ಯಾಕೆ ಸುಮ್ಮನೆ ಹೊತ್ತ ಕಳೆವಿರಿ ಲೋಕವಾರ್ತೆಯಲಿ
ಶ್ರೀಕರನ ಸರ್ವತ್ರ ಸ್ಮರಿಸುತ
ನಾಕ ಭೂಗತ ಸೌಖ್ಯ ಬಯಸದೆ ಏಕಚಿತ್ತದಿ ನಂಬಲನುದಿನ
ಸಾಕುವನು ಸಕಲೇಷ್ಟದಾಯಕ ಪ.
ಸ್ನಾನ ಜಪ ದೇವಾರ್ಚನ ವ್ಯಾಖ್ಯಾನ ಕರ್ಮಗಳು
ದಾನ ಧರ್ಮ ಪರೋಪಕಾರ ನಿಜಾನುಪಾಲನವು
ಏನು ಮಾಡುವುದೆಲ್ಲ ಲಕ್ಷ್ಮೀಪ್ರಾಣನಾಯಕ ಮಾಳ್ಪನೆಂದರಿ-
ದಾನು ನನ್ನದು ಎಂಬ ಕೀಳಭಿಮಾನ ತಾಳದೆ ಧ್ಯಾನ ಮಾಡಿರಿ 1
ಪೊಟ್ಟಿಯೊಳಗಿಂಬಿಟ್ಟು ಚೀಲದಿ ಕಟ್ಟಿ ಬಿಗಿದಿರುವ ಕಾಲದಿ
ಕೊಟ್ಟು ಬುತ್ತಿಯನಿಟ್ಟು ಬಾಯೊಳು ಧಿಟ್ಟ ತಾ ಪೊರೆವ
ವಿಠಳ ಕರುಣಾಳು ಕಾಯನೆ ಥಟ್ಟನೊದಗುವ ತನ್ನ ದಾಸರ
ಮಾಡುವ ರಾಜನಿರುತಿರೆ 2
ಪಾಪವೆಂಬುದೆ ಪಂಕಜಾಕ್ಷ ರಮಾಪತಿಯ ಮರವು ಪುಣ್ಯ
ಕಲಾಪವೆಂಬುದೆ ಪೂರ್ವ ಗಿರಿವರ ಭೂಪತಿಯ ನೆನಪು
ಈ ಪರಿಯ ಶ್ರುತ್ಯರ್ಥಸಾರ ಪದೇ ಪದೇ ಮನದಲ್ಲಿ ಗ್ರಹಿಸುತ
ತಾಪ ಹೊಂದದೆ ಭೂಪರಂತಿರಿ 3