ಗಣೇಶಸ್ತುತಿ
ಕರುಣಿಸೋ ಗೌರೀಕರಜ ಪ
ಕರುಣಾಳು ಕ್ಷಿಪ್ರ ಮನದ
ಕಾಯ ಬೇಗದಿ ಅ.ಪ
ಕಾಯ ಜಾತ
ಅರಿವರ್ಗಗಳಿಗೆ ವಿಘ್ನವ
ತ್ವರದಲ್ಲಿ ಇತ್ತು ಶುಭಕೆ ಮಾರ್ಗವ 1
ನರಭಾವದಿಂದ ನಿನ್ನ
ಮರೆತರೆ ನೀನು ಎನ್ನನು
ಜರಿದರೆ ಪೊರೆವೊರ್ಯಾರೊ ನಿರುತದಿ 2
ಮರುದಂಶ ಮಧ್ವಮುನಿಯ
ವರಶಾಸ್ತ್ರ ಪೇಳ್ವ ಬುದ್ಧಿಯ
ವರವಿತ್ತು ಬಂದ ವಿಘ್ನವ ಕಳೆಯುತ 3
ವರಪಾಶಪಾಣಿ ಎನ್ನ
ದುರಿತಾಶಪಾಶ ಛೇದಿಸಿ
ಹರಿ ಭಕ್ತಿ ಪಾಶದಿಂದ ಬಿಗಿಯುತ 4
ಕರಿವಕ್ತ್ರಶಂಕೆ ಎಂಬ
ಕರಿಯನ್ನು ಅಂಕುಶದಲಿ
ಮುರಿಬಿಂಕ ಶಂಕಿಸದೆ ವಿದ್ಯವ 5
ಸಿರಿ ವಾಣಿ ಚಂಡಿಕಾದ್ಯರು
ನಿರುತದಿ ಇದ್ದು ವರವ ಬೀರ್ವರು 6
ನರವಾಹ ವಾಯುಜರಿಗೆ
ಸರಿ ಎಂಬೋ ಜ್ಞಾನದಿ
ಪಾದ ತೋರಿ ಬೇಗನೆ 7