ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟಾದ್ರಿಯಲ್ಲಿ ಮೆರೆವ ವೆಂಕಟೇಶನು ಪ. ವೆಂಕಟೇಶನು ನಮ್ಮ ಸಂಕಟಹರನು ಮಘಮಘಿಸುವ ದಿವ್ಯ ಕಿರೀಟ ಶೋಭನು ಜಗದೊಳೀತನ ಮಹಿಮೆ ಪೊಗಳಲೊಶವೇ ನಮ್ಮ 1 ಫಾಲ ಕಮಲನೇತ್ರ ಶೋಭನು ನಾಸಿಕ ಚಂಪಪುಷ್ಪದಂತೆ ಪೊಲ್ವು ನಮ್ಮ 2 ಕಪೋಲ ಕರ್ಣಕುಂಡಲವನು ಚನ್ನ ಕರ್ಪೂರದ ಕರಡಿಗೆಯನ್ನು ಪೋಲ್ವ ವದನ ನಮ್ಮ 3 ದಂತ ದಾಳಿಂಬಬೀಜದಂತೆ ಪೊಳೆವನು ಕಂತುಪಿತನ ಮೃದುಜಿಹ್ವೆ ಶಾಂತಮೂರುತಿಯ ಕಂಡೆ 4 ಉಭಯ ಪಾಶ್ರ್ವದ ಭಾಜಕೀರ್ತಿ ಅಭಯಹಸ್ತವು ದೇವ ಉಭಯ ಪಾಶ್ರ್ವದಿ ಶ್ರೀ ಭೂಸಹಿತ ಭಕ್ತರಿಗಭಯ ಕೊಡುವೊ 5 ಕಮಲ ಹಾರಶೋಭನು ಶ್ರೀ ಕೃಷ್ಣಂಗೆ ಸಾಲಿಗ್ರಾಮ ಹಾರ ಮೆರೆವೋದ ಕಂಡೆ 6 ಥಳ ಥಳಿಸುವಂಥ ದಿವ್ಯ ಥಳಕಿನ ಹಾರ ಬೆಳಕಾದ ರತ್ನದ ಪದಕ ವಲಿವ ಏಕಾವಳಿಯ ಕಂಡೆ 7 ಮೆರೆವ ಪೀತಾಂಬರ ವಡ್ವಾಣ್ಯ ಕರಡಿ ಕಂಜರಿಗೆ ಶಲ್ಯ ಶರಧಿ ಗಂಭೀರನ ಕಂಡೆ 8 ಕಂತುಪಿತ ತನ್ನ ಏಕಾಂತ ಭಕ್ತರ ಶಾಂತ ನೋಟದಿಂದ ನೋಡಿ ಭ್ರಾಂತಿ ಬಿಡಿಸಿ ಪೊರೆವೊದ ಕಂಡೆ 9 ಭಕ್ತರನ್ನು ಪೊರೆವ ಬಿರುದಿನ ಪಾಡಗ ಧರಿಸಿ ದಿವ್ಯ ಅಶಕ್ತಜನ ಪೋಷ ಶ್ರೀ ಶ್ರೀನಿವಾಸ ದೊರೆಯ ಕಂಡೆ 10
--------------
ಸರಸ್ವತಿ ಬಾಯಿ