ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮ ನಿವೇದನೆ ಅನಾಥ ಬಂಧೋ ಆದಿ ಪುರುಷ ಪ. ಅನಾಥ ಬಂಧೋ ಗುಣ ಗಣ ಸಿಂಧೋ ಮನಸಿಜ ಜನಕನೆ ಮರೆಯದಿರೆಂದೂ ಅ.ಪ. ಅನುಚಿತ ಕರ್ಮದ ಬಲೆಯಲಿ ಸಿಕ್ಕಿ ದಿನಗಳ ಕಳೆದನು ಮನೆಯಲ್ಲಿ ತನುವಿನ ಸ್ಥಿತಿಯನು ಪೇಳಲೇನು ಶ್ರೀ- ವನಜ ಭವಾರ್ಚಿತ ಒದಗುವಿ ಸಮಯದಿ 1 ವಿಧಿ ನಿಮಯಗಳನುಸರಿಸದೆ ಕ- ಣ್ಣಿದಿರಲಿ ಕಾಂಬುದ ಗ್ರಹಿಸದೆ ಮಧುಮಥನನೆ ತ್ವತ್ಪರ ಪದ್ಮವ ನಂ- ಬಿದೆ ಕರುಣೋದಧಿ ಕಾಯೊ ಬೇಗದಲಿ 2 ಸರ್ವಭಾರವು ನಿನ್ನ ಮೇಲಿಹುದು ಮ ತ್ತೋರ್ವಗುಂಟೆ ನಿನ್ನಯ ಬಿರುದು ಮರ್ವನೀಯದೆ ಮನದಲ್ಲಿರು ವೆಂಕಟ ಪರ್ವತೇಂದ್ರ ಪೂರ್ಣಾನಂದಪ್ರದ 3
--------------
ತುಪಾಕಿ ವೆಂಕಟರಮಣಾಚಾರ್ಯ