ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಮಣನೆ ಎನ್ನುದ್ಧಾರ ಮಾಡುವ ಪೂರ್ಣ ಭಾರವೇ ನಿನಗಿಹದೊ ಹೇರನೊಪ್ಪಿಸಿದಂಥ ಹಳಬ ವರ್ತಕಗೆ ಸ- ರ್ಕಾರ ಸುಂಕಗಳುಂಟೆ ವಾರಿಜ ನಯನ ಪ. ಆವ ಕಾಲಕು ಲಕ್ಷ್ಮೀಭೂವರ ತವ ಪಾದ ಸೇವಕನಾಗಿಹೆನು ನಿನ್ನಲಿ ಮನೋ- ಭಾವವಿರಿಸಿಹೆನು ನನಗುಸುರಲೇನು ಜೀವನಕೆ ನೀನಿತ್ತ ಕರ್ತು- ತ್ವಾವಲಿಗಳಿಂದೇನ ಮಾಳ್ಪದ ನೀ ವಳಗೆ ನಿಂತಿದ್ದು ನಿನ್ನ ಕ- ಲಾವಿಶೇಷದಿ ನಡಸಿ ನಟಿಸುವಿ1 ದೇಹವ ಧರಿಸಿಹೆನು ಇದರ ಸ- ನ್ನಾಹವಾಗಿರುವುದನು ಸುಖದು:ಖಗಳನು ಚೋಹಗೊಳದನುಭವಿಸಿ ಸುಖ ಸಂ- ದೋಹಗೊಳಲ್ಯಾಡುತ್ತಿರೆ ಮುಂ- ದಾಹ ಬಾಧೆಯ ಬಿಡಿಸಹಮ್ಮಮ ಮೋಹ ಬಲೆಯನು ಕಡಿದು ಸಲಹುವ 2 ಜನನಿ ಜನಕ ಗೃಹ ವನಿತೆ ಒಡವೆ ಭೂಮಿ ಧನವಸ್ತ್ರ ಧಾನ್ಯಗಳು ನಾನಾ ವಿಧ ವಿನಯದಿ ಸಂಪದವು ಸ್ವರ್ಗಾದಿ ಸುಖವು ತನುಮನಗಳೊಡಗೂಡಿ ಮನ್ಮಥ ಜನಕ ನಿನಗೊಪ್ಪಿಸಿ ನಿರಂತರ ನೆನವೆ ನಿನ್ನ ಪದಾಬ್ಜಯುಗ್ಮವ ವನರುಹಾಂಬಕ ವೆಂಕಟೇಶ್ವರ 3
--------------
ತುಪಾಕಿ ವೆಂಕಟರಮಣಾಚಾರ್ಯ