ಬಾಬಾ ಭಾಮಿನಿ ಬಾಬಾ ಭಾಮಾಮಣಿ ಪೀಠಕೆ ಪ.
ರತ್ನ ಮಂಟಪದೊಳು ಮುತ್ತಿನಮಣೆನ್ಹಾಕಿ
ಮಿತ್ರೆಯರ್ ಕರೆವರು ಈಗ
ಎತ್ತ ನೋಡಿದರೂ ಸುತ್ತ ಜ್ಯೋತಿಗಳು
ಶಿಸ್ತಿಲಿ ಬೆಳಗುತಿಹುದು 1
ವÀರ ಜರತಾರಿ ಪೀತಾಂಬರನುಟ್ಟು
ಸರಗಳು ಹೊಳೆಯುತಲೀಗ
ಬೆರಳಿನುಂಗುರ ಥಳಥಳಿಸುತಲಿ
ಬೆಡಗನು ತೋರುತಲಿ 2
ಕಡಗ ಕಿಂಕಿಣಿ ಕರದಲಿ ಪೊಳೆಯೆ
ಅಡಿ ಇಡುತಲಿ ನೀ ಬೇಗ
ಮುಡಿದ ಮಲ್ಲಿಗೆ ಎಡಬಲಕುದುರುತ
ಒಡೆಯ ಶ್ರೀ ಶ್ರೀನಿವಾಸನ ಮಡದಿ 3