ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿಮ್ಮಿಂದ ಗುರು ಪರಮ ಕಲ್ಯಾಣವು ನಿಮ್ಮಿಂದಲೆನಗೆ ಘನ ಪರಿಪೂರ್ಣವು ದ್ರುವ ಹುರಿದು ಭವಬೀಜ ಧರೆಯೊಳುದಯ ಕರುಣದಲಿ ಪರಮ ಆನಂದ ಸುಖ ಮಳೆಯಗರೆದು ಕರ್ಮ ಪಾಶಗಳೆಂಬ ಕರಿಕಿ ಬೇರವು ಕಿತ್ತಿ ಹರಗಿ ಬಿತ್ತಲು ನಾಮ ತಾರಕುಪದೇಶದಲಿ 1 ತುಂಬಿ ತುಳುಕುವ ಸಿರಿಯು ಸರ್ವಮಯವೆಂಬ ತೆನೆಗಳು ತುಂಬಿ ಏರಿ ಸುಷಮ್ನನಾಳದ ಮಂಚಿಕಿಯ ಮೆಟ್ಟಿ ಪರಿಪರಿ ಅವಸ್ಥೆ ಹಕ್ಕಿಗಳು ಹಾರಿಸಲಾಗಿ2 ಮುರಿದು ಭೇದಾಭೇದವೆಂಬ ಗೂಡಲೊಟ್ಟಿ ಅರಿವು ಕಣದಲಿ ಥರಥರದಲಿಕ್ಕಿ ಙÁ್ಞನ ವೈರಾಗ್ಯವೆಂಬೆರಡೆತ್ತುಗಳ ಹೂಡಿ ಸರ್ವಗುಣ ತೆನೆ ತೆಗೆದು ತುಳಿದು ರಾಸಿಮಾಡಿಸಲಾಗಿ 3 ಸರ್ವಮಯವೆಂಬ ರಾಶಿಯು ಒಬ್ಬುಳಿಯ ಮಾಡಿ ತೂರಿ ತರ್ಕ ಭಾಸ ಗಳೆದು ಮಿಥ್ಯಾಪ್ರಪಂಚವೆಂಬ ಕಾಳವು ಕಡೆಮಾಡಿ ಸಫಲ ಸಹಕಾರದಲಿ ಸುಗ್ಗಿ ಮಾಡಿಸಲಾಗಿ 4 ಏಕೋ ಬ್ರಹ್ಮದ ಗತಿ ನಿಧಾನ ರಾಶಿಯುದೋರಿ ಜನ್ಮ ಮರಣವು ಕೊಯಿಲಿಯ ಸುಟ್ಟು ಉರುಹಿ ಸದ್ಗತಿ ಮುಕ್ತಿ ಸುಕಾಲ ಸಾಧನವಿತ್ತು ಮೂಢ ಮಹಿಪತಿ ಪ್ರಾಣ ಸದ್ಗೈಸಲಾಗಿನ್ನು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು