ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಪ್ರಮೇಯ ಪ್ರಕರಣ) ಸುವ್ವಿ ಸುವ್ವಿ ಉರಗಾದ್ರಿವಾಸ ಶ್ರೀ ವೆಂಕಟೇಶ ಸುವ್ವಿ ಶ್ರೀ ಸಚ್ಚಿದಾನಂದಾತ್ಮಕಾನೆ ಸುವ್ವಿ ಪ ಮೂಲನಾರಾಯಣ ಮೂಲಪ್ರಕೃತಿಯನ್ನು ಮೂರುಭಾಗಗೈಸಿ ಸೃಷ್ಟಿಮಾಡಿದನೆ ಸುವ್ವಿ ಸೃಷ್ಟಿಯೊಳು ಗುಣವ್ಯಷ್ಟಿಸಮಷ್ಟಿಯಿಂದ ಸೃಷ್ಟಿಸಿದ ಜಗಸಂಸೃಷ್ಟನೆನಿಸಿದಸುವ್ವಿ 1 ಸತ್ವರಜತಮ ಸಂಯುಕ್ತದಿಂದ ಕರ್ಮ ಮುಕ್ತಿ ಪರ್ಯಂತ ಜನ್ಮಕರ್ಮಂಗಳು ಸುವ್ವಿ ಕರ್ಮಂಗಳು ಸವೆದು ಉತ್ಕ್ರಾಂತ ಮಾರ್ಗ ಪಿಡಿದು ತಮ್ಮ ಸ್ವರೂಪ ಕರ್ಮನೆಸಗುವರೋ ಸುವ್ವಿ 2 ಮಹದಹಂಕಾರದಿಂದ ವೈಕಾರಿಕದಿಂದ ವ್ಯಸ್ತ- ರಾದರು ತತ್ವದೇವತೆಗಳು ಸುವ್ವಿ ದೇವತೆಗಳಾದರು ಮೇಲೆ ರಾಜಸಾಹಂಕಾರದಿಂದ ಇಂದ್ರಿಯಾದಿಗಳೆಲ್ಲ ಸೃಷ್ಟಿಯಾದವು ಸುವ್ವಿ 3 ಭೂತಪಂಚಕವು ತನ್ಮಾತ್ರಪಂಚಕಗಳು ತಾಮ- ಸಾಹಂಕಾರಗಳುದಿಸಿದವೆನ್ನು ಸುವ್ವಿ ಉದಿಸಿದಹಂಕಾರತ್ರಯದೊಳು ಬಂದು ಸರ್ವಸೃಷ್ಟಿ ಅದುಭುತವಾದುದು ಅನಿರುದ್ಧನಿಂದ ಸುವ್ವಿ 4 ಎಲ್ಲಜೀವರು ಮುನ್ನಾಸೃಷ್ಟಿಗೆ ಬಾರದಿರೆ ಇನ್ನು ಸುಪ್ತಾವಸ್ಥೆಯಲ್ಲಿ ಸುಮ್ಮನಿರ್ಪರೋ ಸುವ್ವಿ ಸೃಷ್ಟಿಗೆ ತಂದ ಗುಣವೈಷಮ್ಯದಿಂದಲೀ ಸುವ್ವಿ 5 ಭೇದಪಂಚಕವು ನಿತ್ಯತಾರತÀಮ್ಯ ಸತ್ಯ ವಿಧಿ ಮೊದಲು ತೃಣಾಂತ ಜೀವರು ತ್ರಿವಿಧವು ಸುವ್ವಿ ನಿತ್ಯ ತ್ರಿವಿಧಕಾರ್ಯ ಅರಿತು ತ್ರಿವಿಧಸಾಧನದಂತೆ ತ್ರಿವಿಧಗತಿಯು ಸುವ್ವಿ 6 ಜೀವರು ಅನಾದಿಯು ಸಾವು ನೋವುಗಳಿಲ್ಲ ಆ- ವಾವಸ್ಥೆಗಳೆಲ್ಲ ಸ್ಥೂಲ ದೇಹಕೆ ಸುವ್ವಿ ಸ್ಥೂಲದೇಹವ ಧರಿಸಿ ಪೂರ್ವಕರ್ಮದಂತೆ ಸಾಧನದಿಂ- ದಲೆ ಕರ್ಮಕ್ಷಯವಹುದು ಸುವ್ವಿ 7 ವೃದ್ದಿಹ್ರಾಸಗಳಿಲ್ಲ ಶುದ್ದ ಜೀವಸ್ವರೂಪ ವಿಧಿಮೊದಲು ತೃಣಾಂತ ಪರಿಮಿತಿ ಒಂದೆ ಸುವ್ವಿ ಪರಿಮಿತಿ ಒಂದೇ ರೀತಿ ಗುಣಕ್ರಿಯ ವಿವಿಧರೀತಿ ಅ- ದರಂತೆ ಜಡ ಪ್ರಕೃತಿ ಕಾರ್ಯವು ಪರಿಪರಿ ಇಹುದು ಸುವ್ವಿ 8 ಸರ್ವತ್ರ ಹರಿವ್ಯಾಪ್ತನಿರ್ಲಿಪ್ತನು ಸುವ್ವಿ ನಿರ್ಲಿಪ್ತನು ಅನಂತಾನಂತಗುಣಗಣಪೂರ್ಣ ಅವ್ಯಯ ಅಪ್ರಮೇಯ ಅಚ್ಯುತಾನಂತ ಸುವ್ವಿ9 ಅನಂತಾನಂತರೂಪಾನಂತ ಚೇತನ ಜಡದಿ ಅಂತರಾತ್ಮ ತಾ ನಿರಂತರ ನಿಂತಿಹ ಸುವ್ವಿ ನಿಂತು ತದಾಕಾರದಿ ತದ್ಭಿನ್ನ ತನ್ನಾಮದಲಿ ಕಂತುಪಿತನು ತಾ ನಿಂತಿಹನೆನ್ನು ಸುವ್ವಿ 10 ಇಂಥಾಜೀವರಿಗೆ ಲಿಂಗದೇಹ ಅನಾದಿಯಲ್ಲಿದ್ದು ಜ್ಯೋತಿರ್ಮಯವಾಗಿ ಪ್ರಕಾಶಿಸುವುದು ಸುವ್ವಿ ಪ್ರಕಾಶದ ಜೀವಕ್ಕೆ ಗಜ್ಜಗಬೀಜದಂತೆ ತ್ರಿಗುಣಾ ವರ್ಕವು ಲಿಂಗಕ್ಕಾವರ್ಕವು ಸುವ್ವಿ 11 ಗುಣಬದ್ಧನಾದುದರಿಂದ ಗುಣಕಾರ್ಯ ಫಲಗಳಿಂದೆ ಶೀ ತೋಷ್ಣಸುಖದುಃಖಾನುಭವವಾಗುವುದೆನ್ನು ಸುವ್ವಿ ಅನುಭವದಭಿಮಾನ ಸಾಧನದಂತೆ ಜೀವಾ ಜೀವ ಜನುಮಜನುಮಾಂತರದ ವಾಸನವಿಹುದು ಸುವ್ವಿ 12 ಸತ್ವಜೀವರ ಲಿಂಗಕ್ಕೆ ಸತ್ವಾವರಣವೇ ಪ್ರಥಮ ದ್ವಿತೀಯಾವರಣವೆ ರಜ ತೃತೀಯ ತಮವೆನ್ನು ಸುವ್ವಿ ತಮೋ ಆವರಣವೆ ಪ್ರಥಮ ರಜ ಸತ್ವವು ತದುಪರಿ ತ್ರಿವಿಧಾವರ್ಕವು ತಮೋಜೀವರಿಗಿಹುದು ಸುವ್ವಿ 13 ರಜೋ ಜೀವರಿಗೆ ರಜವು ಪ್ರಥಮಾವರಣದಿ ಇಹುದು ತಮಸತ್ವಾವರಣಾನಂತರವಿಹುದು ಸುವ್ವಿ ತಮರಜಸತ್ವಾವರಣತ್ರಯಗಳು ಲಿಂಗಕ್ಕೆ ನಿತ್ಯ ಇರಲು ತ್ರಿವಿಧಬದ್ದರಾಗಿ ಸುತ್ತುತಿಪ್ಪರು ಸುವ್ವಿ 14 ಸತ್ವಾವರ್ಕದಿ ವಿಶ್ವರಜತಮ ತ್ವೆಜಸ ಪ್ರಾಜ್ಞ ನಿತ್ಯದಿ ಜೀವನವಸ್ಥಾ ತೋರಿಸುವರು ಸುವ್ವಿ ತೋರಿಸುವರು ಜೀವರ ಜಾಗ್ರಸ್ವಪ್ನಾ ವಸ್ಥೆಯೊಳು ಶ್ರೀಭೂದುರ್ಗಾ ಲಿಂಗಕಭಿಮಾನಿಗಳುಸುವ್ವಿ 15 ಸತಿಸಹಿತರಾಗಿ ಬ್ರಹ್ಮವಾಯು ಬಿಡದೆ ನಿತ್ಯ ಭಕ್ತಿಯಿಂದ ಹರಿಯಾರಾಧಿಸುವರೋ ಸುವ್ವಿ ನಿತ್ಯಭಕ್ತಿಯಿಂದ ಸ್ತುತಿಯ ಮಾಡಿ ಜಗ- ಕತೃವಿನಾಜ್ಞೆಯಿಂ ತೃಪ್ತರಾಗೋರೋ ಸುವ್ವಿ 16 ಜ್ಞಾನ ಕರ್ಮೇಂದ್ರಿಯ ಭೂತಪಂಚಕಗಳು ಮನಸು ಎಂದು ಇನಿತು ಕೂಡಿ ಷೋಡಶಕಳೆಗಳು ಲಿಂಗಕ್ಕೆ ಸುವ್ವಿ ಷೋಡಶಕಳೆಗಳಿಂದ ಕೂಡಿ ಲಿಂಗವು ಇಹದು ಕಳೆಗಳಲ್ಲಿನ ಭಗವದ್ರೂಪವ ತಿಳಿಯೋ ಸುವ್ವಿ 17 ಮನಸಿಗೆ ಶ್ರವಣಕೆ ಶ್ರೀ ಕೇಶವನಾರಾಯಣ ತ್ವ- ಮಾಧವ ಗೋವಿಂದನೆ ಸುವ್ವಿ ಜಿಹ್ವೆ ಘ್ರಾಣದಿ ವಿಷ್ಣುಮಧುಸೂದನ ತ್ರಿವಿಕ್ರಮನೆನ್ನು ಸುವ್ವಿ 18 ಹಸ್ತ ಪಾದಕ್ಕೆಲ್ಲ ವಾಮನ ಶ್ರೀಧರ ಗುಹ್ಯಕ್ಕೆ ಹೃಷೀಕೇಶ ಮೂರುತಿ ಇಹರೋ ಸುವ್ವಿ ಮೂರುತಿ ಇಹರೋ ಮತ್ತೆ ಗುದದೊಳು ಪದ್ಮನಾಭ ಮುದದಿಂದ ಜ್ಞಾನ ಕರ್ಮೇಂದ್ರಿಯದಲ್ಲಿ ಸುವ್ವಿ 19 ಶಬ್ದದೊಳು ದಾಮೋದರ ಸ್ಪರ್ಶದಿ ಸಂಕರ್ಷಣನು ವಾಸುದೇವ ಮೂರುತಿ ಇಹರೋ ಸುವ್ವಿ ರೂಪಸುಗಂಧಗಳಲಿ ಈರೂಪಗಳಹವೋ ಸುವ್ವಿ 20 ಷೋಡಶ ಕಳೆಗಳಲ್ಲಿ ಅಭಿಮಾನಿಗಳಂತರದಲ್ಲಿ ನೀ ಬಿಡದೆ ನೆನೆಸು ಈ ಭಗವದ್ರೂಪಗಳಲ್ಲಿ ಸುವ್ವಿ ಭಗವದ್ರೂಪಗಳಲಿ ಧೃಡಭಕುತಿಯಿಂದಲಿ ಎಡೆಬಿಡದೆ ನಡೆನುಡಿಗಳಲ್ಲಿ ಸುವ್ವಿ 21 ಆಚ್ಛಾದಿಕವು ಜೀವರಿಗೆ ಎರಡುಂಟು ನಿತ್ಯದಲ್ಲಿ ಜೀವನ ಮರೆಯಮಾಡಿದ ಜೀವಾಚ್ಛಾದಿಕ ಸುವ್ವಿ ಜೀವಾಚ್ಛಾದಿಕ ಇದೆ ಹರಿಚ್ಛಾಬಂದಕಾಲದಿ ಬಿಚ್ಚಿ ಹೋಗುವುದು ನಿಶ್ಚಯ ಕೇಳೋ ಸುವ್ವಿ 22 ಪರಮಾಚ್ಛಾದಿಕವೆಂಬುದು ನಿರುತವು ತಪ್ಪಿದ್ದಲ್ಲ ಹರಿಇಚ್ಛಾ ಇಂಥಾದ್ದೆ ಇಂಥಾದ್ದೆನ್ನು ಸುವ್ವಿ ಇಂತಿದ್ದರು ಹರಿಯು ಒಮ್ಮೆ ಇಚ್ಛೆಮಾಡಿದರೆ ಒಮ್ಮೆ ಒಮ್ಮೆ ತೋರಿದರೆ ಒಮ್ಮೆ ತೋರದಿಹನೋ ಸುವ್ವಿ 23 ಲಿಂಗದೇಹಕ್ಕೆ ತಮ ಮೋಹ ಮಹಮೋಹ ತಾಮಿಶ್ರ ಅಂಧತಾಮಿಶ್ರವೆನ್ನು ಸುವ್ವಿ ತಾಮಿಶ್ರದಿ ಪಂಚ ನರಕಂಗಳಲ್ಲಿರ್ಪ ಕೃದ್ಧೋಲ್ಕಾದಿ ಪಂಚಭಗವದ್ರೂಪವಿಹುದೋ ಸುವ್ವಿ 24 ದೈತ್ಯರಿಗವಕಾಶ ಲಿಂಗದೊಳೆಂದಿಗಿಲ್ಲ ದೈತ್ಯಾರಿಜನಾರ್ದನ ಹರಿ ಅಲ್ಲೆ ಇಹನು ಸುವ್ವಿ ದೈತ್ಯಾರಿ ಜನಾರ್ದನನು ಲಿಂಗವ ರಕ್ಷಿಸುತ್ತ ನಿತ್ಯನಿರ್ಲಿಪ್ತನಾಗಿ ನಿಂತಿಹನೋ ಸುವ್ವಿ 25 ವಿಧಿಮೊದಲು ತೃಣಾದಿ ಜೀವರ ಲಿಂಗದಲಿ ದಗ್ಧಪಟದ ತೆರದಿ ವಿಧಿಗೆ ಲಿಂಗವು ಸುವ್ವಿ ವಿಧಿಗಿಹ ಲಿಂಗದ ಕಾರ್ಯ ಹರಿಯ ಪ್ರೀತ್ಯರ್ಥವು ಲಿಂಗಗುಣದ ಕಾರ್ಯವೆಂದಿಗಿಲ್ಲವೋ ಸುವ್ವಿ 26 ಲಿಂಗದೇಹಕೆ ಮುಂದೆ ಅನಿರುದ್ಧದೇಹವು ಅಂಗಿಯ ತೊಟ್ಟಂತೆ ಸಂಗಮಾದುದು ಸುವ್ವಿ ಅದರಿಂದ ಅನಿರುದ್ಧದೇಹ ಇಹುದು ಸಪ್ತಾವರಣ ಆವರಣಗಳಲ್ಲಿ ವಿವರಣೆ ತಿಳಿಯೋ ಸುವ್ವಿ 27 ಅನಿರುದ್ಧ ಪ್ರದ್ಯುಮ್ನ ಆವರಣಗಳೆರಡು ವಾಸುದೇವ ನಾರಾಯಣ ಸುವ್ವಿ ಸರ್ವತತ್ತ ್ವ ವ್ಯಕ್ತವಾದವು ನೀ ಮತ್ತೆ ತಿಳಿಯೋದು ಸುವ್ವಿ 28 ಮಹತ್ತತ್ವ ತಿಳಿ ಶ್ರೀ ವಾಸುದೇವಾವರಣದಿ ನಾರಾಯಣಾವರಣದಿ ಅವ್ಯಕ್ತ ತತ್ವವು ಸುವ್ವಿ ಅವ್ಯಕ್ತ ತತ್ವಾದಿಚತುರ್ವಿಂಶತಿ ತತ್ವದಲಿ ಕೇಶವಾದಿ ಚತುರ್ವಿಂಶತಿ ರೂಪವಿಹುದು ಸುವ್ವಿ 29 ತತ್ವಂಗಳಲಿ ತತ್ತದಭಿಮಾನಿಗಳಂತರದಿ ನಿತ್ಯ ಹರಿಯು ತನ್ನ ಸತಿಯರಿಂದಲಿ ಸುವ್ವಿ ಸತಿಯರಿಂದಲಿ ಕೂಡಿ ಕೃತ್ಯವ ನಡೆಸಿ ಅಭಿ ವ್ಯಕ್ತಮಾಡಿಸುತ್ತಿರುವನು ಹರಿ ಸತ್ಯವೆನುಸುವ್ವಿ 30 ಹೃದಯದೊಳಿರುತಿರ್ಪ ಅನಿರುದ್ಧದೇಹದೊಳು ಮುದದಿಂದ ದೈತ್ಯದಾನವಾದಿಗಳಿರುವರು ಸುವ್ವಿ ದೈತ್ಯರೆಲ್ಲರು ಪಾಪಕಾರ್ಯಗಳ ಮಾಳ್ಪರು ಪುಣ್ಯಕಾರ್ಯಗಳೆಲ್ಲ ಸುರರಿಂದಾಹುದು ಸುವ್ವಿ 31 ಲಿಂಗದೇಹದ ಸಂಗಡ ಭಂಗವಿರುವುದು ಸುವ್ವಿ ಭಂಗವಾಗಲು ವಿಷಯ ಸಂಗರಹಿತನಾಗು ರಂಗ ಅಂತರದಿ ತಿಳಿಯಗೊಡುವನು ಸುವ್ವಿ 32 ಜೀವಪ್ರಕಾಶವು ಲಿಂಗಾನಿರುದ್ಧದೊಳು ಷೋಡಶಕಳೆಗಳಿಂದ ವ್ಯಾಪಿಸಿಹುದು ಸುವ್ವಿ ವ್ಯಾಪಿಸಿಹುದು ಮುಂದೆ ಸ್ಥೂಲದೇಹವು ಒಂದು ಸ್ಥೂಲಜಡದೇಹದ ಕಾರ್ಯ ಅಭಿವ್ಯಕ್ತವಾಹುದು ಸುವ್ವಿ 33 ಸ್ಥೂಲ ದೇಹದೊಳು ಸುಷುಮ್ನಾಧಾರ ಹಿಡಿದು ಸಪ್ತಕಮಲಗಳಲ್ಲುಂಟು ತಿಳಿಯೋ ಸುವ್ವಿ ಸಪ್ತಕಮಲದಿ ಮೊದಲು ಮೂಲಾಧಾರದಿ ನಾಲ್ಕು ಕಮಲ ಹವಳವರ್ಣವಿದೆ ಭೂಲೋಕವೆನ್ನು ಸುವ್ವಿ 34 ಕಮಲ ನಾಭಿಯಲ್ಲಿ ವಾಯುಮಂಡಲವಿದೆ ಭುವರ್ಲೋಕವು ಸುವ್ವಿ ಭುವರ್ಲೋಕ ಇಲ್ಲಿ ವಾಯುಬೀಜಾಕ್ಷರದಲ್ಲಿ ನಿತ್ಯ ಸುವ್ವಿ 35 ಹೃದಯಕಮಲದಿ ಎಂಟುದಳ ಉಂಟು ರವಿಭಾ ಸತ್ರಿಕೋಣ ಅಗ್ನಿಮಂಡಲವಿಹುದಿಲ್ಲಿ ಸುವ್ವಿ ಇಹುದು ಸುವರ್ಲೋಕ ಇಲ್ಲಿ ಅಗ್ನಿ ಬೀಜಾಕ್ಷರ ನಿತ್ಯ ಸುವ್ವಿ 36 ಹೃದಯಕಮಲದ ಮಧ್ಯ ಕರ್ಣಿಕಮಧ್ಯದಲ್ಲಿ ಮೂಲೇಶನಿಪ್ಪ ಸ್ಥೂಲಾಂಗುಷ್ಟ ಮೂರುತಿ ಸುವ್ವಿ ಮೂರುತಿ ಮೂಲೇಶನ ಪಾದಮೂಲದಲ್ಲಿಪ್ಪ ಅನಿರುದ್ಧ ದೇಹವೇ ಸುವ್ವಿ 37 ನಿತ್ಯ ಇಪ್ಪತ್ತೊಂದು ಸಾವಿರದಾರುನೂರು ಸುವ್ವಿ ಆರುನೂರು ಜಪ ಮೂರು ಮೂರು ವಿಧಜೀವರೊಳು ಮೂರು ವಿಧ ನಡೆಸಿ ಮೂರ್ಗತಿ ನೀಡುವ ಸುವ್ವಿ 38 ಅಷ್ಟದಳಗಳ ಮೇಲೆ ಅಷ್ಟಭುಜನಾರಾಯಣ ನಿಷ್ಟೆಯಿಂದಲಿ ಚರಿಸಿ ಜೀವರಿಷ್ಟವ ತೋರುವ ಸುವ್ವಿ ಜೀವರಿಷ್ಟದೊಳು ಪೂರ್ವದಳದಲಿ ಪುಣ್ಯ ನಿದ್ರಾಲಸ್ಯವು ಶ್ರೀ ಆಗ್ನೇಯ ದಳದಲಿ ಸುವ್ವಿ 39 ಆಗÉ್ನೀಯದಳದ ಮುಂದೆ ಯಮದಿಕ್ಕಿನಲ್ಲಿ ಕ್ರೂರ ಬುದ್ಧಿಯು ಜೀವಗಾಗುವುದೆನ್ನು ಸುವ್ವಿ ನಿರುತ ದಳದಲ್ಲಿ ಸಂಚರಿಸುವ ಸುವ್ವಿ 40 ವಾಯುವ್ಯದಲ್ಲಿ ಗಮನಾಗಮನವು ಸುವ್ವಿ ಗಮನಾಗಮನದಿಮೇಲೆ ರತಿಬುದ್ಧಿಯ ಉತ್ತರದಲಿ ದಾನಬುದ್ಧಿಯು ಈಶಾನ್ಯದಲಿ ಸುವ್ವಿ41 ಬರಲು ಸ್ವಪ್ನಾವಸ್ಥೆಯು ಸುವ್ವಿ ಸ್ವಪ್ನಾನಂತರದಿ ಕರ್ಣಿಕೆಯಲ್ಲಿ ಜಾಗ್ರತಿಯು ಮಧ್ಯದೊಳು ಸುಷುಪ್ತಾವಸ್ಥೆಯು ಸುವ್ವಿ 42 ಉರದಲ್ಲಿ ಮುತ್ತಿನವರ್ಣ ಎರಡಾರುದಳಕಮಲದಿ ವಿರುಪಾಕ್ಷನಭಿಮಾನಿ ನರಸಿಂಹನ ಪೂಜಿಪ ಸುವ್ವಿ ನರಸಿಂಹನ ಪೂಜಿಪ ಈ ಲೋಕ ಮಹರ್ಲೋಕ ದ್ವಾದಶದಳದಿ ಕಲಾಭಿಮಾನಿಗಳಿಹರು ಸುವ್ವಿ43 ಕಂಠದಲಿ ಎರಡೆಂಟರಷ್ಟದಳಕಮಲ ಕಮಲ ರಕ್ತವರ್ಣ ಜನಲೋಕವು ಸುವ್ವಿ ಜನಲೋಕದಲಿ ಶೇಷ ಸಂಕರ್ಷಣ ಮೂರ್ತಿಯನು ನಿತ್ಯ ಸ್ತುತಿಸುತ ತಾ ಭೃತ್ಯನಾಗಿಹನೊ ಸುವ್ವಿ 44 ಭ್ರೂಮಧ್ಯ ದ್ವಿದಳಕಮಲ ಉಂಟೊಂದಿಲ್ಲಿ ತಾ ಮಧುಪುಷ್ಪದಂತೆ ಪೊಳೆಯುತ್ತಿಹುದು ಸುವ್ವಿ ತಪೋಲೋಕವೆನ್ನು ಸುವ್ವಿ 45 ಶಿರದೊಳು ಸಾವಿರದಳಕಮಲವು ವಜ್ರದ ಕಲಾ ವರುಣ ಮಂಡಲವಿದೆ ಸತ್ಯಲೋಕವೆ ಸುವ್ವಿ ಉತ್ತಮೋತ್ತಮ ಶ್ರೀರಂಗನ ಪೂಜಿಸುವನು ಸುವ್ವಿ 46 ಅಷ್ಟಾಕ್ಷರU
--------------
ಉರಗಾದ್ರಿವಾಸವಿಠಲದಾಸರು
ನಂಬಿದ್ಯಾ ಮನವೇ ನಂಬಿದ್ಯಾ ಪ ನಂಬಿದ್ಯ ಮನವೆ ಕೊಂಡಾಡಿದ್ಯ ಆನಂದ ತೀರ್ಥರ ಮತವೆಸತ್ಯವೆಂದು ಅ.ಪ ಇಂದಿರೆ ರಮಣನೆ ಪರದೈವವೆಂದು ಬಂಧನಾದಿ ಅಷ್ಟಕರ್ತೃತ್ವ ಆತನದೆಂದು ಕುಂದುಕೊರತೆಗಳಿಲ್ಲದ ಸರ್ವೇಶ ಶಾಶ್ವತನೆಂದು ನಂದ ಕಂದನು ಸಾನಂದ ಗುಣ ಪೂರ್ಣ ಸ್ವರತನೆಂದು 1 ನಾರಾಯಣನೆ ಸರ್ವೋತ್ತುಮನು ಎಂದು ಸಿರಿ ಅಜಶಿವರೆಲ್ಲ ಹರಿಯಕಿಂಕರರೆಂದು ಮುರವೈರಿ ಅಂತಃ ಬಹಿರ್ವ್ಯಾಪ್ತನು ಎಂದು ಶಾರಂಗ ಪಾಣಿಯೆ ಸರ್ವಾಂತರ್ಯಾಮಿಯೆಂದು 2 ಸಾಕಾರಸರ್ವೇಶ ನಿರ್ವಿಕಾರ ನೆಂದು ಓಂಕಾರ ವಾಚ್ಯನೆ ಸರ್ವಾಧಾರ ಸರ್ವಗನೆಂದು ಅಕಾರಾದಿ ಸರ್ವವರ್ಣಸ್ವರ ಶಬ್ದ ವಾಚ್ಯನುಎಂದು ಅಜ ಅಪ್ರಮೇಯನೆಂದೂ3 ವೇದಗೋಚರ ತಾವೇದಾತೀತನೆಂದು ವಿಧಿಸಿರಿ ವಂದಿತ ಸಾಕಲ್ಯದಿ ಅವಾಚ್ಯನೆಂದು ಮಧುಸೂಧನನು ಚಿನ್ಮಯ ವಪುಷನೆಂದು ಭೇದವಿಲ್ಲದ ರೂಪ ಗುಣಕ್ರಿಯ ಅವಯವನೆಂದು4 ನಾಶರಹಿತ ಕೇಶವನೊಬ್ಬ ಆರ್ತಿವರ್ಜಿತ ನೆಂದು ಕ್ಲೇಶರಹಿತ ವಾಸುದೇವನು ವಿಧಿನಿಷೇಧ ವರ್ಜಿತನೆಂದು ವಿಶ್ವೇಶ ಸರ್ವತಂತ್ರ ಸ್ವತಂತ್ರನು