ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಊ) ಕ್ಷೇತ್ರ ವರ್ಣನೆ 1. ಬೇಲೂರು ಚನ್ನಕೇಶವರಾಯ ಚೆಲುವ ಚೆನ್ನಿಗರಾಯಾ ನಿನ್ನ ಕಾಣದೇ ನಿಲ್ಲಲಾರೆ ಬೇಲೂರ ಪ ವಜ್ರ ಪದುಮ ಪತಾಕಾಂಕುಶಗಳು ನಿಜಸತಿ ಲಕುಮಿದೇವಿಯರಾ ಭುಜ ಕುಚ ಕುಂಕುಮಾಂಕಿತ ಧರಾಂಕಿತ ಭಜಕರ ಭಾಗ್ಯೋದಯ ಪಾದಯುಗಳದಾ 1 ಸುರ ವೈರಿಗಳೆದೆ ಥಲ್ಲಣವೆನಿಸುವಾ ಬಿರುದಿನ ಖಡ್ಡೆಯಪ್ಪ ಚರಣಂಗಳಾ ಗರುಡನ ಹೆಗಲೇರಿ ಉದರದಿ ವಿರಿಂಚಿಯು ಉದುಭವಿಸಿದ ವರನಾಭಿಯ ಚೆಲುವಿನಾ 2 ಪೊಂಬಟ್ಟೆಯಿಂದೆಸೆವ ಪೀತಾಂಬರ ಚೆಂಬೊನ್ನದ ಕಾಂಚಿಯದಾಮದಾ ಅಂಬುಜ ಕೌಮೋದಕಿ ಸುದರುಶನ ಕಂಬುವ ಧರಿಸಿಹ ಚತುರುಭುಜಂಗಳಾ 3 ಶ್ರೀಯಾಲಿಂಗಿಸಿ ಸುಖವ ಕಾಮಿನಿಯರ ಶ್ರೀಯೋಗವ ತೋರಿಸೆನಗೊಮ್ಮೆ ಹಾಯೆಂದು ಬಿಗಿದಪ್ಪಿ ನಂಬಿಸಿ ಚುಂಬಿಸಿ ಬಾಯ ತಂಬುಲವಿತ್ತು ಬಂದೆನ್ನ ನೆರೆಯಾ 4 ಕರೆವೆನ್ನ ಮನದಲ್ಲಿ ಕರೆವ ನಾಲಿಗೆಯಲ್ಲಿ ಕರೆವೆನ್ನ ಕಣ್ಣುಸನ್ನೆಯಲೀ ಕರೆವೆ ನೆರೆವೆ ನಿನ್ನ ಚರಣಕೆರಗುವೆ ನಾ ವರವೈಕುಂಠಕೇಶವ ಬೇಲೂರ 5
--------------
ಬೇಲೂರು ವೈಕುಂಠದಾಸರು