ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಟ್ಟೆಯ ನೆವದಿಂದ ಬಂದು ತಟ್ಟ ಕವನೆ ಕಂಡು ಕಣ್ಣ ತೆರೆದ ಕೃಷ್ಣವೇಣಿ ನಿಮ್ಮ ಕಂಡೆ ದುಷ್ಟ ಮಾನವರ ಬಾಧೆಗೆ ಅಂಜಿ ಇತ್ತ ಬಂದೆ ಕಷ್ಟ ದುರಿತಗಳ ಕಳೆಯೆ ತಾಯೆ ಪ. ಭೋರಿಡುವ ಮಳೆಗೆ ಹಲ್ಲುಗಿಟಗರಿದು ಶೀತತಲೆ- ಗೇರಿ ಕಂಪಿಸಿ ನಡುಗುತ್ತ ಜಾರಿ ಕೆಸರೊಳು ಬಿದ್ದು ಮತ್ತೇಳುತಲಿ ದಾರಿಯನು ಕೇಳಿಕೊಳ್ಳುತ ಕ್ರೂರವಾಗಿದ್ದ ಜಾಲಿಯ ಮುಳ್ಳನೆ ತುಳಿದು ಹರಿ ನಾರಾಯಣ ಎನ್ನುತ ಹಾರೈಸಿ ನಿಮ್ಮ ದರುಶನಕ್ಕೆ ನಾ ಬಂದೆ ಘೋರ ದುರಿತವನು ಕಳೆಯೆ ತಾಯೆ 1 ನಿತ್ಯ ಕಲ್ಯಾಣಿ ನಿರ್ಜರಸ್ತೋತ್ರೆ ಶುಭಗಾತ್ರೆ ಪ್ರತ್ಯಕ್ಷ ವಿಷ್ಣುಜಾತೆ ಮಾತೆ ವಿಸ್ತರಿಸಲಾರೆ ಶ್ರೀ ವಿಷ್ಣು ಸಂಪ್ರೀತೆ ಸತ್ಪಾತ್ರ ಸಂಪೂಜಿತೆ ಪ್ರೀತೆ ಸತ್ತು ಹುಟ್ಟುವ ಜನ್ಮ ಕೋಟಲೆಯ ಖಂಡ್ರಿಸೆ ಪತಿತ ಪಾವನ ಚರಿತೆ ವ್ಯರ್ಥವಾಯಿತು ಜನ್ಮ ಸಾರ್ಥಕವ ಮಾಡಮ್ಮ ಮುಕ್ತಿಸಾಧನದಾತೆ ಮಾತೆ 2 ಸುರಗಂಗೆ ಕೃಷ್ಣಮಲಾಪಹಾರಿ ಮೂವರು ಕೂಡಿ ಬೆರೆದಿದ್ದ ಸಂಗಮದಲ್ಲಿ ಅರಿಸಿಣ ಅಕ್ಷತೆ ಗಂಧ ಕುಂಕುಮ ತಾಂಬೂಲಗಳ ಹರುಷದಿಂದರ್ಪಿಸುತಲಿ ಥರಥರದಿ ನೆರೆದ ಮುತ್ತೈದೆಯರೆಲ್ಲರು ಮರದ ಬಾಗಿನವ ಕೊಡುತಲಿ ಹರುಷದಿಂದಿಪ್ಪುದನು ಕಂಡೆ ಹೆಳವನಕಟ್ಟೆ ಅರಸು ರಂಗನ ಕೃಪೆಯಲ್ಲಿ ತಾಯೆ 3
--------------
ಹೆಳವನಕಟ್ಟೆ ಗಿರಿಯಮ್ಮ
ಸತ್ಸಂಗ ಮಾಡೊ ಮನವೆ ಚಿತ್ಸುಖ ನೋಡಲಿಕೆ ಅತಿಸೂಕ್ಷ್ಮಾನಂದ ಸುಪಥ ಅತಿಶಯಾನಂದ ಸದ್ಗತಿ ಸುಮೋಕ್ಷದಾಯಕ ಹಿತದೋರಿಕೊಡುವ ಸದ್ಗುರುನಾಥ ಧ್ರುವ ತೊಡಕಿ ಮಿಡುಕಬ್ಯಾಡ ಹಡಕಿ ವಿಷಯದೊಳು ಗಡಕವಾಗಿ ಕೆಡುಕ ಬುದ್ಧಿಯಿಂದ ಕೆಡುದೇನ ಬಡದ ಭವಣೆ ಬಟ್ಟು ತಾವು ಕೊಡುವರೇನ ಹಾಕಿ ವೈವಯಮನ ಬ್ಯಾಗೆ ಗುರುದಯಕರುಣ 1 ಸಿಲ್ಕಿಮಾಯ ಮಲ್ಕಿನೊಳು ಅಳ್ಕಿ ಆಲಪರಿಯಬ್ಯಾಡ ಬಲ್ಕಿ ಮಾಡಿಕೊಳ್ಳಿ ನೀ ಸುಜ್ಞಾನ ಕ್ಷುಲ್ಲಕ ಬುದ್ಧಿಗಾಗಿ ನಿನ್ನ ತನುವಿನೊಳಗೆ ಖೂನ ನುಲ್ಕಿ ಸುಟ್ಟ ಮಲ್ಕಿನಂತೆ ಜನಕಾಲಂಬ ತೋರಿ ನೀನು ಜಲಕಮಲದಂತಿರನುದಿನ ನಿಲ್ಕಿ ನೆಲೆಗೊಂಬುದಿದು ತಳಕು ತನ್ನೊಳಗದೆಯೆಂದು ನಾಲ್ಕುವೇದ ಸಾರುತಿದೆ ಪೂರ್ಣ2 ಮಾನವ ಜನ್ಮ ನಿರ್ತದಿಂದ ಅರ್ತು ಕೂಡಿ ಕರ್ತು ನಿಜಾನಂದ ಗುರುಬೋಧ ಥರಥರದಿ ತೋರಿ ಪೂರ್ಣ ಸಾರ್ಥಕ ಮಾಡುವದಿದು ತೀರ್ಥಪುಣ್ಯ ಸರ್ವಕ್ಷೇತ್ರವಾದ ಅರ್ಥಿಯಿಂದವಿಡಿದು ಗುರು ಪಡಿಯೊ ನಿನ್ನ ಸ್ವಹಿತದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು