ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸವಿಲೀಲೆ ದೋರುತಿದೆ ಬಗೆಬಗೆನುಭವ ಬೀರುತಿದೆ ಧ್ರುವ ತುಂಬಿ ತುಳುಕ್ಯಾಡುತಿದೆ ಝಳಝಳನೆ ಥಳಗುಡುತಿದೆ ಬಲು ಸೂಸುತಿದೆ ಹೇಳಲಿನ್ನೇನದ ತಿಳಿಯಲಗಾಧವು ತನುಮನಕ್ಹರುಷಗಡುತಿದೆ 1 ಸುರಿಸುರಿದಾಡುವ ಸಾರಸವಿಯ ಸುಧಾರಸ ಭೋರ್ಗರೆಯುತಿದೆ ಇರುಳ್ಹಗಲೆನದ್ಯಾವಾಗನುದಿನ ಸದ್ಘನಸುರಿಮಳೆ ಧಾರಿಡುತಿದೆ ಪಾರಿಲ್ಲದ ಪರಾತ್ಪರ ದುರ್ಗಮಿದು ಪರಮಪಾವನ ಗೈಸುತಿದೆ ಪರಿಪರಿ ಸವಿದುಂಬುವ ಸುಜನರ ಸುಮುಖಕೆ ತಾನಿದಿರಿಡುತಿದೆ 2 ಪ್ರಭಕೆ ಪ್ರಭಾಕರವಾಗಿಹ ಭಾಸ್ಕರಕೋಟಿ ಪ್ರಕಾಶಿಸುತಿದೆ ಶುಭಕರವಾದ ಸದಾನು ಮಂಗಳ ನೆಲೆ ನಿಭವಾಗಿ ತೋರುತಿದೆ ಅಭಯಕರವ ಪಡೆದವಗೆನ್ನೊಡೆಯನ ಸುಖ ಸುಲಭಗುಡುತಿದೆ ಭಾಸುತಿದೆ ಗುರುಮಹಿಮೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು