ಆಭರಣಗಳರ್ಪಿಸುವೆನು ಶೋಭನ ಚರಿತಾ ಪ
ಮಹಾಭಾಗ್ಯಪ್ರದೆ ನಿನ್ನರಸಿ ಯುಗುಣಭರಿತಾ ಅ.ಪ
ಪದನೂಪುರಗಳು ಘಂಟೆ ನಿನದದುಡಿದಾರಾ
ಪರಿಯಂತ ವಿಧವಿಧಕರ ಕಂಕಣ ಹತ್ತು ಬೆರಳಿಗುಂಗೂರಾ
ಕೌಸ್ತುಭ ಶ್ರೀ ವತ್ಸದ ಶೃಂಗಾರಾ 1
ಕುಂಡಲ ಕರ್ಣದಲ್ಲಿ
ತುಳಸಿಯ ವನಮಾಲೆ ಶೋಭಿಪುದು ಕಂಠದಲೀ
ಥಳಥಳಿಪುದು ರವಿಯಂತೆ ಕಿರೀಟಶಿರದಲ್ಲಿ
ಬೆಳಗುವ ತೇಜೋಮಯ ಗಾನಾವದು ಕೊಡಲಿ 2
ಸ್ಮರ ಶತ ಸುಂದರ ವಿಗ್ರಹ ಕರುಣಾಕರನೇ
ಸರಸಿಜಭವ ಜನಕ ಪರಾತ್ಪರ ಮಾಧವನೆ
ಶರದಿಂದುನಿಭಾನನ ಸರ್ವತ್ಪ್ರಕಾಶನೇ
ಗುರುರಾಮ ವಿಠಲ ಹರಿ ಸರ್ವೋತ್ತಮನೇ 3