ಹನುಮಾನ್ ಕೀ ಜೈ ಹನುಮಾನ್ ಕೀ ಜೈ
ಹನುಮಾನ್ ಕೀ ಜೈ ಜೈ ಹನುಮಾನ್ ಪ
ಥೈ ಥೈ ಥೈ ಥೈ ಥೈಥಕ ಥೈಥಕ
ತಕಿಟ ತಕಿಟ ತಕ ಜೈ ಹನುಮಾನ್ ಅ.ಪ.
ಹರಿ ಸರ್ವೋತ್ತಮನೆಂಬುವ ತತ್ವಕೆ ಜಯ
ಭೇರಿಯ ಹೊಡೆದೆಯೊ ಹನುಮಾನ್
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ 1
ವೈಷ್ಣವ ತತ್ವಗಳನು ಬೋಧಿಸಿ ಜಯ
ಭೇರಿಯ ಹೊಡೆದೆಯೊ ಬಲಭೀಮ
ಢಣ ಢಣ ಢಣ ಢಣ ಢಣ
ಢಣ ಜಯ ಭೇರಿಯ ನಾದವು ಕೇಳುತಿದೆ 2
ಮೋಕ್ಷಕ್ಕೆ ಒಳ್ಳೆಯ ಮಾರ್ಗವ ತೋರುತ
ಜಯ ಭೇರಿಯ ಹೊಡೆದೆಯೊ ಮಧ್ವ
ಢಣ ಢಣ ಢಣ ಢಣ ಢಣ ಢಣ
ಢಣ ಜಯಭೇರಿಯ ನಾದವು ಕೇಳುತಿದೆ 3
ಇಂದು ನುಡಿಯುತಿದೆ
ಮಂದಿಗಳೆಲ್ಲರು ಕೇಳುವರು
ತಂದೆ ಪ್ರಸನ್ನನ ಮಂದಿರಲಿ ಇದು
ಎಂದೆಂದಿಗೂ ಶಾಶ್ವತವಿರಲಿ 4