ಎಲ್ಲಿಂದ ಬಂದಿದ್ದೆಲೆ ಖೋಡಿ ನೀ
ನೆಲ್ಲಿಗೆ ಹೋಗ್ತಿದ್ದಿ ತ್ವರೆಮಾಡಿ ಪ
ಕಲ್ಲುಮುಳ್ಳೆನ್ನದೆ ಮುಂದೆ ನೋಡಿ ಜರ
ನಿಲ್ಲದೆ ಹೋಗ್ತಿದ್ದಿ ಓಡೋಡಿ ಅ.ಪ
ಏಳುಗೇಣಿನ ಕುದುರೇರಿದ್ದಿ ಭವ
ಮಾಲೆ ಕೊರಳಿಗೆ ಹಾಕಿದ್ದಿ
ಮೂಲ ಲಗಾಮವೆ ತೆಗೆದಿದ್ದೀ ನೀ
ಬೀಳುವ ಎಚ್ಚರ ಮರೆತಿದ್ದಿ 1
ಶೀಲ ಸನ್ಮಾರ್ಗವ ಬಿಟ್ಟಿದ್ದಿ ಮಹ
ಕಾಳು ಕತ್ತಲೆಹಾದ್ಹಿಡಿದಿದ್ದಿ
ಕಾಲನಾಳಿನ ಕೈಗೆ ಸಿಗುತಿದ್ದಿ ಬಹು
ಗೋಳಿನೊಳಗೆ ಹೋಗಿ ಬೀಳುತಿದ್ದಿ2
ಅಸ್ಥಿರ ಕುದುರೆ ಹತ್ತಿದ್ದಿ ಬಲು
ಮಸ್ತಿಲಿಂದ ಕಣ್ಣು ಮುಚ್ಚಿದ್ದಿ
ಪುಸ್ತಿಯಿಲ್ಲದ ದಾರ್ಹಿಡಿದಿದ್ದಿ ಮುಂದೆ
ಸ್ವಸ್ಥತೆ ನೀ ಹ್ಯಾಂಗೆ ಪಡೀತಿದ್ದಿ 3
ಯಾರನ್ನ ಬೇಡಿ ಬಂದಿದ್ದಿ ನೀ
ನಾರಸೇವೆ ಕೈಕೊಂಡಿದ್ದಿ
ದಾರಿ ತಪ್ಪಿದಾರ್ಹಿಡಿದಿದ್ದಿ ಸುವಿ
ಚಾರ ಪಥವ ಧಾರೆರೆದಿದ್ದಿ 4
ಬಂದಕಾರ್ಯವನು ತೊರೆದಿದ್ದಿ ಮನ
ಬಂದಂತೆ ಕುಣಿಕುಣಿದಾಡುತಿದ್ದಿ
ತಂದೆ ಶ್ರೀರಾಮನ ಮರೆತಿದ್ದಿ ಈ
ಬಂಧುರಸಮಯ ವ್ಯರ್ಥ ಕಳೀತಿದ್ದಿ 5