ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ನಿರ್ದಯನಾಗಲಿನ್ನೇನು ಗತಿಯೋ ದೀನಜನಮಂದಾರ ಜಾನಕೀ ಮನೋಹರ ಪ ಪಿತ ಮಾತೆಯರ ಸುತರ ಹಿತದಿಂದ ನೋಡದಿರೆ ಕ್ಷಿತಿಯೊಳಗಿತರರು ಹಿತದಿಂ ನೋಡುವರೊ ಪಿತ ನೀನೆ ಮೂಜಗಕೆ ನುತಿಸುವ ಭಕ್ತರ ಸ್ಥಿತಿ ವಿಚಾರಿಸದಿರೆ ಗತಿಯೇನು ಮುಂದೆ 1 ಲೋಕ ಎರಡೇಳು ನೀ ಕರುಣದೊಡಲೊಳಿಟ್ಟು ಜೋಕೆ ಮಾಡುವಿ ನಿನ್ನೊಳ್ಯಾಕೆ ದಯವಿಲ್ಲ ಬೇಕೆಂದು ನಿನ್ನಪಾದ ಏಕಭಕ್ತಿಲಿ ನುತಿಪೆ ಮೂಕನಾಗಲು ಬೇಡ ಶ್ರೀಕರನೆ ದಯಮಾಡೊ 2 ನರಜನ್ಮವಿತ್ತೆನಗೀಪರಿ ಬವಣೆ ಬರಲಿಕ್ಕೆ ಕರುಣವನಿತು ನಿನಗೆ ಬರಲಿಲ್ಲವೇನೋ ಹರಿಯೆನ್ನ ಬರೆಹ ಹೀಗೆ ಬರೆದದ್ದೇ ತಪ್ಪು ನೀ ಮರೆಯಾದರೆ ಬಿಡದಯ್ಯಾ ತ್ವರೆಬಾರೋ ಶ್ರೀರಾಮ 3
--------------
ರಾಮದಾಸರು