ಪ್ರಳಯಜಲದಲಿ ನೀನಾಲದೆಲೆಯ ಮ್ಯಾಲೆ
ಹಲವು ಜೀವರು ನಿನ್ನ ಹೃದಯದೊಳಿರಲು
ಕೆಲವುದಿನದಿ ಯೋಗನಿದ್ರೆಯೊಳಿರೆ
ಒಲವಿಂದ ಸೃಜಿಸುವೆನೆಂದು ನೇಮಿಸುವೆ1
ಪ್ರಕೃತಿಯ ಮೂಲಕಾರಣವನು ಮಾಡಿ
ಸಕಲತತ್ವಗಳ ಸಮ್ಮೋಹದಿ ಕೂಡಿ
ವಿಕಳಿಸದಂತೆ ತನ್ಮಾತ್ರೆಯ ಕೂಡಿ
ಅಖಿಳೇಶ ಮಹತತ್ವಗಳ ನಿರ್ಮಿಸಿದೆ 2
ಮಹತತ್ವದಿಂದಹಂಕಾರವ ಪುಟ್ಟಿಸಿ
ಅಹಂಕಾರದಿಂದ ವೈಕಾರಿಕ ಮೊದಲಾದ
ತ್ರಿವಿಧತತ್ವಗಳ ನಿರ್ಮಾಣವÀ ಮಾಡ್ದೆ
ಮಹಮಹಿಮೆಯ ಮೆರೆದೆ ಜಗವರಿಯೆ 3
ಇಪ್ಪತ್ತುನಾಲ್ಕು ಅಯಿದಾರುತತ್ವಗಳಿಂದ
ತÀಪ್ಪದೆ ಬೊಮ್ಮಾಂಡವ ನಿರ್ಮಿಸಿದೆ
ಸರ್ಪಶಯನನಾಗಿ ನಾಭಿಕಮಲದಿಂದ
ಅಪ್ಪಬ್ರಹ್ಮನ ಪ್ರಸವಿಸಿದೆ ನೀನೆಂದು 4
ಒಂದು ಮೂರುತಿಯಿಂದ ಸೃಷ್ಟಿಯ ಮಾಡಿ
ಮತ್ತೊಂದು ಮೂರುತಿಯಿಂದ ಪಾಲನೆ ಮಾಡಿ
ಒಂದು ಮೂರುತಿಯಿಂದ ಸಂಹರನೆ ಮಾಡಿ
ಒಂದೊಂದು ಮಹಿಮೆಯು ಅನಂತಾದ್ಭುತವು 5
ಒಂದು ರೋಮಕೂಪದಲಿ ಬ್ರಹ್ಮಾಂಡ
ಇಂದಿರೆ ಅನಂತಕೋಟಿ ನಾಮಗಳಲ್ಲಿ
ಬಂದು ಗೋಕುಲದಲ್ಲಿ ಶಿಶುವಾಗಿ ತೋರಿದೆ ಆ-
ಸುರರು 6
ಜನನಮರಣ ಭಯದಿಂದ ದೇವತೆಗಳು
ಅನುದಿನ ನಿನ್ನ ಪೂಜೆಯ [ಮಾಡೇವೆನಲು]
ಪುನರಾವೃತ್ತಿ ರಹಿತವಾದ ಫಲವೆತ್ತಿ
ಮನುಜನಂತೆ ತೋರುವುದೇನುಚಿತವೊ 7
ಒಮ್ಮೆಕಾಣಲು ಸಿರಿರಮ್ಮೆ ಚೆಲುವನ
ಒಮ್ಮನದಿಂದ ನೋಡೇನೆಂಬ ಭಯದಿಂದ
ರಮ್ಮೆ ಮೊಗವ ತಗ್ಗಿಸಿ ನಾಚಿಸಿದಳೆ 8
ದÀಶದಿಕ್ಕು ನೋಡುತ್ತ ಭಯದಿಂದ ಕಮಲಜ
ಶಶಿನಾಳದೊಳಗಿದ್ದ ದಾರಿಯ ಕಾಣದೆ
ದಶಶತವರುಷ ನಿಮ್ಮನು ಧ್ಯಾನಿಸುತಿರೆ
ವಸುಧೀಶ ನಿಮ್ಮ ನಿಜವ ತೋರಿದಿರಿ 9
ಆಲೋಚನೆಯಿಂದ ಸರ್ವ ವಿಷಯದಿಂದ
ಲೀಲೆಯಿಂದ ಪಾಡಿ ಕಮಲಸಂಭವನ
ವೋಳು ಮಾಡದಂತೆ ಒಳಿತಾಗಿ ತಲೆವಾಗೆ
ಮೂಲ್ಲೋಕವ ಕೃಪೆಯಿಂದ ಪಾಲಿಸಿದೆ 10
ನಂದ ಯಶೋದೆ ವಸುದೇವ ದೇವಕಿಯರು
ಸುಕೃತ ಫಲವಾಯಿತೆಂದು
ಬಂದ ಬ್ರಾಹ್ಮಣರ ದ್ರವ್ಯದಿ ದಣಿಸಿದರು 11
ಜಾತಕರ್ಮವ ಮಾಡಿ ಮಧುವ ಬಾಯೊಳಗಿಟ್ಟು
ಒತ್ತುಮೊರನ ಗೊಟ್ಟಿನಲಿ ಮಲಗಿದ್ದು ಸಾ-
ಕ್ಷಾತ್ ಶ್ರೀ ನಾರಾಯಣನ ಅವತಾರವೆಂದು
ಮಾತೆಯ ಮೊಲೆವಾಲನುಂಡ ಬೇಗದಲಿ 12
ವಾರುಣಿ ಶ-
ಚಿ ರತಿ ಮೊದಲಾದ ಸತಿಯರು
ನಾರಾಯಣ ಪರದೇವತೆಯೆಂದು
ನಾರಿಯರೆಲ್ಲ ಪಾಡಿದರತಿ ಹರುಷದಲಿ 13
ನಾಮಕರಣ ದಿವಸ ಬ್ರಹ್ಮಾದಿ ಸುರರು
ಈ ಮಹಾಶಿಶುವ ನೋಡೇವೆಂಬ ಭರದಿಂದ
ಆ ಮಹಾಸ್ತೋಮವೆಲ್ಲ ಕೂಡಿಬರ-
ಲೀ ಮಹಾಶಿಶುವ ನೋಡಿದರೆ ಅರ್ಥಿಯಲಿ 14
ವ್ಯಾಸ ಧೌಮ್ಯಾಚಾರ್ಯರೊಲಿದು ಮಂತ್ರಗಳಿಂದ
ಸಾಸಿರಕೋಟ್ಯನಂತ ನಾಮಗಳುಳ್ಳ
ವಾಸುದೇವ ಕೃಷ್ಣನೆಂಬ ನಾಮಗಳಿಟ್ಟು
ಸೂಸಿದರಕ್ಷತೆ ಸುಮೂಹೂರ್ತದಲಿ 15
ಕ್ಷೀರಾಂಬುಧಿಯನ್ನೆ ತೊಟ್ಟಿಲು ಮಾಡಿ
ಓರಂತೆ ನಾಲ್ಕುವೇದಗಳ ನೇಣನೆ ಮಾಡಿ
ಧೀರಶೇಷನು ಬಂದು ಹಾಸಿಕೆ ಹಾಕಲು
ನಾರಿಯರೊಡನೆ ಮಲಗಿದೆಯೊ ಹಯವದನ 16