ಕಂಡು ಕೌತುಕ ಕಾಯದೊಳಗಿನಾಶ್ರಯ ಸಾಧನ
ಕೊಂಡಾಡಲೆಷ್ಟೆಂದು ನಾ ಧ್ರುವ
ಏಳು ಮೂರೆರಡು ನಾದಗಳು ಪರಿಪರಿಗಳುಕೇಳಬರುತಲ್ಯದ
ತಾಳಮೃದಂಗ ಭೇರಿಗಳು ಸುಫೋಷಗಳು ಕೇಳಗುಡುತಲ್ಯದ 1
ಒಳಗೆ ಕಂಡೆ ನಾ ರಾಶಿ ಬೆಳಗಿನ ಮಳೆ ಮಿಂಚಿನ
ತಳದ್ಹಿಡಿದು ತುಂಬೇದ
ಕಳೆಕಾಂತಿ ರವಿಕೋಟಿ ಕಿರಣ ತೇಜ:ಸ್ಪುರಣ ಥಳಥಳಗುಡುತ್ಯದ 2
ಮಂಗಳಕರದಾನಂದೋದಯ ಮಹದಾಶ್ರಯ
ರಂಗಮಯದೋರುತ್ಯದ
ಸಂಗಸುಖ ಬೀರುತ್ಯದ 3