ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಿನ ದಿನ ಹರಿಕೃಷ್ಣಯೆನುತಿರೆ ಮನುಜನ ಮನವೆ ವೈಕುಂಠವೆಂದೆನಿಸುವುದು ಪ ನೆನೆಯುವ ಭಕ್ತನ ಕಿವಿಯಲಿ ಕೊಳಲಿನ ದನಿಜನಿಪುದು ಕಂಬನಿ ಮಿನುಗುವುದು ಅ.ಪ ಪೊಡವಿ ಪತಿಯ ಎಡತೊಡೆಯೊಳಿದ್ದಾ ಮುದ್ದು ಹುಡುಗನ ಬಲತಾಯಿ ಪಿಡಿದೆಳೆಯೇ ಕಡು ದುಗುಡದಿ ಶಿಶು ಅಡವಿಯೊಳಗೆ ಸಿರಿ ಯೊಡೆಯನ ಕಂಡು ಕೊಂಡಾಡಿದನು 1 ದ್ಯೂತದೊಳೆಲ್ಲವ ಸೋತರ ಸತಿಯಳ ಘಾತಿಸಿ ಸೀರೆಯ ಸೆಳೆದಾಗ ಭೀತಿಯಿಂದಲಿ ಪರಂಜ್ಯೋತಿ ಕೃಷ್ಣಾಯೆನೆ ಪ್ರೀತಿಯೊಳಕ್ಷಯ ವರವಿತ್ತಾ ಕೃಷ್ಣಾ2 ಕೂಗಿದೊಡನೆ ತ್ವರೆಯಾಗಿ ಬರುವ ನಮ್ಮ ನಾಗಶಯನ ಮಾಂಗಿರಿಪತಿಯ ರಾಗದಿ ಪೂಜಿಸಿ ವಂದಿಸಲವನನು- ರಾಗದಿ ನರ್ತಿಪನೆಡಬಲದಲಿ ರಂಗಾ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್