ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೋಯನ್ನ ಪರಾತ್ಪರಾ - ಹರಿ ಪ ಪಾಲಿಸೊ ಬುಧಹಿತ ಫಾಲನಯನನುತ ಲೀಲಾನಟನ ಘಣಿಶೈಲ ನಿಲಯ-ಹರಿ ಅ.ಪ ಜಲಜಭವನ ನಿಜಕುಕ್ಷಿಯೊಳಿದ್ದ ಸುಲಲಿತ ವೇದಾಪಹಾರಿಯ ಕಂಡು ಜಲಜರೂಪಿನಿಂದಾ ಖಳ ಸಂಹರ ಗೈದು ಜಲಜಸಂಭವನಿಗೆ ಒಲಿದ ಮತ್ಸ್ಯಾವತಾರ 1 ಅಂದು ದೂರ್ವಾಸನ ಶಾಪದಿ ಜಗವು ಇಂದಿರೆ ಕರುಣಾವಿಹೀನದಿ ಬಲು ನೊಂದು ಕಂಗೆಡುತಲಿರೆ ಸಿಂಧುಮಥನಗೈದು ಕೂರ್ಮ 2 ಧರಣಿಯನಪಹಾರಗೈಯ್ಯಲು ಬೇಗ ಸೂಕರ ರೂಪವ ತಾಳಿ ಧರಣೀಚೋರನ ಕೊಂದ ಸರಸೀರುಹಾಂಬಕ3 ಸರಸಿಜಜನ ವರದರ್ಪದಿ ಜಗವನುರುಹಿ ತರಳನ ಬಾಧೆಗೈಸಿದ ಬಲು ದುರುಳ ಹಿರಣ್ಯಕನುರವ ನಖದಿಂದ ಸೀಳಿ ಕರುಳಮಾಲೆಯನಿಟ್ಟ ಧುರಧೀರ ನರಹರಿ 4 ಬಲಿಯ ಮೂರಡಿಭೂಮಿ ದಾನವ ಬೇಡಿ ಅಳೆದು ಈರಡಿಮಾಡಿ ಲೋಕವ ಮತ್ತೆ ಉಳಿದೊಂದು ಪಾದದಿ ಬಲಿಯ ತಲೆಯನು ಮೆಟ್ಟಿ ನಲಿದು ಗಂಗೆಯ ಪೆತ್ತ ಚೆಲುವ ವಾಮನರೂಪ5 ಚಕ್ರಾಂಶನಾದ ಕಾರ್ತಿವೀರ್ಯನ ಭುಜ ಚಕ್ರದೊಡನೆ ದುಷ್ಟ ಭೂಪರ ಅತಿ ಅಕ್ರಮವನು ಕಂಡು ವಿಕ್ರಮಾನ್ವಿತ ನೃಪ ಚಕ್ರವ ಮುರಿದ ಮುನಿಚಕ್ರರಕ್ಷಕ ರಾಮ 6 ಕ್ರೂರ ರಾವಣ ಕುಂಭಕರ್ಣರ ಬಲು ಘೋರತನಕೆ ತ್ರಿವೇಶರ ದೊಡ್ಡ ದೂರ ಕೇಳುತ ಮನುಜಾಕಾರವ ಧರಿಸಿ ದೈತ್ಯ ವೀರರ ಮಡುಹಿದ ಶ್ರೀರಾಮ ಮೂರುತಿ 7 ಬಲಭದ್ರನೆಂಬುವ ನಾಮದಿ ಧುರದಿ ಹಲ ನೇಗಿಲುಗಳನು ಹಸ್ತದಿ ಪಿಡಿದು ಬಲವಂತರಾದ ದೈತ್ಯಕುಲವ ತರಿದು ದಿವಿಜ ಕುಲವ ಸಂರಕ್ಷಿಸಿದ ಜಲಧರನಿಭಚೇಲ 8 ಭಾರ ಸೃಷ್ಟೀಶನಲ್ಲಿ ದೂರಿಡೆ ಬಲು ಭ್ರಷ್ಟ ಕೌರವ ಯುಧಿಷ್ಠಿರಗೆ ವೈರ ಪುಟ್ಟಿಸಿ ಭೂಭಾರ ಮಟ್ಟುಮಾಡಿದ ಕೃಷ್ಣ 9 ಕಲಿಯಿಂದ ಕಿಡೆ ನಿಜಧರ್ಮವು ಬಹು ಖಳರಿಂದ ವ್ಯಾಪಿಸೆ ಲೋಕವು ಆಗ ಲಲಿತ ತೇಜಿಯನೇರಿ ಕಲುಷಾತ್ಮಕರ ಕೊಂದು ವಿಲಸಿತ ಧರ್ಮವನು ಸಲಹಿದ ಕಲ್ಕಿರೂಪ 10 ಗಿರಿಜಾವಿವಾಹದಿ ತ್ವಷ್ಟ್ರನ ಶಾಪ ಶರಧಿಯೀಂಟಿದ ಮುನಿಗೈದಲು ಬೇಗ ವರವ್ಯಾಘ್ರ ಗಿರೀಶನೆ ಶರಣೆಂದ ಮುನಿಪಗೆ ವರವಿತ್ತು ಸಲಹಿದ ವರದವಿಠಲಹರಿ11
--------------
ವೆಂಕಟವರದಾರ್ಯರು