುರುಕಿ ಜೀವೂಬಾಯಿ