ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಪಾಲಿಸುವದಾಗದೇ|ಸಿರಿ ರಮಣಾ| ಪ್ರಸನ್ನ ವಿಮಲ ಅತುಳ ಶೇಷಗಿರಿಯ ವಾಸಾ ವೆಂಕಟೇಶಾ ಪ ದುರುಳ ದೈತ್ಯನ ಕರುಳ ಬೆರಳ ಸರಳ ಉಗುರಿನಿಂದ ವಿರಳ| ವಿರಳ ಮಾಡಿ ಪೊಸರಂತೆ ಕೊರಳಿಗಾಕಿ ಮರಳೆ| ತರಳಗೊಲಿದು ಹರಣಗಾಯ್ದೆ|ಆದೇಶದಲ್ಲಿ| ಅರಸುತನುವ ಕೊಟ್ಟು ನಿಲಿಸಿದೇ|ಕ್ಷಿತಿಯೊಳಗ| ಪರಮ ನಿಜ ಭಕ್ತನೆನೆಸಿದೇ 1 ನೆಗಳಿ ಬಂಧನ ಬಿಡೆ ಹರಿಗಳರಿಗಳ ಸಂಗಡಿಭಗಳ ಸಮೂ| ಪತಿ ನೀರ್ಗುಡಿಯೆ ಪೋಗಲಾಗಳೆ| ನೆಗಳಿ ಪಿಡಿಯೆ ಶ್ರೀ ಪಾದಗಳ ಯುಗಳ ನೆನಿಯ ಕೇಳದೇ| ಸಕಲ ಪಕ್ಷಿಗಳ ಶ್ರೇಷ್ಠ ನಿಲ್ಲದೊದಸಿದೇ|ಕರುಣದಿಂದ ಸುಗತಿ ಕೊಟ್ಟು ಜನಮ ಹರಿಸಿದೇ2 ಇಳೆಯ ಮದದಿ ದ್ರೌಪತಿಯನು| ತಿಳಿಯದೆಳಿಯೆ ಕಳಿಯೆ ಸೀರೆಯಾ| ಕಳಿಯೆ ಮಾನ ವಿಜಯಗೆಳೆಯ ಇಳೆಯ ಭಾರರ್ಬಳಿಯೆ| ಸುಳಿಯೆ ದಾಟಿಸೆನುತ ನುತಿಸೆ ತ್ವರಿತದೀ|ನೀನು ಸಭೆ| ಯೊಳಗ ಪೊರಯಿಸಿದೇ ವಸ್ತ್ರದೀ|ಮಹಿಪತಿ| ನಂದನೊಡೆಯ ವ್ಯಾಳ್ಯಕ್ಕೊದಗಿದೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವನಜನಾಭನ ಅಡಿಯು ಮನುಜಾನೀಪತಿಯು ಪ ಅನುದಿನದೊಳೈತಂದು ಘನಸಿಂಧುಶಯನನು ಮಿಂದು ದ್ವಾದಶಿಯೊಳಿಂದು ಸನುಮತದಿಯರ್ಪಿಸಿದ ಎಡೆಯನು ಘನತರದ ಸಂಭ್ರಮದಿ ಭುಂಜಿಸಿ ಜನಿಸಿ ಭಕುತಿಯನೆನ್ನ ಮನದಿ ಪ್ರ- ಸನ್ನನಾದನು ಎನಿತು ಪೇಳಲಿ 1 ರಕ್ಕಸರಿಗತಿ ವೈರಿ ಮಿಕ್ಕಾನತರ ಸಹಕಾರಿ ಶ್ರೀಹರಿ ಮುರಾರಿ ತಕ್ಕ ವಿಜಯಗೆ ಸಾರಥ್ಯಾಗಿ ಇಕ್ಕರಿಸಿ ಕುರುಪತೀಯನನ್ವಯ ಅಕ್ಕರದಿ ದ್ರುಪದಸುತೆಯ ಸಲಹಿ ರುಕ್ಮಿಣೀಶನು ರಕ್ಷಿಪನು ಸಲೆ 2 ಕರಿವರದ ಶಿರಿಲೋಲಾ ಪರಮಾತ್ಮ ಶ್ರೀಘನಲೀಲಾ ಜರರಹಿತ ವಿಮಲಾ ನಿರುತದೀಪರಿ ಸ್ಮರಿಪ ನರನಿಗೆ ಕರುಣಸಾಗರನಾಗಿ ಸುರವರ ತ್ವರಿತದೀವನು ಹರಸಿ ವರಗಳ ಹರಗೊಲಿದ ನರಸಿಂಹವಿಠಲಾ 3
--------------
ನರಸಿಂಹವಿಠಲರು