ಸಾರ್ವಭೌಮನು ಎಂದೂ ವಾಸುಕಿ ಶಯನನು ಲೀಲೆ ಗೋಸುಗ ವಿಹಾರಮಾಳ್ಪಾನೆಂದು5 ಪುರುಷ ಸೂಕ್ತ ಪ್ರತಿಪಾದ್ಯ ಅಪ್ರಾಕೃತನೆಂದು ವರಗಾಯತ್ರ್ಯಾದಿ ಸರ್ವಮಂತ್ರ ಪ್ರತಿಪಾದ್ಯನೆಂದು ಅಪವರ್ಗ ಗತಿದಾಯಕನೆಂದೂ ಪಾದ ಭಜನೆಯೆ ಸಾರವೆಂದೂ 6 ವಿರಂಚಿ ಜನಕನೆ ಸರ್ವತ್ರ ಸರ್ವರಲಿದ್ದು ಸರ್ವಕಾರ್ಯ ಕಾರ್ಯಗಳನು ಮಾಡಿ ಮಾಡಿಸುವನೆಂದು ಸರ್ವಜೀವರಿಗೆ ಕರ್ಮಗಳುಣಿಸಿ ತಾ ನಿರ್ಲೇಪನೆಂದೂ ಖರಾರಿರೂಪಗಳೆಲ್ಲ ಅನಾದಿ ಶುಕ್ಲಶೋಣಿತವರ್ಜಿತವೆಂದು7 ಲಕ್ಷ್ಮಿರಮಣನು ಪಕ್ಷಪಾತ ರಹಿತನೆಂದು ಪಕ್ಷಿವಾಹನನು ಕ್ಷರಾಕ್ಷರ ವಿಲಕ್ಷಣನೆಂದು ಲಕ್ಷ್ಮಣಾಗ್ರಜನು ಕುಕ್ಷಿಯೊಳಗೆ ಬ್ರಹ್ಮಾಂಡ ರಕ್ಷಿಪನೆಂದು ಇಕ್ಷು ಚಾಪನ ಪಿತನಚಿಂತಾದ್ಭುತನೆಂದು 8 ಹಂಸಾದಿ ಹದಿನೆಂಟು ರೂಪಗಳ ಧರಿಸಿ ಹೊರಗೆ ವ್ಯಾಪಿಸಿ ಕಂಸಾರಿಸಕಲವ ನಡಿಸೀನಡಿಸುತ ಸುಖದುಃಖಗಳ ಲೇಶಯೋಗ್ಯತೆ ಮೀರಗೊಡದಲೆ ಉಣಿಸುವನೆಂದು 9 ಪತಿತ ಪಾವನ ಪರಾವರೇಶ ತ್ರಿಗುಣವರ್ಜಿತನೆಂದು ಸತತ ಸ್ವಪ್ನ ಸುಷಪ್ತಿ ಜಾಗ್ರತೆ ಮೋಕ್ಷಾ ವಸ್ಥೆಗಳಲಿ ವಿಶ್ವ ತ್ವೆಜಸ ಪ್ರಾಜ್ಞ ತುರ್ಯರೂಪಾದಿಂದ ಮತಿ ಪ್ರೇರಕನಾಗಿ ಕಾದುಕೊಂಡು ಪೊರೆಯುವ ನೆಂದು10 ಸತ್ಯವತಿ ಸುತನು ಸತ್ಯ ಸಂಕಲ್ಪನೆಂದು ಆತನೆ ನಿತ್ಯಾನಿತ್ಯ ಜಗದೀಶನಂತರ್ಯಾಮೀಯೆಂದು ಮುಕ್ತಾ ಮುಕ್ತರ ನಾಥ ಮುಖ್ಯ ಬಿಂಬನು ಚತುರಾನನಾದಿಗಳಿಗೆಲ್ಲಾ ಎಂದು11 ಅನಿಲ ಜೀವೋತ್ತಮ ಹರಿಯ ಪ್ರಥಮಾಂಗ ಅಪರೋಕ್ಷ ಪ್ರಭುವು ಅಣು ಮಹದ್ಘನ ರೂಪ ಚರಿತ ಭಾರತೀಶ ವಾಣೀ ಪತಿಯ ಪದಾರ್ಹ ವಾತದೇವನು ಎಂದು 12 ಹನುಮ ಭೀಮ ಮಧ್ವ ಮೂರಾವತಾರದ ದೇವ ಅನುಪಮ ಬಲನಿಸ್ಸೀಮ ಪುರುಷತೇಜ ತೃಣ ಮೊದಲಾದ ಸರ್ವಜೀವರಲ್ಲಿದ್ದು ಅವರ ಹರಿಯಾಜ್ಞೆಯಂತೀವನೆಂದೂ 13 ದ್ವಾತ್ರಿಂಶಲ್ಲಕ್ಷಣ ಸಂಪನ್ನ ಗುರು