ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ | ವಾಸುದೇವ ಮುನಿಯಿದ್ದ ಕಾರಣ ಪ ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು | ತೇಜದಲಿ ನೋಡೆ ಸೂರ್ಯನದೆ ಸೋಲು || ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು | ಭೋಜನದಲಿ ನೋಡೆ ಅಮೃತಕೆ ಮೇಲು 1 ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ | ಸತ್ಸಂಗತಿಯ ನೋಡೆ ಬುಧ ಸಂಗತಿ || ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ | ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ 2 ಓಲಗದಲಿ ನೋಡೆ ಸತ್ಯಲೋಕಕೆ ಸಮ | ಪೇಳುವ ಕೀರ್ತನೆ ನೋಡು ವೇದಸ್ತೋಮ || ಬಾಲ ಉಡುಪಿಯ ಕೃಷ್ಣ ವಿಜಯವಿಠ್ಠಲರೇಯನ | ತಿಳಿದ ಮಾನವಗೆ ಫಲವು ನಿಷ್ಕಾಮಾ3
--------------
ವಿಜಯದಾಸ
ಭಕುತ ಜನ ಮುಂದೆ ನೀನವರ ಹಿಂದೆ ಪ ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಅ ಪ ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ | ಕಟ್ಟಲೆಯಲಿ ಹರಿಗೋಲು ಹಾಕಿ || ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ | ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? 1 ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- | ಸ್ಸಾಳ ನಾನಾವಾದ್ಯ ಘೋಷಣಗಳು || ಸಾಲಾಗಿ ಬಳಿವಿಡಿದು ಸಂಭ್ರÀಮದಿ ಬರುವಾಗ | ಆಳು ಮುಂದಲ್ಲದೆ ಅರಸು ತಾ ಮುಂದೆ?2 ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ | ಸತ್ಸಂಗತಿಗೆ ಹರಿದಾಸರೆಲ್ಲ || ಸಿರಿ ವಿಜಯವಿಠ್ಠಲ ವೆಂಕಟಾಧೀಶ ವತ್ಸ ಮುಂದಲ್ಲದೆ ಧೇನು ತಾ ಮುಂದೆ ? 3
--------------
ವಿಜಯದಾಸ
ಮಂಗಳ ಪಾಡಿರೆ ಭಾವೆಯರೇ ರಂಗನ ರಮಣಿಯ ಭಾವಿಸಿರೇ ಪ ಅಂಗಜಜನನಿಯ ಕೃಪೆಯಿ ಸ- ತ್ಸಂಗತಿ ಪಡೆದೆವು ನಿಶ್ಚಯಂಅ.ಪ ಭೋಗವತೀಪತಿಶಾಯಿಯೊಳು ಅನು ರಾಗಗೊಂಡಿಹ ದೇವಿಯಿವಳ್ ಭಾಗ್ಯಲಕ್ಷ್ಮಿಯ ಪಾದದೊಳು ಬಾಗುತ ಶಿರವನು ರಾಗದೊಳು 1 ವೇದಸಾರದ ವಾಕ್ಯದಲಿ ಮಾಧವಿಯಂ ಸ್ತುತಿ ಮಾಡುತಲಿ ಭೇದವೆಣಿಸದೆ ಸಲಹೆನ್ನುತಲಿ ಮಾಧವನಂ ಕೊಂಡಾಡುತಲಿ 2 ತಾಪತ್ರಯಗಳ ಪರಿಹರಿಸಿ ಆಪತ್ತುಗಳಿಂದುದ್ಧರಿಸಿ ಕಾಪಾಡುವಳಿವಳೆಂದೆನಿಸಿ ಶ್ರೀಪದ್ಮಿನಿಯನು ಸಂಸ್ಮರಿಸಿ 3 ಶರಣಾಗತ ಸಂರಕ್ಷಕಿಗೆ ವರಶೇಷಗಿರಿನಿಲಯನಿಗೆ ಕರುಣಾರೂಪಿಣಿ ಪದ್ಮಿನಿಗೆ ಕರಗಳ ಮುಗಿಯುತೆ ಮಾಧವಿಗೆ 4
--------------
ನಂಜನಗೂಡು ತಿರುಮಲಾಂಬಾ
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಧ್ರುವ ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1 ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2 ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3 ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4 ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕುತ ಜನ ಮುಂದೆ ನೀನವರ ಹಿಂದೆ - ಇದಕೆ |ಯುಕುತಿ ಕೈಕೊಳದಯ್ಯ ಗಯಾಗದಾಧರನೆ ಪಕಟ್ಟೆರಡು ಕೂಡಿ ತಾ ನದಿಸೂಸಿ ಹರಿವಾಗ |ಕಟ್ಟುಕ್ಕಿದಾಗ ಹರಿಗೋಲ ಹಾಕೆ ||ನೆಟ್ಟನೆ ಜಿಗಿಜಿಗಿದು ದಾಟಿ ತಾ ಪೋಪಾಗ |ಹುಟ್ಟು ಮುಂದಲ್ಲದಲೆ ಹರಿಗೋಲು ಮುಂದೆ? 1ಕಾಳೆಹೆಗ್ಗಾಳೆದುಂದುಭಿನಾನಾ ವಾದ್ಯದಿಂ |ಓಲಗದಿಂದೈದೆ ಅರಸು ತಾ ಬರುವಾಗ ||ಸಾಲಾಗಿ ಬಳಿವಿಡಿದು ಸಂಭ್ರಮದಿ ಇರುವಾಗ |ಆಳು ಮುಂದಲ್ಲದೆ ಅರಸು ತಾ ಮುಂದೆ 2ಉತ್ಸವ ಮೂರುತಿಯು ಬೀದಿ ಮೆರೆಯುತ ಬರಲು |ಸತ್ಸಂಗತಿಗೆ ಹರಿದಾಸರೆಲ್ಲ ||ಅಚ್ಚ ಸಿರಿಯರಸು ಸಿರಿಪುರಂದರ ವಿಠಲನೆ |ವತ್ಸಮುಂದಲ್ಲದೆಧೇನುತಾ ಮುಂದೆ?
--------------
ಪುರಂದರದಾಸರು