ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀದ ವಿಠಲ ಸರ್ವಾಂತರಾತ್ಮಾ ನೀ ದಯದಿ ಒಲಿದು ನಿತ್ಯದಲಿ ಕಾಪಾಡುವುದು ಪ ಚಿಕ್ಕ ತನದಲಿ ತಂದೆತಾಯಿಗಳು ಒಲಿದು ಪೆಸ ರಿಕ್ಕಿ ಕರೆದರು ನಿನ್ನ ದಾಸನೆಂದೂ ಮಕ್ಕಳನು ತಾಯ್ಸಲಹುವ ತೆರದಿ ಸಂತೈಸು 1 ಶುಕನಯ್ಯ ನಿನ್ನ ಪದಭಕುತಿ ತ್ವತ್ಕಥಾಶಾಸ್ತ್ರ ಯುಕುತಿವಂತರ ಸಂಗಸುಖವನಿತ್ತು ವಕಿತನಯ ನಿನ್ನವರ ಮುಖದಿಂದ ಪ್ರತಿದಿನದಿ 2 ಮಾತರಿಶ್ವಪ್ರಿಯ ಸುರೇತರಾಂತಕನೆ ಪುರು ಹೂತನಂದನಸಖ ನಿರಾತಂಕದಿ ನೀ ತೋರು ಮನದಿ ಸಂಪ್ರೀತಿಯಿಂದಲಿ ಒಲಿದು ಹೋತಾಹ್ವಗುರು ಜಗನ್ನಾಥ ವಿಠಲ ಬಂಧು 3
--------------
ಜಗನ್ನಾಥದಾಸರು