ಮಧ್ವನೆಂದು ಆತನೇಲೋಕಕ್ಕೆಲ್ಲ ಗುರವು ಎಂದು ಈತ ಸಕಲಪೇಳಿದ ಮಾತಿಗೆ ಸರಿಯಿಲ್ಲವು ಎಂದು ಪ್ರೀತಿಯಿಂದಲಿ ಭಜಿಪ ಭಕ್ತಗೇನೆ ಮುಕ್ತಿಯೆಂದು 14 ಹರಿಯ ಮತವೆ ಹನುಮನ ಮತವು ಎಂದು ಸಿರಿ, ವಿರಂಚಿ ಪವನ ವಾಣಿ ಭಾರತೀಯರಲ್ಲಿ ಗರುಡ ಶೇಷ ಶಿವ ಶಕ್ರಾದಿಸರ್ವರೊಳಗೆ ತಾರತಮ್ಯ ಪಂಚ ಭೇದವು ಸತ್ಯವೆಂದು 15 ಭಾರತಿ ಪತಿಯದ್ವಾರವೆ ಹರಿಯು ಸ್ವೀಕರಿಪ ನೆಂದು ಮುರಾರಿಯ ಒಲುಮೆಗೆ ಜ್ಞಾನಯುತಭಕ್ತಿಯೆ ಸಾಧನವೆಂದು ಧರೆಯೊಳಗೆ ಹರಿನಾಮ ಸ್ಮರಣೆಗೆ ಸರಿಯಿಲ್ಲವು ಎಂದು ಮಾರಮಣನ ಅನುಗ್ರಹವೆ ಮೋಕ್ಷದಾಯಕ ವೆಂದು 16 ಅರಿಷಡ್ವರ್ಗಗಳಳಿಯುವುದೆ ವೈರಾಗ್ಯ ಮಾರ್ಗವೆಂದು ಗುರುವಿನ ಕರುಣವೆ ಜ್ಞಾನಕ್ಕೆ ಕಾರಣವೆಂದು ಸಾರಮಾರ್ಗಕ್ಕೆ ಸಾಧುಗಳ ಸಂಗವೆ ಮುಖ್ಯವೆಂದು ನೀರಜಾಕ್ಷಗೆ ಸರಿ ಮಿಗಿಲು ಇಲ್ಲವೆಂದು 17 ಜೀವ ಈಶಗೆ ಭೇದ ಈಶ ಜಡಕೆ ಭೇದ ವೆಂದು ಜೀವ ಜೀವಕೆ ಭೇದ ಜಡ ಜಡಕೆ ಭೇದವೆಂದು ಪರಿ ಪಂಚ ಭೇದವೆಂದು ಸಾವಧಾನದಿ ತಿಳಿದು ಜಗತ್ಸತ್ಯವೆಂದು ಧೃಡದಿ 18 ಸುರರೊಳುನರರೊಳು ಅಸುರರೊಳು ಎಲ್ಲೆಲ್ಲು ತಾರತಮ್ಯವು ಅನಾದಿಯಿಂದಲಿ ಇರುತಿಹುದೆಂದು ಸ್ವರೂಪಾನಂದಾವಿರ್ಭಾವವೆ ಮುಕ್ತಿಯೆಂದು ಅರವಿಂದನಾಭಗೆ ಸರ್ವರು ಸದಾದಾಸರೆಂದು 19 ಧನಕನಕ ವನಿತಾದಿಗಳೆಲ್ಲ ಹರಿಗೆ ಅರ್ಪಿತ ವೆಂದು ಏನೇನು ಮಾಡುವುದೆಲ್ಲ ಶ್ರೀ ಕೃಷ್ಣನ ಸೇವೆಯೆಂದು ದೀನ ಜನ ಮಂದಾರನಾಧೀನ ಸುಖದುಃಖಾಗಳೆಂದು ಏನು ಬೇಡದೆ ಹರಿಯ ಸತತನೆನೆವೋದೆ ಸಾಧನ ವೆಂದು20 ನಾಕೇಶ ಜಯತೀರ್ಥ ವಾಯ್ವೂಂತರ್ಗತನಾದ ಶ್ರೀಕೃಷ್ಣ ವಿಠಲಾನೆ ಮಮಸ್ವಾಮಿ ಸರ್ವಸ್ವವೆಂದು ಸಕಲ ಕರ್ಮಗಳರ್ಪಿಸುತ ತ್ರಿಕರಣ ಶುದ್ಧಿಯಿಂದಲಿ ಮಾಕಳತ್ರನ ಸತತ ಭಜಿಸುತ್ತಿರಬೇಕು ಎಂದು 21
--------------
ಕೃಷ್ಣವಿಠಲದಾಸರು