(ಮುಳಬಾಗಿಲು ಪರಶುರಾಮ ದೇವರು)
ತುಂಗಾ ತಟದಲ್ಲಿ ಥಳಥÀಳಿಸುವ ಭೃಗುಪುಂಗವ ಭೂಪತಿಯೆ
ಭಂಗಿಸು ಶ್ರೀಪತಿಯೆ ಪ.
ಸೂರ್ಯ ದಿನದಿ ನಿನ್ನಡಿಯಲಿ ಬೇಡಿದ ಕಾರ್ಯಗಳೆಲ್ಲವನು
ಸ್ಥೈರ್ಯ ಧೈರ್ಯ ಶೌರ್ಯಗಳ ನೀಡುವಾಚಾರ್ಯ ಸಮರ್ಜಿತನೆ
ಆರ್ಯ ಗ್ರಹಸ್ಥಿತ ಧಾರ್ಯಾನಲಧೃತ ವೀರ್ಯವಿಭಾವನನೆ
ಮರ್ಯಾದೆಯ ಕಾಪಾಡೆಂದಿಗು ಶ್ರೀ ಭಾರ್ಯಾಲಂಗಿತನೇ 1
ವೈದಿಕ ಲೌಕಿಕ ವಿವಿಧ ಕರ್ಮಗಳ ಸಾಧಿಸು ಸುಲಭದಲಿ
ಶೋದಿಸಿ ಹೃತ್ಕಮಲವನು ನಿಲ್ಲಿಸಿ ಬೋಧಿಸು ಭೂಮಿಯಲಿ
ಬಾಧಿಪ ವಿಘ್ನವ ಬಡಿದೋಡಿಸಿ ಮೃದು ಪಾದಯುಗ್ಮವ
ಸಾದರದೊಳ್ಮಸ್ತಕದಲ್ಲಿರಿಸುತ ಮೋದಗೊಳಿಸು ಮನವ 2
ನಿರುತದಿ ನೀನಿಲ್ಲಿರುವುದ ಕಂಡರೆ ಹರುಷವ ಹೊಂದಿಹೆನು
ಮರೆಯದಿರೆನ್ನನು ಮನೆಯಲ್ಲಿದ್ದರು ಸರಸಿಜಾಸನ ಪಿತನೆ
ಪರತರ ಮಂಗಳ ಪಾವನ ವೆಂಕಟ ಗಿರಿವರ ಶೋಭಿತನೆ
ಸರಿ ನಿನಗಿಲ್ಲೆಂದರಿವರನೆಂದಿಗು ಪೊರೆವ ಕೃಪಾಕರನೆ3