ಪಂಕಜಾಸನ ವಂದ್ಯ | ವೆಂಕಟಾದ್ರಿ ವಿಠಲ ತವಕಿಂಕತನ ವಿತ್ತವಗೆ | ಸಂಕಟವ ಕಳೆಯೊ ಪ
ಮಂಕುಹರಿಸುಜ್ಞಾನ | ದಂಕುರಕೆ ಮನಮಾಡಿಬಿಂಕದಿಂ ಪೊರೆಇವನ | ಅಕಳಂಕ ಮಹಿಮಾ ಅ.ಪ.
ಸತ್ಯಶೌಚಾಚಾರ | ಕೃತ್ಯದಲಿ ಮನವಿರಿಸುನಿತ್ಯತವ ಮಹಿಮಗಳ | ಸುತ್ತಿಇರಲಿ ಇವಗೇನಿತ್ಯನೂತನ ಮಹಿಮ | ತತ್ವಗಳ ತಿಳಿಸುತ್ತಭೃತ್ಯವತ್ಸಲ ಕಾಯೋ | ಮೃತ್ಯುಹರದೇವಾ 1
ತತ್ವಾರ್ಥ ತಿರುಳುಗಳೆ | ಚಿತ್ರಿಸುವ ಕಲೆವೃದ್ಧಿವಿಸ್ತರೀಸಿವನಲ್ಲಿ | ನಿಸ್ತುಲಾತ್ಮಕನೇ |ಅರ್ಥಕಾಮಸುರೂಪ | ಪೊತ್ತುಪೊರೆಯುವ ದೇವಾಪ್ರತ್ಯೇಕ ಪ್ರಾರ್ಥನೆಯ | ಕೃತ್ಯವೇಕಿನ್ನು 2
ನಾನು ನನ್ನದು ಎಂಬ | ಹೀನಮತಿಕಳೆದಿನ್ನುನೀನು ನೀನೇ ಎಂಬ | ಜ್ಞಾನಮಹಬರಲೀ |ಪ್ರಾಣ ಪ್ರಾಣನೆ ಜಗ | ತ್ರಾಣನಹುದೆಂಬ ಸುಜ್ಞಾನ ಪಾಲಿಸಿ ಪೊರೆಯೋ | ಮನಿಮಧ್ವ ವರದಾ 3
ಮೀನಾಂಕ ಜನಕಾಮಾನಮೇಯಾನುಭವ | ಸಾನು ಕೂಲಿಸುವಕೋನೇರಿವಾಸ ಕಾರುಣ್ಯ | ತೋರಿವಗೇ4
ಗೋವತ್ಸದನಿ ಕೇಳಿ | ಆವುಧಾನಿಸುವಂತೆನೀವೊಲಿದು ಕಾಪಾಡು | ಬಾವುಕರ ಪಾಲಾ |ಪೂವಿಲ್ಲನಯ್ಯಗುರು | ಗೋವಿಂದ ವಿಠಲತವಪಾವನವ ಪದ ತೋರೆ | ಓವಿ ಪ್ರಾರ್ಥಿಸುವೆ 5